Tuesday August 23 2016

Follow on us:

Contact Us
used mobile phone

ದುಬೈ: ಸೆಕೆಂಡ್ ಹ್ಯಾಂಡ್ “ಐಫೋನ್ 6 ಸ್ಯಾಂಸಂಗ್ 7″ ಖರೀದಿಸುವ ಮುನ್ನ ಎಚ್ಚರ!

ನ್ಯೂಸ್ ಕನ್ನಡ ಸ್ಪೆಶಲ್: ದುಬೈಯಲ್ಲಿರುವ ಅನಿವಾಸಿಗರು ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿಸಲು ಇಚ್ಚಿಸುವವರು ಈ ಮಾಹಿತಿಯನ್ನೊಮ್ಮೆ ಓದಿ. ಸೆಕೆಂಡ್ ಹ್ಯಾಂಡ ಮೊಬೈಲ್ ಖರೀದಿಸಲು ಇಚ್ಚೆ ಪಟ್ಟವರಿಗೆ ಈ ಸನ್ನಿವೇಶದ ಅನುಭವವಾಗಿರದೆ ಇರಲು ಸಾಧ್ಯವೇ ಇಲ್ಲ.

ದುಬೈ ವಾಸಿಗರೆ…  ಯಾವುದೇ ವ್ಯಕ್ತಿಯು ನಿಮ್ಮ ಬಳಿ ಬಂದು “ಸೆಕೆಂಡ್ ಹ್ಯಾಂಡ್ ಐಫೋನ್ 6, ಸ್ಯಾಂಸಂಗ್ 7 ಇದೆ ಕಡಿಮೆ ಬೆಲೆಯಲ್ಲಿ ಕೊಡುತ್ತೇನೆ” ಎಂದು ಹೇಳಿದರೆ ಎಚ್ಚರವಾಗಿರಿ. ಸುಮಾರು 2600 ದಿರ್ಹಮ್ಸ್ (ಸುಮಾರು 47 ಸಾವಿರ ರೂ) ಬೆಲೆಯುಳ್ಳ ಮೊಬೈಲ್ ಕೇವಲ 900 ದಿರ್ಹಮ್ಸ್ (16,000 ರೂ) ಮಾರಲು ಪ್ರಯತ್ನಿಸುತ್ತಾರೆ. ಇನ್ನೂ ಹೆಚ್ಚಿನ ಚರ್ಚೆ ಮಾಡಿದರೆ ಕೇವಲ 400 ದಿರ್ಹಮ್ಸ್ (7000 ರೂ)ಗೆ ಕೊಡಲು ತಯಾರಿರುತ್ತಾರೆ.

ಇಷ್ಟು ಕಡಿಮೆ ಬೆಲೆಯಲ್ಲಿ ಇಲ್ಲಿ ಮಾರುವ ಬದಲಿಗೆ ಮೊಬೈಲ್ ಅಂಗಡಿಗಳಿಗೆ ಮಾರಿದರೆ ಒಳ್ಳೆಯ ಬೆಲೆ ಕೊಡಬಹುದು ಎಂದು ನೀವು ಅವರನ್ನು ಕೇಳಿದರೆ “ಒಂದು ಅಂಗಡಿಯವರು ನಮಗೆ ಕೆಲವು ಫೋನ್ ಗಳನ್ನು ಮಾರಲು ಕೊಡುತ್ತಾರೆ. ಪ್ರತೀ ಮೊಬೈಲ್ ಗೆ ಇಂತಿಷ್ಟು ಕಮಿಶನ್ ಕೊಡುತ್ತಾರೆ. ಬೇಕಾದರೆ ನನ್ನ ಪಾಸ್ ಪೋರ್ಟ್ ಕಾಪಿಯ ಚಿತ್ರ ಗ್ಯಾಲೆರಿಯಲ್ಲಿದೆ ನೋಡಿ. ಒರಿಜಿನಲ್ ಬಿಲ್ಲ್ ಕೂಡಾ ಇದೆ” ಎಂದು ನಂಬಿಸಲು ಪ್ರಯತ್ನಿಸುತ್ತಾರೆ. ಇದನ್ನು ನಂಬಿ ಆ ಮೊಬೈಲ್ ಡೂಪ್ಲಿಕೇಟ್ ಆಗಿರ ಬಹುದು ಎಂದು ನೀವು ಯೋಚಿಸ ಬಹುದು. ಆದರೆ ಅದು ಒರಿಜಿನಲ್ ಮೊಬೈಲ್ ಆಗಿರುತ್ತದೆ. ಅದರಲ್ಲಿ ಮಾರುವಾತನ ಕೆಲವು ಸೆಲ್ಫಿಗಳೂ (ಗ್ರಾಹಕರನ್ನು ಬಕ್ರಾ ಮಾಡಲು) ಇರುತ್ತವೆ.

