ರಸ್ತೆ ಅಪಘಾತದಲ್ಲಿ ತನ್ನ 14 ಆಟಗಾರರನ್ನು ಕಳೆದುಕೊಂಡ ಕೆನಡಾ ಜ್ಯೂನಿಯರ್ ಹಾಕಿ ತಂಡ!

0
610

ನ್ಯೂಸ್ ಕನ್ನಡ ವರದಿ(07-04-2018): ಕೆನಡಾದ ಜೂನಿಯರ್ ಲೀಗ್ ಹಾಕಿ ಪ್ರಯಾಣಿಸುತ್ತಿದ್ದ ಬಸ್, ಲಾರಿಯೊಂದಕ್ಕೆ ಡಿಕ್ಕಿ ಹೊಡೆದಿದ್ದು ಬಸ್‍ನಲ್ಲಿದ್ದ 14 ಕ್ರೀಡಾಪಟುಗಳು ದುರ್ಮರಣಕ್ಕೀಡಾಗಿದ್ದಾರೆ.ಟಿಸ್‍ಡೇಲ್ ಸಮೀಪ ಈ ಅಪಘಾತ ಸಂಭವಿಸಿದ್ದು ಹಂಬೋಲ್ಡ್ ಬ್ರೊಂಕೋಸ್ ತಂಡದ ಸದಸ್ಯರು ಸಾವಿಗೀಡಾಗಿದ್ದಾರೆ.

ಸಾಸ್ಕಾಚೆವನ್ ಜೂನಿಯರ್ ಹಾಕಿ ಟೂರ್ನಿಮೆಂಟ್ ನಲ್ಲಿ ಭಾಗವಹಿಸುವ ಸಲುವಾಗಿ ಆಟಗಾರರು ಬಸ್ ನಲ್ಲಿ ಹೊರಟ್ಟಿದ್ದರು. ಒಟ್ಟಾರೆ 28 ಮಂದಿ ಆಟಗಾರರು ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಎಲ್ಲರೂ 16 ರಿಂದ 24 ವಯಸ್ಸಿನ ಒಳಗಿನವರು ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here