ಹಾಸನ ಗಲಾಟೆಗೆ ಬಿಗ್ ಟ್ವಿಸ್ಟ್: ಬಿಜೆಪಿಯಿಂದಲೇ ನಡೆದಿತ್ತಂತೆ ಕಲ್ಲುತೂರಾಟದ ಪ್ಲಾನ್!

0
577

ನ್ಯೂಸ್ ಕನ್ನಡ ವರದಿ : ಅಪರೇಶನ್ ಆಡಿಯೋದ ಎರಡನೇ ಆವೃತ್ತಿಯಲ್ಲಿ ದೇವೇಗೌಡರ ಬಗೆಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಪ್ರೀತಂ ಜೆ.ಗೌಡರ ನಿವಾಸದ ಎದುರು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಪ್ರೀತಂ ಗೌಡ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ ಕಾರ್ಯಕರ್ತರು ಶಾಸಕರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆಂದು ವರದಿಯಾಗಿತ್ತು. ದೇವೇಗೌಡ ಹಾಗೂ ಸಿಎಂ ವಿರುದ್ಧ ಬಿಜೆಪಿ ಶಾಸಕ ಪ್ರೀತಂ ಗೌಡ ನೀಡಿದ್ದ ಹೇಳಿಕೆ ಹಿನ್ನಲೆ ಉಂಟಾದ ಗಲಭೆಗೆ ಈಗ ಬಿಗ್​ ಟ್ವಿಸ್ಟ್​ ಸಿಕ್ಕಿದೆ.

ಜಿಲ್ಲೆಯ ಏಕೈಕ ಬಿಜೆಪಿ ಶಾಸಕನ ಮನೆ ಮುಂದೆ ನಿನ್ನೆ ನಡೆಸಿದ ಜೆಡಿಎಸ್​ ಪ್ರತಿಭಟನೆಯಲ್ಲಿ ಹಲ್ಲೆಗೊಳಗಾದ ಬಿಜೆಪಿ ಕಾರ್ಯಕರ್ತ ಎಂಬುದು ತಿಳಿದು ಬಂದಿದೆ. ಅಲ್ಲದೇ, ಬಿಜೆಪಿಯೇ ಈ ಗಲಾಟೆಗೆ ಪ್ರಚೋದನೆ ನೀಡಿ, ಶಾಸಕನ ಮನೆ ಮುಂದೆ ಪ್ರತಿಭಟನೆ ನಡೆಸಲು ಬಿಜೆಪಿಯೇ ಪ್ಲಾನ್​ ಮಾಡಿತು. ಅಲ್ಲದೇ ಜೆಡಿಎಸ್​ ಕಾರ್ಯಕರ್ತರು ಗಲಾಟೆ ಮಾಡಲು ಶಾಸಕರ ಬೆಂಬಲಿಗರು ಆಮಿಷ ಒಡ್ಡಿದ್ದರು. ಇದು ಯೋಜನೆ ಪ್ರಕಾರ ನಡೆದ ಗಲಭೆ ಎನ್ನಲಾಗಿದೆ.

ಆಡಿಯೋ ಪ್ರಕರಣದಿಂದ ಮುಜುಗರಕ್ಕೆ ಉಂಟಾಗಿದ್ದ ಬಿಜೆಪಿ ಈ ಘಟನೆಯನ್ನು ತಮ್ಮ ಲಾಭಾಕ್ಕೆ ಬಳಸಿಕೊಳ್ಳುವ ಉದ್ದೇಶದಿಂದ ಬಿಜೆಪಿ ಶಾಸಕನ ಮನೆ ಮುಂದೆ ಪ್ರತಿಭಟನೆಗೆ ಮುಂದಾಗಿದ್ದರು. ಇದಕ್ಕಾಗಿ ಜೆಡಿಎಸ್​ನ ಕಾರ್ಯಕರ್ತರ ನಡುವೆ ನಿಂತು ಕಲ್ಲು ತೂರಾಟ ನಡೆಸುವಂತೆ ಒತ್ತಾಯಿಸಿದ್ದರು. ಈ ಕುರಿತು ಆಡಿಯೋ ಸಂಭಾಷಣೆ ಲಭ್ಯವಾಗಿದ್ದು. ಈ ಆಡಿಯೋ ಸಂಭಾಷಣೆಯನ್ನು ಇದೀಗ ಬಿಡುಗಡೆ ಮಾಡಲು ಜೆಡಿಎಸ್​ ಮುಂದಾಗಿದೆ. ಇಂದು ಮಧ್ಯಾಹ್ನ ಪ್ರೆಸ್​ ಕ್ಲಬ್​ನಲ್ಲಿ ಇದನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಈ ಮೂಲಕ ಬಿಜೆಪಿ ಶಾಸಕನಿಗೆ ಮತ್ತೊಮ್ಮೆ ಕಂಟಕ ಎದುರಾಗಿದೆ.

ಇನ್ನು ಪ್ರೀತಂಗೌಡ ಮನೆ ಮುಂದೆ ಜೆಡಿಎಸ್​ ಕಾರ್ಯಕರ್ತರು ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ಮರಳುವಾಗ ಈ ಹಲ್ಲೆ ಪ್ರಕರಣ ನಡೆದಿದೆ. ಹಲ್ಲೆಗೆ ಒಳಗಾಗಿದ್ದ ರಾಹುಲ್​ ಕಿಣಿ ಬಿಜೆಪಿ ಕಾರ್ಯಕರ್ತ ಅಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ತಡರಾತ್ರಿ 12.30 ಕ್ಕೆ ಆಸ್ಪತ್ರೆಯಿಂದ ಬೆಂಗಳೂರಿಗೆ ಆಸ್ಪತ್ರೆಗೆ ಸ್ಥಳಾಂತರಗೊಳ್ಳುವಂತೆ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಸೂಚನೆ ನೀಡಿದ್ದರು ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here