ಒಂದು ವೇಳೆ ಅ ಮೊಬೈಲ್ ಹಾಗೂ ಮಾರುವವನನ್ನು ನಂಬಿ ಖರೀದಿಸಿರೇ…. ನಂತರ ಹಣ ಪಡಕೊಂಡ ಮೇಲೆ ತಮ್ಮ ಕೈ ಚಳಕ ತೋರಿಸುತ್ತಾರೆ. ಆ ಫೋನ್ ನಲ್ಲಿರುವ ಫೋಟೊಗಳನ್ನು ಹಾಗೂ ಇನ್ನಿತರ ದಾಖಲೆಗಳನ್ನು “ಅದು ನನ್ನ ಪರ್ಸನಲ್ ಡೇಟಾ. ಅದನ್ನು ಡಿಲೀಟ್ ಮಾಡುತ್ತೇನೆ” ಎಂದು” ಮಾಡಲು ಫ್ಯಾಕ್ಟರಿ ಸೆಟ್ಟಿಂಗ್ ಮೂಲಕ ಎಲ್ಲವನ್ನೂ ಡಿಲೀಟ್ ಮಾಡಿ ನಿಮಗೆ ಪರಿಶೀಲಿಸಲು ಕೊಡುತ್ತಾನೆ. ನಂತರ ಅದರಲ್ಲಿ ನನ್ನ ಸಿಮ್ ಕಾರ್ಡ್ ಇದೆ ಅದನ್ನು ಬದಲಾಯಿಸಿ ಕೊಡುತ್ತೇನೆ ಎಂದು ಪುನಃ ವಾಪಾಸು ಪಡೆಯುತ್ತಾನೆ.

ಈ ಸಂದರ್ಭದಲ್ಲಿ ನಿಜವಾದ ಕೈಚಳಕ ತೋರಿಸುತ್ತಾನೆ. ಸಿಮ್ ಬದಲಿಸಲು ಪಡೆದ ಮೊಬೈಲ್ ಬದಲಿಗೆ ಅದೇ ತರ ಕಾಣುವ ಚೈನಾ ಸೆಟ್ ನಿಮ್ಮ ಕೈಗೆ ಕೊಟ್ಟು ಕಣ್ಮರೆಯಾಗುತ್ತಾನೆ. ನಂತರ ಪರಿಸರದಲ್ಲಿ ಎಲ್ಲಿ ಹುಡುಕಿದರೂ ನಿಮಗೆ ಆತ ಕಾಣಲು ಸಿಗುವುದಿಲ್ಲ. ಇಂತಹ ವಂಚಕರ ತಂಡದ ಇತರ ಸದಸ್ಯರು ಆಸುಪಾಸಿನಲ್ಲಿ ಸಾಮಾನ್ಯ ಜನರಂತೆ ತಿರುಗಾಡುತ್ತಾ ಇರುತ್ತಾರೆ. ಹಾಗಾಗಿ ಒಂದು ವೇಳೆ ಸಿಕ್ಕರೂ ಕೂಡಾ, ತಂಡದ ಇತರ ಸದಸ್ಯರು ನಿಮಗೆ ಸಹಾಯ ಮಾಡುವಂತೆ ನಟಿಸಿ ನಿಮ್ಮನ್ನು ಮಾತಿನಲ್ಲಿ ವ್ಯಸ್ತಗೊಳಿಸಿ ಆತನನ್ನು ಆ ಸ್ಥಳದಿಂದ ಕಣ್ಮರೆಯಾಗಲು ಸಹಕರಿಸುತ್ತಾರೆ.

