ಸಿಎಎ ಭಾರತಕ್ಕೆ ಬೇಡವಾಗಿತ್ತು; ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮೈಕ್ರೋಸಾಫ್ಟ್ CEO ಸತ್ಯ ನಾಡೆಲ್ಲಾ

0
41

ನ್ಯೂಸ್ ಕನ್ನಡ ವರದಿ: ಹೊಸ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಪ್ರತಿಕ್ರಿಯಿಸಿರುವ ಮೈಕ್ರೋಸಾಫ್ಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸತ್ಯ ನಾಡೆಲ್ಲಾ, ಸಿಎಎ ಭಾರತಕ್ಕೆ ಬೇಡವಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿ ಸಿಎಎ ವಿರೋಧಿ ನಡೆಯುತ್ತಿರುವ ದೊಡ್ಡ ಪ್ರತಿಭಟನೆಗಳ ಮಧ್ಯೆ ಅವರು “ಈಗ ನಡೆಯುತ್ತಿರುವುದು ದುಃಖಕರವಾದ ವಿಷಯವಾಗಿದೆ ಎಂದು ನಾನು ಭಾವಿಸುತ್ತೇನೆ … ಇದು ಕೆಟ್ಟದ್ದಾಗಿದೆ … ಬಾಂಗ್ಲಾದೇಶಿ ವಲಸಿಗನೊಬ್ಬ ಭಾರತಕ್ಕೆ ಬಂದು, ಭಾರತದಲ್ಲಿ ಮುಂದಿನ ಯುನಿಕಾರ್ನ್ ಅನ್ನು ರಚಿಸುವ ಅಥವಾ ಇನ್ಫೋಸಿಸ್‌ನ ಮುಂದಿನ ಸಿಇಒ ಆಗುವುದನ್ನು ನೋಡಲು ನಾನು ಇಷ್ಟಪಡುತ್ತೇನೆ” ಎಂದು ಸತ್ಯ ನಾಡೆಲ್ಲಾ ಬುಜ್‌ಫೀಡ್‌ ಸಂಪಾದಕ ಬೆನ್ ಸ್ಮಿತ್‌ರವರಿಗೆ ಅಮೆರಿಕದಲ್ಲಿ ನಡೆದ ಮೈಕ್ರೋಸಾಫ್ಟ್ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.

ತದನಂತರ ಮೈಕ್ರೋಸಾಫ್ಟ್‌ ಅವರ ಹೇಳಿಕೆಯನ್ನು ಅಧಿಕೃತವಾಗಿ ಟ್ವೀಟ್‌ ಮಾಡಿದೆ. ಅದರಲ್ಲಿ ಅವರು “ಪ್ರತಿಯೊಂದು ದೇಶವು ತನ್ನ ಗಡಿಗಳನ್ನು ವ್ಯಾಖ್ಯಾನಿಸುತ್ತದೆ, ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸುತ್ತದೆ ಮತ್ತು ಅದಕ್ಕೆ ತಕ್ಕಂತೆ ವಲಸೆ ನೀತಿಯನ್ನು ರೂಪಿಸುತ್ತದೆ. ಪ್ರಜಾಪ್ರಭುತ್ವಗಳಲ್ಲಿ, ಜನರು ಮತ್ತು ಅವರ ಸರ್ಕಾರಗಳು ಆ ಮಿತಿಗಳಲ್ಲಿ ಚರ್ಚಿಸಿ ವ್ಯಾಖ್ಯಾನಿಸುತ್ತವೆ. ನನ್ನ ಭಾರತೀಯ ಪರಂಪರೆಯಿಂದ ನಾನು ರೂಪುಗೊಂಡಿದ್ದೇನೆ, ಬಹುಸಾಂಸ್ಕೃತಿಕ ಭಾರತದಲ್ಲಿ ಬೆಳೆದು ಯುನೈಟೆಡ್ ಸ್ಟೇಟ್ಸ್‌ನಲ್ಲಿ ನನ್ನ ವಲಸೆ ಅನುಭವವಿದೆ. ನನ್ನ ಆಶಯವೆಂದರೆ ವಲಸಿಗನು ಭಾರತದಲ್ಲಿ ಎನ್ನ ಏಳ್ಗೆಯನ್ನು ಬಯಸುವುದು ಅಥವಾ ಭಾರತೀಯ ಸಮಾಜ ಮತ್ತು ಆರ್ಥಿಕತೆಗೆ ಹೆಚ್ಚಿನ ಲಾಭವನ್ನು ನೀಡುವ ಬಹುರಾಷ್ಟ್ರೀಯ ಸಂಸ್ಥೆಯನ್ನು ಮುನ್ನಡೆಸುವುದಾಗಿದೆ” ಎಂದಿದ್ದಾರೆ.

ನಾಡೆಲ್ಲಾ ಅವರ ಅಭಿಪ್ರಾಯವನ್ನು ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಅವರು ಬೆಂಬಲಿಸಿದ್ದಾರೆ.

LEAVE A REPLY

Please enter your comment!
Please enter your name here