ವಿವಾದಿತ ಟ್ವೀಟ್ ಮಾಡಿದ ದೆಹಲಿ ಬಿಜೆಪಿ ಅಭ್ಯರ್ಥಿ ಕಪಿಲ್ ಮಿಶ್ರಾಗೆ 48 ಗಂಟೆಗಳ ಕಾಲ ಪ್ರಚಾರಕ್ಕೆ ನಿರ್ಬಂಧ

0
50

ನ್ಯೂಸ್ ಕನ್ನಡ ವರದಿ: ವಿವಾದಾತ್ಮಕ ಟ್ವೀಟ್ ಮಾಡಿದ ಹಿನ್ನಲೆಯಲ್ಲಿ ದೆಹಲಿ ಮಾಡೆಲ್ ಟೌನ್ ಬಿಜೆಪಿ ಅಭ್ಯರ್ಥಿ ಕಪಿಲ್ ಮಿಶ್ರಾಗೆ 48 ಗಂಟೆಗಳ ಕಾಲ ಚುನಾವಣಾ ಪ್ರಚಾರ ನಡೆಸದಂತೆ ಚುನಾವಣಾ ಆಯೋಗ ನಿರ್ಬಂಧಿಸಿದೆ. ಈ ನಿರ್ಬಂಧ ಇಂದು ಸಂಜೆಯಿಂದಲೇ ಜಾರಿಯಾಗಲಿದೆ.

ಕಳೆದ ಎರಡು ದಿನಗಳ ಹಿಂದೆ ಟ್ವೀಟ್ ಮಾಡಿದ್ದ ಕಪಿಲ್ ಮಿಶ್ರಾ, ‘ಪಾಕಿಸ್ತಾನ ಶಾಹಿನ್‌ ಬಾಗ್‌ ಮೂಲಕ ಒಳ ಪ್ರವೇಶಿಸುತ್ತಿದೆ. ದಿಲ್ಲಿಯ ಶಾಹಿನ್‌ ಬಾಗ್‌, ಚಾಂದ್‌ ಬಾಗ್‌, ಇಂದರ್‌ಲೋಕ್‌ನಲ್ಲಿ ಮಿನಿ ಪಾಕಿಸ್ತಾನಗಳು ಸೃಷ್ಟಿಯಾಗುತ್ತಿವೆ. ಕಾನೂನು ಇಲ್ಲಿ ಪಾಲನೆಯಾಗುತ್ತಿಲ್ಲ ಮತ್ತು ಪಾಕಿಸ್ತಾನದ ಗಲಭೆಕೋರರು ರಸ್ತೆಗಳನ್ನು ಆಕ್ರಮಿಸುತ್ತಿದ್ದಾರೆ,’ ಎಂಬುದಾಗಿ ತಿಳಿಸಿದ್ದರು.

ಈ ಟ್ವೀಟ್ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಹೀಗಾಗಿ ಚುನಾವಣಾ ಆಯೋಗ ಮಿಶ್ರಾ ಅವರ ವಿವಾದಾತ್ಮಕ ಟ್ಟೀಟ್‌ನ್ನು ಡಿಲೀಟ್‌ ಮಾಡುವಂತೆ ಚುನಾವಣಾ ಆಯೋಗ ಸೂಚಿಸಿತ್ತು.

LEAVE A REPLY

Please enter your comment!
Please enter your name here