ಇಂತಹ ಮೋಸಗಳ ಬಗ್ಗೆ ತುಂಬಾ ಜಾಗರೂಕರಾಗಿರಿ ಎಂದು “ನ್ಯೂಸ್ ಕನ್ನಡ” ಎಚ್ಚರಿಸುತ್ತದೆ.

nkmq

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ರಮೇಶ್ ಶೆಟ್ಟಿ ಮೃತ ದೇಹ ತವರೂರಿಗೆ; ಇಂಡಿಯನ್ ಸೋಷಿಯಲ್ ಫಾರಂ ಪ್ರಯತ್ನದ ಫಲಶ್ರುತಿ

ಮುಂದಿನ ಸುದ್ದಿ »

ಸೊಹಾರ್-ಒಮಾನ್ ನಲ್ಲಿ ಇಂಡಿಯನ್ ಪ್ರವಾಸಿ ಫೋರಂ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಸಿನೆಮಾ

  • marali

    “ಮರಳಿ ಮನೆಗೆ” ಧ್ವನಿಸುರುಳಿ ಬಿಡುಗಡೆ ಸಂಭ್ರಮ

    February 24, 2017

    ನ್ಯೂಸ್ ಕನ್ನಡ(24-2-2017): ಖ್ಯಾತ ಬರಹಗಾರ, ಚಿಂತಕ, ರಂಗಕರ್ಮಿ ಯೋಗೇಶ್ ಮಾಸ್ಟರ್ ನಿರ್ದೇಶನದ ಚೊಚ್ಚಲ ಚಲನಚಿತ್ರ “ಮರಳಿ ಮನೆಗೆ”ಯ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಮಾತನಾಡಿದ ಯೋಗೇಶ್ ಮಾಸ್ಟರ್ ನಾದಬ್ರಹ್ಮ ಹಂಸಲೇಖ ಅವರು “ದೇಸಿ ಸಂಗೀತದ ...

    Read More
  • bhavana

    ನಟಿ ಭಾವನಾರನ್ನು ಅಪಹರಿಸಿ, ಲೈಂಗಿಕ ಕಿರುಕುಳ ನೀಡಿದವನ ಬಂಧನ

    February 18, 2017

    ನ್ಯೂಸ್ ಕನ್ನಡ(18-2-2017): ಚಿತ್ರನಟಿ ಭಾವನಾ ಅವರನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳದ ಎರ್ನಾಕುಳಂನಲ್ಲಿ ಭಾವನಾ ಅವರನ್ನು ಅಪಹರಿಸಿದ್ದ ದುಷ್ಕರ್ಮಿಗಳು ಲೈಂಗಿಕ ಕಿರುಕುಳ ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾವನಾ ಅವರ ಕಾರು ಚಾಲಕನಾಗಿದ್ದ ...

    Read More
  • Marali Manege

    ಸೆನ್ಸಾರ್ ಮಂಡಳಿಯವರನ್ನೂ ಕಣ್ಣೀರು ಹಾಕಿಸಿದ ಚಿತ್ರ ಬಿಡುಗಡೆಗೆ ಸಿದ್ಧ

    February 16, 2017

    ಯೋಗೇಶ್ ಮಾಸ್ಟರ್ ನಿರ್ದೇಶನದ ಚಿತ್ರ ಸಂಘಪರಿವಾರ-ಪ್ರಗತಿಪರರ ಅಭಿಪ್ರಾಯವನ್ನೂ ಬದಲಿಸಬಹುದಂತೆ ನ್ಯೂಸ್ ಕನ್ನಡ ವರದಿ(16.02.2017)-ಮಂಗಳೂರು: ಯೋಗೇಶ್ ಮಾಸ್ಟರ್ ಅವರು ನಿರ್ದೇಶಿಸಿರುವ ‘ಮರಳಿ ಮನೆಗೆ’ ಕನ್ನಡ ಚಿತ್ರವು ಇದೀಗ ಚಿತ್ರರಂಗದಲ್ಲಿ ಹೊಸ ಸಂಚಲನವನ್ನು ಮೂಡಿಸಿದ್ದು, ನಾಯಕರ ವೈಭವೀಕರಣದ ಚಿತ್ರಗಳನ್ನೇ ನೋಡಿ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×