ಅಮೇರಿಕದಲ್ಲೂ ಹೌಸ್’ಫುಲ್ ಪ್ರದರ್ಶನ ಕಂಡ ಸೂಪರ್ ಹಿಟ್ ತುಳು ಚಿತ್ರ ಗಿರಿಗಿಟ್!

0
311

ನ್ಯೂಸ್ ಕನ್ನಡ ವರದಿ: ಬಿಡುಗಡೆಯಾದ ದಿನದಿಂದಲೇ ಹಲವಾರು ದಾಖಲೆಗಳನ್ನು ಧೂಳಿಪಟ ಮಾಡಿದ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಅಭಿನಯದ ತುಳು ಚಿತ್ರ ಗಿರಿಗಿಟ್ ಅಮೇರಿಕದಲ್ಲಿ ಬಿಡುಗಡೆಯಾದ ಮೊದಲ ತುಳು ಚಿತ್ರ ಎಂಬ ಇತಿಹಾಸವನ್ನು ನಿರ್ಮಿಸಿದೆ.

ಮೊದಲ ವಾರದಲ್ಲೇ 1.24 ಕೋಟಿ ಕಲೆಕ್ಷನ್ ಮಾಡಿ, ಈಗಾಗಲೇ ಅತಿಹೆಚ್ಚಿನ ಚಿತ್ರಮಂದಿರಗಳಲ್ಲಿ 50 ದಿನಗಳ ಪ್ರಸಾರ ಕಂಡ ತುಳು ಸಿನಿಮಾ ಎಂಬ ಹೆಗ್ಗಳಿಕೆ ಪಡೆದ ಗಿರಿಗಿಟ್ ಸಿನಿಮಾ ದುಬೈನಲ್ಲೂ 50 ದಿನ ಪೂರೈಸಿದ ಮೊದಲ ಕರ್ನಾಟಕದ ಸಿನಿಮಾ ಎಂಬ ದಾಖಲೆಯನ್ನೂ ನಿರ್ಮಾಣ ಮಾಡಿದೆ. ಈವರೆಗೆ ಯುಎಈಯಲ್ಲಿ ಯಾವುದೇ ಕನ್ನಡ, ತುಳು, ಕೊಂಕಣಿ ಸಿನಿಮಾ 50 ದಿನಗಳ ಪ್ರದರ್ಶನ ಕಂಡ ನಿದರ್ಶನಗಳೇ ಇರಲಿಲ್ಲ, ಗಿರಿಗಿಟ್ 50 ದಿನಗಳನ್ನು ಪೂರೈಸಿ ಇನ್ನೂ ತನ್ನ ನಾಗಾಲೋಟವನ್ನು ಮುಂದುವರೆಸಿದೆ.

ಇದೀಗ ಅಮೇರಿಕಾದಲ್ಲೂ ಕೇವಲ ಕಾಟಾಚಾರಕ್ಕೆ ಬಿಡುಗಡೆ ಗೊಂಡಿಲ್ಲ, ತುಳು ಸಿನಿಮಾ ಪ್ರೇಕ್ಷಕರನ್ನು ಆಕರ್ಷಿಸಿ ಯಶಸ್ವಿಯಾದ ಹೌಸ್ ಫುಲ್ ಪ್ರದರ್ಶನವನ್ನೂ ಕಂಡಿದ್ದು, ಯುವ ಪ್ರತಿಭೆಗಳ ತಂಡವನ್ನು ಕಟ್ಟಿಕೊಂಡು ಸಿನಿಮಾ ಮಾಡಿದ ರೂಪೇಶ್ ಶೆಟ್ಟಿಯ ಚಿತ್ರಕ್ಕೆ ಜನರು ನಿರೀಕ್ಷೆಗೂ ಮೀರಿ ಮನಸೋತಿದ್ದು, ಚಿತ್ರವನ್ನು ಭರ್ಜರಿಯಾಗಿ ಗೆಲ್ಲಿಸುವ ಮೂಲಕ ಆಶಿರ್ವದಿಸಿದ್ದಾರೆ.

ಸಾನ್ ಜೋಸ್, ಲಾಸ್ ಏಂಜಲೀಸ್, ಚಿಕಾಗೋದಲ್ಲಿ ಹೌಸ್ ಫುಲ್ ಪ್ರದರ್ಶನ, ದುಬೈನಲ್ಲಿ 50 ದಿನಗಳ ಪ್ರದರ್ಶನ, ಕುವೈಟ್ ನಲ್ಲಿ ಎರಡು ವಾರಗಳ ಪ್ರದರ್ಶನ ಈ ರೀತಿ ತುಳು ಚಿತ್ರ ಮಾರುಕಟ್ಟೆಯನ್ನು ವಿಶ್ವದೆಲ್ಲೆಡೆ ವಿಸ್ತರಿಸುತ್ತಿರುವ ಗಿರಿಗಿಟ್ ಚಿತ್ರ 100 ನೇ ದಿನದತ್ತ ಯಶಸ್ವಿಯಾಗಿ ದಾಪುಗಾಲು ಇಟ್ಟರೂ ಆಶ್ಚರ್ಯವಿಲ್ಲ.

ಜೋಯೆಲ್ – ಡರೆಲ್ ಉತ್ತಮ ಸಂಗೀತ, ಪ್ರಸನ್ನ ಬೈಲೂರ್ ರವರ ಡೈಲಾಗ್, ರಾಹುಲ್ ವಸಿಷ್ಠ ರವರ ಎಡಿಟಿಂಗ್, ರೂಪೇಶ್ ಶೆಟ್ಟಿ ಹಾಗೂ ತುಳು ಸಿನಿಮಾದ ದಿಗ್ಗಜ ಹಾಸ್ಯ ನಟರಾದ ಅರವಿಂದ್ ಬೋಳಾರ್, ಭೊಜರಾಜ ವಾಮಂಜೂರ್, ನವೀನ್ ಡಿ ಪಡೀಲ್ ಅಭಿನಯಕ್ಕೆ ಪ್ರೇಕ್ಷಕರು ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದು, ಉತ್ತಮ ಸಿನಿಮಾವನ್ನು ಪ್ರೇಕ್ಷಕರು ಯಾವತ್ತೂ ಕೈಬಿಡಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

LEAVE A REPLY

Please enter your comment!
Please enter your name here