ಮುಡಿಪುವಿನಲ್ಲಿ ರಕ್ತದಾನದೊಂದಿಗೆ ಸಂಭ್ರಮದ ಮಿಲಾದುನ್ನೆಬಿ ಆಚರಣೆ

0
215

ನ್ಯೂಸ್ ಕನ್ನಡ ವರದಿ ನವೆಂಬರ್ 10: ವಿಶ್ವ ವಿಮೋಚಕ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ 1494 ನೇ ಜನ್ಮ ದಿನಾಚರಣೆಯ ಅಂಗವಾಗಿ ಮಾದುಮೂಲೆ ಫೌಂಡೇಶನ್ ಮುಡಿಪು ,ಯೂತ್ ವೆಲ್ಫೇರ್ ಅಸೋಸಿಯೇಶನ್ ಮುಡಿಪು ಮತ್ತು ಸೈಫುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಶನ್ ಇರಾ ಇದರ ಸಂಯುಕ್ತ ಆಶ್ರಯದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಹಭಾಗಿತ್ವದೊಂದಿಗೆ ಯೇನೆಪೋಯ ಬ್ಲಡ್ ಬ್ಯಾಂಕ್ ದೇರಳರಟ್ಟೆ ಇದರ ಸಹಕಾರದೊಂದಿಗೆ ಯಶಸ್ವೀ ರಕ್ತದಾನ ಶಿಬಿರವು ಮುಡಿಪು ಜಂಕ್ಷನ್ ಇಲ್ಲಿ ನಡೆಯಿತು.

ಸಭಾ ಕಾರ್ಯಕ್ರಮವನ್ನು ಮುಡಿಪು ಗೌಸಿಯ ಜುಮಾ ಮಸೀದಿಯ ಖತೀಬರಾದ ಆಸಿಫ್ ಅಝ್ಹರಿ ದುವಾದ ಮೂಲಕ ಉದ್ಘಾಟಿಸಿದರು.ವೇದಿಕೆಯಲ್ಲಿ ಬ್ರೈಟ್ ಸಮೂಹ ಶಿಕ್ಷಣ ಸಂಸ್ಥೆ ಮುಡಿಪು ಇದರ ಅಬ್ದುಲ್ ಜಲೀಲ್ ,ತಾಲೂಕು ಪಂಚಾಯತ್ ಸದಸ್ಯರಾದ ಹೈದರ್ ಕೈರಂಗಳ ,ಬಾಳೆಪುಣಿ ಪಂಚಾಯತ್ ಸದಸ್ಯರುಗಳಾದ ಬಶೀರ್ ಹಾಗೂ ಸಿದ್ದೀಕ್ ಕೆ ಎಚ್ ,ಸಾಮಾಜಿಕ ಕಾರ್ಯಕರ್ತರಾದ ಅಬ್ದುಲ್ ರಹಿಮಾನ್ ತೋಟಾಲ್ ,ಮಾದುಮೂಲೆ ಟ್ರಸ್ಟ್ ಇದರ ಅಧ್ಯಕ್ಷರಾದ ಫಯಾಝ್ ಮುಡಿಪು ,ಮುಡಿಪು ಯೂತ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷರಾದ ಶಾಫಿ ,ಸೈಫುಲ್ ಹುದಾ ಯಂಗ್ ಮೆನ್ಸ್ ಇದರ ಅಧ್ಯಕ್ಷರಾದ ಲತೀಫ್ ,ಎಸ್ ಕೆ ಹಾಲ್ ಮುಡಿಪು ಇದರ ಮಾಲಕರಾದ ಖಾದರ್ ಹಾಜಿ ,ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ಅಧ್ಯಕ್ಷರಾದ ಸಿದ್ದೀಕ್ ಮಂಜೇಶ್ವರ ,ಖ್ಯಾತ ಲೇಖಕರಾದ ಇಸ್ಮತ್ ಪಜೀರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಅತಿಥಿಗಳು ಪ್ರವಾದಿ ಸಂದೇಶವನ್ನು ಸಾರುತ್ತಾ ಮನುಕುಲದ ಏಳಿಗೆಯು ಮಾನವೀಯ ನೆಲೆಯಲ್ಲಾಗಬೇಕಾದರೆ ಪ್ರವಾದಿಯವರ ಚಿಂತನೆಗಳನ್ನು ಇಂತಹ ಅರ್ಥಪೂರ್ಣ ಶಿಬಿರದ ಮೂಲಕ ಸಾಬೀತುಪಡಿಸಬೇಕಾಗಿದೆ ಎಂದರು.

