ಗ್ರಾಮ ವಾಸ್ತವ್ಯಕ್ಕೆ ಸರಳವಾಗಿ ರೈಲಿನಲ್ಲಿ ಪ್ರಯಾಣ ನಡೆಸಲು ಸಿಎಂ ನಿರ್ಧಾರ!

0
188
NEW DELHI, INDIA - JULY 18: Karnataka Chief Minister and JDU leader HD Kumaraswamy during an interview at Karnataka Bhavan, on July 18, 2018 in New Delhi, India. (Photo by Burhaan Kinu/Hindustan Times via Getty Images)

ನ್ಯೂಸ್ ಕನ್ನಡ ವರದಿ (12-6-2019): ಸಿಎಂ ಜೂನ್ 21ರಂದು ಯಾದಗಿರಿಯ ಗುರುಮಿಠ್ಕಲ್‍ನ ಚಂಡ್ರಕಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಗ್ರಾಮ ವಾಸ್ತವ್ಯಕ್ಕೆ ಹೊರಟ ಸಿಎಂ ಸಿಂಪಲ್ಲಾಗಿಯೇ ಜನರ ಬಳಿಗೆ ಹೋಗಲು ತೀರ್ಮಾನ ಮಾಡಿದ್ದು, ಈ ಗ್ರಾಮಕ್ಕೆ ತೆರಳಲು ಮುಖ್ಯಮಂತ್ರಿಗಳು ರೈಲಿನ ಮೂಲಕ ತೆರಳಲಿದ್ದಾರೆ.

ಜೂನ್ 20ರಂದು ರಾತ್ರಿ ಬೆಂಗಳೂರಿನಿಂದ ಯಾದಗಿರಿಗೆ ಕರ್ನಾಟಕ ಎಕ್ಸ್ ಪ್ರೆಸ್ ರೈಲಿನಲ್ಲಿ ಪಯಣ ಬೆಳೆಸಲಿದ್ದಾರೆ. ಜೂನ್ 21 ರಿಂದ ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಲಿದ್ದಾರೆ. ಸಿಎಂ ಕುಮಾರಸ್ವಾಮಿಯವರ ಗ್ರಾಮವಾಸ್ತವ್ಯ ಮಾದರಿಯನ್ನೂ ರಾಜಸ್ಥಾನದಲ್ಲೂ ಆರಂಭಿಸಲಾಗಿದ್ದು ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಗ್ರಾಮವಾಸ್ತವ್ಯ ಆರಂಭಿಸಿದ್ದಾರೆ. ಜನರ ಅಹವಾಲುಗಳನ್ನು ಜನರೊಂದಿಗೆ ಬೆರೆತು ಅರಿಯಲು ಈ ನಿರ್ಧಾರವನ್ನು ಸಿಎಂ ತೆಗೆದುಕೊಂಡಿದ್ದರು. ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗಲೂ ಗ್ರಾಮವಾಸ್ತವ್ಯ ಮಾಡಿದ್ದರು.

LEAVE A REPLY

Please enter your comment!
Please enter your name here