50 ಸಾವಿರ ಅಂತರದಲ್ಲಿ ಗೆಲ್ಲುತ್ತಾರಂತೆ ಬಿಸಿ.ಪಾಟೀಲ್!: ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್

0
316

ನ್ಯೂಸ್ ಕನ್ನಡ ವರದಿ: ಮುಖ್ಯಮಂತ್ರಿ ಆದಿಯಾಗಿ ರಾಜ್ಯ ಬಿಜೆಪಿ ಮುಖಂಡರ ಸಮ್ಮುಖದಲ್ಲಿ ಅನರ್ಹ ಶಾಸಕರು ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅನರ್ಹರಲ್ಲಿ ಒಬ್ಬರಾದ ಬಿ.ಸಿ.ಪಾಟೀಲ್ ಭಾರೀ ಗೆಲುವಿನ ಲೆಕ್ಕಾಚಾರದಲ್ಲಿದ್ದಾರೆ.

ಬಿಜೆಪಿ ಸೇರ್ಪಡೆಗೊಂಡ ನಂತರ ಮಾತನಾಡಿದ ಪಾಟೀಲ್, “ಕಳೆದ ಬಾರಿ ಚುನಾವಣೆಯಲ್ಲಿ ನನ್ನ ಮತ್ತು ಬಣಕರ್ ನಡುವೆ, ಜಿದ್ದಾಜಿದ್ದಿನ ಪೈಪೋಟಿಯಿತ್ತು. ಈ ಬಾರಿ ಆಗಿಲ್ಲ ಕನಿಷ್ಟ ಐವತ್ತು ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವುದು ನಿಶ್ಚಿತ” ಎನ್ನುವ ವಿಶ್ವಾಸದ ಮಾತನ್ನಾಡಿದ್ದಾರೆ.

“ಕಳೆದ ಬಾರಿ ನನಗೆ 72,461 ಮತಗಳು ಬಂದಿದ್ದವು, ಯು.ಬಿ,ಬಣಕರ್ ಅವರಿಗೆ 71,906 ಮತಗಳು ಬಂದು, ನಾನು 555 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೆ. ಆದರೆ, ಈ ಬಾರಿ ಬಣಕರ್ ನಮ್ಮ ಜೊತೆಗಿದ್ದಾರೆ” ಎಂದು ಪಾಟೀಲ್ ಹೇಳಿದರು.

LEAVE A REPLY

Please enter your comment!
Please enter your name here