ಜಾಮಿಯಾದಲ್ಲಿ ಸಿಎಎ ವಿರೋಧಿ ಪ್ರತಿಭಟನಕಾರರ ಮೇಲೆ ಗುಂಡಿನ ದಾಳಿಗೈದ ವ್ಯಕ್ತಿ: ಗಾಯಗೊಂಡ ವಿದ್ಯಾರ್ಥಿ!

0
172

ನ್ಯೂಸ್ ಕನ್ನಡ ವರದಿ: (30.01.2020):ಭಾರತದಾದ್ಯಂತ ಸಿಎಎ ಹಾಗೂ ಎನ್ನಾರ್ಸಿ ಕಾಯ್ದೆ ವಿರುದ್ಧವಾಗಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿದ್ದು, ಜಾಮಿಯಾ ಮಿಲ್ಲಿಯಾದಲ್ಲಿ ಕೂಡಾ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಪೊಲೀಸರ ಕ್ರೂರತೆಯ ನಡುವೆಯೂ ಪ್ರತಿಭಟನೆಯ ಕಾವು ಇನ್ನೂ ತಣಿದಿಲ್ಲ. ಈ ನಡುವೆ ವ್ಯಕ್ತಿಯೋರ್ವ ಇಂದು ಪ್ರತಿಭಟನೆಯ ವೇಳೆ ಗನ್ ಮೂಲಕ ಶೂಟ್ ಮಾಡಿದ್ದು, ಓರ್ವ ವಿದ್ಯಾರ್ಥಿ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಯಾವುದೇ ರೀತಿಯ ಆಕ್ರಮಣಗಳಿಗೂ ಹೆದರದಿದ್ದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಭಯ ಸೃಷ್ಟಿಸುವ ಸಲುವಾಗಿ ಈ ರೀತಿಯ ಕೃತ್ಯವನ್ನು ಎಸಗಲಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಶೂಟೌಟ್ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ತಮ್ಮ ಕಸ್ಟಡಿಗೆ ಪಡೆದುಕೊಂ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here