ನ್ಯೂಸ್ ಕನ್ನಡ ವರದಿ: ಮೋದಿ.. ಮೋದಿ.. ಮೋದಿ ಎಂದ ಯುವಕರಿಗೆ ಪ್ರಧಾನಿ ಮೋದಿ ಸರಿಯಾಗಿ ನಾಮ ಹಾಕಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದರು.
ಇಂದು ಕೆ ಆರ್ ಪುರಂನಲ್ಲಿ ಪ್ರಚಾರ ನಡೆಸಿದ ಬಳಿಕ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದರು. ದೇಶಕ್ಕಾಗಿ ಮೋದಿ ಏನು ಮಾಡಿಲ್ಲ..ಮೋದಿ ಮೋದಿ ಎಂದ ಯುವಕರಿಗೆ ಸರಿಯಾಗಿ ನಾಮ ಹಾಕಿದ್ದಾರೆ,
ಮೋದಿ ಅಚ್ಚೇ ದಿನ್ ಅಂದ್ರು ಅಚ್ಚೇ ದಿನ ನಹೀ ಆಯೇಗಾ ನಿಮಗೆ ಇಂತಹ ಪ್ರಧಾನಿ ಬೇಕಾ.. ದೇಶದಲ್ಲಿ ಜಿಡಿಪಿ ಇಳಿಕೆಯಾಗಿದೆ ಎಂದು ವಾಗ್ಧಾಳಿ ನಡೆಸಿದರು.
ಬಿಎಸ್ ಯಡಿಯೂರಪ್ಪ ಕೆಜಿಪಿಯಲ್ಲಿದ್ದಾಗ ಟಿಪ್ಪುವನ್ನು ಹೊಗಳಿದ್ದರು, ಆದರೆ ಈಗ ಈಗ ಟಿಪ್ಪು ಮತಾಂಧ ಅಂತಿದ್ದಾರೆ, ಅವರಿಗೆ ನಾಚಿಕೆಯಾಗಬೇಕು, ಡಿ. 9 ರಬಳಿಕ ಬಿಎಸ್ವೈ ರಾಜೀನಾಮೆ ಕೊಡಲಿದ್ದಾರೆ, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.