ಕಚೇರಿಗೇ ಬಾಂಬ್ ಎಸೆದ ಆರ್‌ಎಸ್‌ಎಸ್ ಕಾರ್ಯಕರ್ತನ ಬಂಧನ!

0
127

ನ್ಯೂಸ್ ಕನ್ನಡ ವರದಿ: ಭಯದ ವಾತಾವರಣ ನಿರ್ಮಿಸಲು ಕೇರಳದ ಕಣ್ಣೂರಿನ RSS ಕಚೇರಿ ಹಾಗೂ ಪೊಲೀಸ್ ಕಾವಲು ಠಾಣೆಯ ಮೇಲೆ ಕಚ್ಚಾ ಬಾಂಬ್ ಎಸೆದಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತನನ್ನು ಬಂಧಿಸಲಾಗಿದೆ. ಆರೋಪಿಯನ್ನು ಪ್ರಭೇಶ್ ಎಂದು ಗುರುತಿಸಲಾಗಿದ್ದು, ತಮಿಳುನಾಡಿನ ಕೊಯಂಬತ್ತೂರಿನಲ್ಲಿ ರೆಸ್ಟ್ ಮಾಡಲಾಗಿದೆ.

ಕೊತೀರೂರಿನ RSS ಕಚೇರಿ, ಮನೋಜ್ ಸ್ಮೃತಿ ಕೇಂದ್ರಂ ಬಳಿ ಈ ಘಟನೆ ನಡೆದಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಕೊತೀರೂರು ಪೊಲೀಸ್ ಕಾವಲು ಠಾಣೆಯ ಎಸ್ ಐ ‘ಜನವರಿ 16ರಂದು ಬೆಳಗ್ಗೆ RSS ಕಾರ್ಯಕರ್ತ ಪ್ರಭೇಶ್ ಬಾಂಬ್ ಗಳನ್ನು ಎಸೆದಿದ್ದಾನೆ. ಆತನನ್ನು ಬಂಧಿಸಿ ವಿಚಾರಣೆ ನಡೆಸಿದ್ದೇವೆ. ಈ ವೇಳೆ ತಾನು RSS ಕಚೇರಿ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಬಾಂಬ್ ದಾಳಿ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾನೆ’ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here