ಐಡಿಯಾ ಕೆಫೆ ಉದ್ಘಾಟನೆಯ ಪ್ರಯುಕ್ತ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಜಂಟಿ ಆಶ್ರಯದಲ್ಲಿ ವಾಮಂಜೂರಿನಲ್ಲಿ ಯಶಸ್ವೀ ರಕ್ತದಾನ ಶಿಬಿರ

0
21

ನ್ಯೂಸ್ ಕನ್ನಡ ವರದಿ ವಾಮಂಜೂರು, ಮಾರ್ಚ್ 8 : ಐಡಿಯಾ ಕೆಫೆ ವಾಮಂಜೂರು ಇದರ ಉದ್ಘಾಟನಾ ಸಮಾರಂಭದ ಪ್ರಯುಕ್ತ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ)ಜಂಟಿ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ದಿನಾಂಕ 08/03/2020ನೇ ಆದಿತ್ಯವಾರದಂದು ವಾಮಂಜೂರಿನ ಸಿಟಿ ಮ್ಯಾಕ್ಸ್ ಬಿಲ್ಡಿಂಗ್ ನಲ್ಲಿರುವ ಐಡಿಯಾ ಕೆಫೆಯಲ್ಲಿ ಯಶಸ್ವಿಯಾಗಿ ನಡೆಯಿತು.

ಐಡಿಯಾ ಕೆಫೆ ಇದರ ಉದ್ಘಾಟನೆಯನ್ನು ವಾಮಂಜೂರು ಮಸ್ಜಿದ್ ಖತೀಬರಾದ ಬಹು|ಹಸನ್ ಮದನಿ ಉದ್ಘಾಟನೆಗೈದರು.ಸೈಂಟ್ ರೈಮಂಡ್ ಕಾಲೇಜ್ ವಾಮಂಜೂರು ಪ್ರಿನ್ಸಿಪಾಲ್ ಸಿಸ್ಟರ್ ಸಾಧನರವರು ಅಧ್ಯಕ್ಷತೆ ವಹಿಸಿದ್ದರು.

ರಕ್ತದಾನ ಶಿಬಿರದಲ್ಲಿ 20 ಮಂದಿ ಪಾಲ್ಗೊಂಡು ರಕ್ತದಾನ ಮಾಡಿದರು.ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.

ಮುಖ್ಯ ಅತಿಥಿಗಳಾಗಿ ಅಮೃತ ಕ್ಯಾಟರರ್ಸ್ ನ ಓಂ ಪ್ರಕಾಶ್,ಬ್ಲಡ್ ಹೆಲ್ಪ್‌ಲೈನ್‌ ಕರ್ನಾಟಕದ ನಿರ್ವಾಹಕ ಮುಝಮ್ಮಿಲ್ ನೂಯಿ,ಮನ್ಸೂರ್ ಉಳಾಯಿಬೆಟ್ಟು,ಉದ್ಯಮಿ ಅಬುಸಾಲಿ ವಾಮಂಜೂರು,ಅರೋನ್ ಮೆಡಿಕಲ್ ನ ಅನಿತಾ ಡಿ ಸಿಲ್ವ,ಕೆ ಬಿ ಆರ್ ಅಸೋಸಿಯೇಟ್ಸ್ ಮಾಲಕ ನವಾಝ್ ಕೆ ಬಿ ಆರ್ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಕಾರ್ಯ ನಿರ್ವಾಹಕರು ಉಪಸ್ಥಿತರಿದ್ದರು.

ರಕ್ತದಾನ ಮಾಡಿದ ಸರ್ವ ಸಹೃದಯೀ ದಾನಿಗಳಿಗೂ,ಆಸ್ಪತ್ರೆ ಸಿಬ್ಬಂದಿ ವರ್ಗಕ್ಕೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಹಾಗೂ ಕಾರ್ಯಕ್ರಮದ ಯಶಸ್ವಿಗಾಗಿ ಹಗಳಿರುಲು ದುಡಿದ ಎಲ್ಲಾ ಕಾರ್ಯಕರ್ತರಿಗೂ,ಮಾಧ್ಯಮ ಪ್ರತಿನಿಧಿಗಳಿಗೂ ಸಂಘಟಕರು ಕೃತಜ್ಞತೆಯನ್ನು ತಿಳಿಸಿದ್ದಾರೆ.

ಪ್ರಕಟಣೆ:
ಮಾಧ್ಯಮ ವಿಭಾಗ:
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ)

LEAVE A REPLY

Please enter your comment!
Please enter your name here