ಸಾವಿಗೂ ನೆರವಾದ ಇನ್ಸ್ಟಾಗ್ರಾಮ್, ಮಲೇಶಿಯಾದಲ್ಲಿ ನಡೆದ ದುಃಖಕರ ಘಟನೆ!

0
146

ನ್ಯೂಸ್ ಕನ್ನಡ ವರದಿ (16-5-2019): ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಇನ್ಸ್ಟಾಗ್ರಾಮ್ ಫೋಟೋಗಳನ್ನು ಶೇರ್ ಗೆಳೆಯರೊಂದಿಗೆ ಶೇರ್ ಮಾಡಲು ಅನುಕೂಲವಾಗಿದೆ. ಇದರಲ್ಲಿ ಅಭಿಪ್ರಾಯ ಪಡೆದುಕೊಳ್ಳಲು ಪೋಲ್ ಕೂಡಾ ನಡೆಸಲಾಗುತ್ತದೆ. ತಾನು ಬದುಕಿರಬೇಕೋ ಅಥವಾ ಸಾಯಬೇಕೋ ಎಂದು ತನ್ನ ಇನ್‌ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದು ಅದರಲ್ಲಿ ಬಂದ ಅಚ್ಚರಿಯ ಫಲಿತಾಂಶದಿಂದ ನೊಂದ ಅಪ್ರಾಪ್ತ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಬಾಲಕಿಯೊಬ್ಬಳು ತನ್ನ ಮೇ 13ರಂದು ಇನ್‌ಸ್ಟಾಗ್ರಾಮ್ ಹಿಂಬಾಲಕರಿಗೆ ನಾನು ಸಾಯಬೇಕೇ ಅಥವಾ ಬದುಕಿರಬೇಕೆ ಎಂದು ಪ್ರಶ್ನೆ ಮಾಡಿದ್ದಾಳೆ. ಇದಕ್ಕೆ ಶೇಖಡ 69ರಷ್ಟು ಹಿಂಬಾಲಕರು ನೀನು ಸಾಯುವುದೇ ಉತ್ತಮ ಎಂದು ವೋಟ್ ಮಾಡಿದ್ದಾರೆ. ಇದರಿಂದ ಮನನೊಂದು ಬಾಲಕಿ ಎತ್ತರದ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಮಲೇಶಿಯಾ ಪೊಲೀಸರು ತಿಳಿಸಿದ್ದಾರೆ. ಇನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪವನ್ನು ಇನ್ಸ್ಟಾಗ್ರಾಮ್ ಫಾಲೊವರ್ಸ್ ಎದುರಿಸುತ್ತಿದ್ದಾರೆ. ಮಲೇಶಿಯಾದಲ್ಲಿ ಕಾನೂನಿನ ಪ್ರಕಾರ ಅಪ್ರಾಪ್ತರಿಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಸಾಬೀತಾದರೆ ಅಂತಹವರಿಗೆ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ಅಥವಾ 20 ವರ್ಷ ಜೈಲುಶಿಕ್ಷೆ ವಿಧಿಸಲಾಗುತ್ತದೆ.

LEAVE A REPLY

Please enter your comment!
Please enter your name here