ಗೌರಿ ಲಂಕೇಶ್ ಹತ್ಯೆ ಪ್ರಕರಣ: ‘ಸ್ಪೋಟಕ ಮಾಹಿತಿ’ ಬಿಚ್ಚಿಟ್ಟ ಸನಾತನ ಸಂಸ್ಥೆ.!

0
19

ನ್ಯೂಸ್ ಕನ್ನಡ ವರದಿ: ಲೇಖಕಿ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ವಿಶೇಷ ತನಿಖಾ ದಳದ ಪೊಲೀಸರು ಋಷಿಕೇಶ್ ದೇವಾಡಿಕರ್ ನನ್ನು ಬಂಧಿಸಿದ್ದಾರೆ. ಈತನ ಬಗ್ಗೆ ಸನಾತನ ಸಂಸ್ಥೆ ಸ್ಪೋಟಕ ಮಾಹಿತಿ ಬಹಿರಂಗಪಡಿಸಿದೆ. ಬಂಧಿತ ಋಷಿಕೇಶ್, ತಮ್ಮ ಸಂಘಟನೆಯ ಸದಸ್ಯ ಎಂದು ಒಪ್ಪಿಕೊಂಡಿದೆ. ಆದರೆ, ಈತ ಕಳೆದ ಹತ್ತು ವರ್ಷಗಳಿಂದ ಸಂಸ್ಥೆಯಲ್ಲಿ ಸಕ್ರಿಯನಾಗಿಲ್ಲ ಎಂತಲೂ ಸ್ಪಷ್ಟಪಡಿಸಿದೆ.

ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಋಷಿಕೇಶ್ ನನ್ನು ಬಂಧಿಸಿದ ಬಳಿಕ ನಮಗೆ ವಿಷಯ ಗೊತ್ತಾಗಿದೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸುವುದಾಗಿ ಸನಾತಂನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಚೇತನ್ ರಾಜಹನ್ಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಂಧಿತ ಋಷಿಕೇಶ್ ಕಳೆದ ಕೆಲವು ವರ್ಷಗಳ ಹಿಂದೆ ನಮ್ಮ ಸಂಘಟನೆಯಲ್ಲಿದ್ದ. ಆದರೆ, ಎಂಟು-ಹತ್ತು ತಿಂಗಳಿಂದ ಸಕ್ರಿಯನಾಗಿರಲಿಲ್ಲ. ಆತ ಬೇರೆ ಸಂಘಟನೆಗಳೊಂದಿಗೆ ಸಕ್ರಿಯನಾಗಿದ್ದ ಎಂಬ ಮಾಹಿತಿಯಿತ್ತು. ಆತ ನಮ್ಮ ಸಂಘಟನೆಯಿಂದ ಹಲವು ವರ್ಷಗಳಿಂದ ದೂರವಿದ್ದು, ಈಗ ಬಂಧನಕ್ಕೊಳಗಾಗಿ ನಮ್ಮ ಸಂಘಟನೆಯನ್ನು ದೂರುವುದು ಸರಿಯಲ್ಲ ಎಂತಲೂ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here