ಪೆಟ್ರೋಲ್, ಡೀಸೆಲ್ ಜೊತೆಗೆ ಚಿನ್ನ ಕೂಡ ದುಬಾರಿ ಆಯ್ತು.!

0
220

ನ್ಯೂಸ್ ಕನ್ನಡ ವರದಿ: ಅಮೆರಿಕಾ ಹಾಗೂ ಚೀನಾದ ನಡುವಿನ ಸಂಘರ್ಷ, ವ್ಯಾಪಾರ ಬಿಕ್ಕಟ್ಟು ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯ ಕಳೆದುಕೊಳ್ಳುತ್ತಿರುವುದರಿಂದ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದೆ.

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ನಿರಂತರ 20 ದಿನಗಳಿಂದಲೂ ಏರಿಕೆಯಾಗುತ್ತಿದ್ದು ಇದರ ನಡುವೆಯೇ ಚಿನ್ನ ಹಾಗೂ ಬೆಳ್ಳಿ ಬೆಲೆಯು ಗಗನಮುಖಿಯಾಗುತ್ತಿರುವುದು ಜನರ ಜೇಬಿಗೆ ಹೊರೆಯಾಗಿದೆ.

ಇಂದು ಕೂಡ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 42.30 ರೂ.ಗಳು ಏರಿಕೆಯಾಗಿರುವುದರಿಂದ ಪ್ರತಿ ಹತ್ತು ಗ್ರಾಂ ಚಿನ್ನ ಕೊಳ್ಳಲು 50 ಸಾವಿರವರೆಗೂ ವ್ಯಯಿಸಬೇಕಾಗಿದೆ. ದೆಹಲಿಯಲ್ಲೂ ಹಳದಿ ಲೋಹದ ಬೆಲೆಯು ಏರಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆಯು 49,352 ರೂ.ಗಳಿಗೆ ಮುಟ್ಟಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆಯು 10 ಗ್ರಾಂಗೆ 45,360 ರಷ್ಟಿದ್ದರೆ, ಕೆಜಿ ಬೆಳ್ಳಿ ಬೆಲೆಯು 48,460 ರೂ.ಗೆ ಮುಟ್ಟಿದೆ.

LEAVE A REPLY

Please enter your comment!
Please enter your name here