ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದ ಭಯೋತ್ಪಾದನಾ ಆರೋಪಿ ಪ್ರಜ್ಞಾ ಸಿಂಗ್!

0
100

ನ್ಯೂಸ್ ಕನ್ನಡ ವರದಿ: (16.05.19) ಭಾರತದ ಸ್ವಾತಂತ್ರ್ಯಕ್ಕಾಗಿ ಜನರನ್ನು ಸಂಘಟಿಸಿ ಹೋರಾಟ ಮಾಡಿದ್ದ ಭಾರತದ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರನ್ನು ಕೊಲೆಗೈದು ದೇಶದ ಮೊತ್ತ ಮೊದಲ ಭಯೋತ್ಪಾದನಾ ಕೃತ್ಯಗೈದಿದ್ದ ನಾಥೂರಾಮ ಗೋಡ್ಸೆ ಎಂಬಾತನನ್ನು ಭಯೋತ್ಪಾದನಾ ಆರೋಪಿಯಾಗಿ ಜೈಲಿನಲ್ಲಿದ್ದು, ಸದ್ಯ ಆರೋಗ್ಯ ಸಮಸ್ಯೆ ಎಂದು ಜೈಲಿನಿಂದ ಹೊರ ಬಂದು ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಸಾಧ್ವಿ ಪ್ರಜ್ಞಾ ಸಿಂಗ್ ಸಮರ್ಥಿಸಿದ್ದಾಳೆ. ನಾಥೂರಾಮ ಗೋಡ್ಸೆ ಓರ್ವ ದೇಶಭಕ್ತ ಎಂದು ಪ್ರಜ್ಞಾ ಸಿಂಗ್ ಹೇಳಿಕೆ ನೀಡಿದ್ದಾರೆ. ಸದ್ಯ ಈ ಕುರಿತಾದಂತೆ ಆಕ್ರೋಶ ವ್ಯಕ್ತವಾಗುತ್ತಿದೆ,

ಕಮಲಹಾಸನ್ ನಾಥೂರಾಮ್ ಗೋಡ್ಸೆ ಕುರಿತಾದಂತೆ ನೀಡಿದ್ದ ಹೇಳಿಕೆಯ ಹಿನ್ನೆಲೆಯ್ಲಲಿ ಮಾತನಾಡಿದ ಪ್ರಜ್ಞಾ, ‘ಗೋಡ್ಸೆ ಒಬ್ಬ ದೇಶಭಕ್ತ. ಅವರು ದೇಶಭಕ್ತರಾಗಿಯೇ ಉಳಿಯಲಿದ್ದಾರೆ. ಅವರನ್ನು ಉಗ್ರಗಾಮಿ ಎನ್ನುವವರು ಅವರ ಆತ್ಮಸಾಕ್ಷಿಯನ್ನು ಒಮ್ಮೆ ಪ್ರಶ್ನೆ ಮಾಡಿಕೊಳ್ಳಬೇಕು,’ ಎಂದು ಅವರು ಹೇಳಿಕೊಂಡಿದ್ದಾರೆ.

ಆದರೆ, ಈ ಹೇಳಿಕೆಯನ್ನು ಆಕ್ಷೇಪಿಸಿರುವ ಬಿಜೆಪಿಯ ವಕ್ತಾರ ಜಿ.ವಿ ಎಲ್‌ ನರಸಿಂಹರಾವ್‌, ‘ಸಾಧ್ವಿ ಅವರ ಹೇಳಿಕೆಯನ್ನು ಬಿಜೆಪಿ ಒಪ್ಪುವುದಿಲ್ಲ. ಪಕ್ಷ ಈ ಹೇಳಿಕೆಯನ್ನು ಖಂಡಿಸುತ್ತದೆ. ಈ ಬಗ್ಗೆ ಸ್ಪಷ್ಟನೆ ಕೇಳಲಾಗುತ್ತದೆ. ತಮ್ಮ ಹೇಳಿಕೆಗೆ ಸಾಧ್ವಿ ಅವರು ಬಹಿರಂಗವಾಗಿ ಕ್ಷಮೆ ಕೋರಬೇಕು,’ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here