ಗಣೇಶೋತ್ಸವ ಆಚರಣೆಗೆಂದು ಸೇರಿದ್ದ ಒಂದೇ ಕುಟುಂಬದ 30 ಮಂದಿಗೆ ಕೊರೋನಾ!

0
23

ನ್ಯೂಸ್ ಕನ್ನಡ ವರದಿ: (06.09.2020): ಕೊರೊನಾ ವೈರಸ್ ದೇಶದಾದ್ಯಂತ ವ್ಯಾಪಕವಾಗಿ ಹರಡುತ್ತಿದೆ. ಈಗಾಗಲೇ ದಾಖಲೆ ಪ್ರಮಾಣದಲ್ಲಿ ಭಾರತದಲ್ಲಿ ಪ್ರತೀ ದಿನವೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೆಚ್ಚು ಜನರು ಒಂದೇ ಕಡೆ ಸೇರಬಾರದು ಎಂಬ ಸರಕಾರದ ನೀತಿಯನ್ನು ಉಲ್ಲಂಘೀಸಿ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಒಂದೇ ಕುಟುಂಬದ ಮೂವತ್ತು ಮಂದಿ ಕೊರೊನಾ ಸೋಂಕುಪೀಡಿತರಾದ ಘಟನೆಯು ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

ಥಾಣೆಯ ಕಲ್ಯಾಣ್ ನಲ್ಲಿನ ಜೋಷಿಭಾಗ್ ಎಂಬ ಪ್ರದೇಶದಲ್ಲಿ ಗಣೇಶೋತ್ಸವ ಆಚರನೆಯನ್ನು ನಡೆಸಲಾಗಿದ್ದು, ಒಂದೇ ಫ್ಲಾಟ್ ನಲ್ಲಿ ನೆಲೆಸಿದ್ದ ಕುಟುಂಬಸ್ಥರೆಲ್ಲಾ ಹಬ್ಬದ ಕಾರಣದಿಂದಾಗಿ ಒಟ್ಟುಗೂಡಿ ಸರಕಾರದ ನಿಯಮವನ್ನು ಉಲ್ಲಂಘಿಸಿ ಆಚರಣೆ ಮಾಡಿದ್ದರು. ಕಳೆದ 60 ವರ್ಷಗಳಿಂದಲೂ ಈ ಕುಟುಂಬ ಗಣೇಶೋತ್ಸವ ಆಚರಿಸುತ್ತಾ ಬಂದಿದ್ದು, ಆದರೆ ಈ ವರ್ಷ ಸರಳವಾಗಿ ಆಚರಿಸಬಹುದಿತ್ತಾರೂ ಅದನ್ನು ಲೆಕ್ಕಿಸದೇ ಎಲ್ಲರೂ ಒಂದುಗಡೆ ಸೇರಿದ್ದೇ ಈ ಅನಾಹುತಕ್ಕೆ ಕಾರಣವಾಗಿದೆ. ಕುಟುಂಬದ 33 ಸದಸ್ಯರನ್ನು ತಪಾಸಣೆ ಮಾಡಿದ್ದು, ಇದರಲ್ಲಿ ಮೂವತ್ತು ಮಂದಿಗೆ ಪಾಸಿಟಿವ್ ಬಂದಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here