ಸನ್ಮಾನ :- ಕಾರ್ಯಕ್ರಮದಲ್ಲಿ ರಕ್ತದಾನಕ್ಕೆ ವಿಶೇಷ ಮಹತ್ವ ನೀಡಿ ,ಪ್ರತಿಯೊಬ್ಬರನ್ನು ರಕ್ತದಾನಕ್ಕಾಗಿ ಪ್ರೇರೇಪಿಸುವ ಆಪತ್ಬಾಂಧವ ,ತಂದೆಗೆ ತಕ್ಕ ಮಗ ಎಂದೇ ಪರಿಚಿತರಾಗಿರುವ ವೃತ್ತಿಯಲ್ಲಿ ಆಂಬ್ಯುಲೆನ್ಸ್ ಚಾಲಕರಾಗಿರುವ ಅಪ್ರತಿಮ ನಿಸ್ವಾರ್ಥ ಸಮಾಜ ಸೇವಕ ,ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ ಕಾರ್ಯ ನಿರ್ವಾಹಕರಾಗಿರುವ ಅದ್ನಾನ್ ಕುಂಜತ್ತೂರು,ಸಮಾಜ ಸೇವಕರು ಪಂಚಾಯತ್ ಸದಸ್ಯರುಗಳಾದ ಬಶೀರ್ ಮುಡಿಪು,ಸಿದ್ದೀಕ್ ಕೆ.ಎಚ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇದರ ಕಾರ್ಯನಿರ್ವಾಹಕರಾದ ರಹಿಮಾನ್ ತೋಟಾಲ್ ಇವರನ್ನು ಈ ಸಂದರ್ಭದಲ್ಲಿ ಗಣ್ಯಾತಿಗಣ್ಯ ಅತಿಥಿಗಳ ಸಮಕ್ಷಮದಲ್ಲಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಶಿಬಿರದಲ್ಲಿ ಒಟ್ಟು 65 ಮಂದಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವುದರೊಂದಿಗೆ ಜೀವದಾನಿಗಳಾಗಿ ಮೆರೆದರು.ಸಂಸ್ಥೆಯ 216ನೇ ರಕ್ತದಾನ ಶಿಬಿರದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ ಕಾರ್ಯದರ್ಶಿ ನವಾಝ್ ಕಲ್ಲರಕೋಡಿ ,ಕಾರ್ಯ ನಿರ್ವಾಹಕರುಗಳಾದ ಮುನೀರ್ ಚೆಂಬುಗುಡ್ಡೆ ,ಫಯಾಝ್ ಮಾಡೂರು ,ಸಲಾಂ ಚೆಂಬುಗುಡ್ಡೆ,ಫಾರೂಕ್ ಜ್ಯೂಸ್ ರೊಮ್ಯಾಂಟಿಕ್ ,ಇಮ್ರಾನ್ ಉಪ್ಪಿನಂಗಡಿ ,ಫಾರೂಕ್ ಬಿಗ್ ಗ್ಯಾರೇಜ್ ,ಹಮೀದ್ ಪಜೀರ್ ,ಹಫೀಝ್ ಕೆ ಸಿ ರೋಡ್ ,ಹನೀಫ್ ಮುಡಿಪು ಉಪಸ್ಥಿತರಿದ್ದರು.

ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ ಕಾರ್ಯ ನಿರ್ವಾಹಕರಾದ ರಹ್ಮಾನ್ ತೋಟಾಲ್ ಸ್ವಾಗತಿಸಿ ಸಿರಾಜ್ ಪಜೀರ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here