ಕೇಂದ್ರ ಸರ್ಕಾರವನ್ನು ಮುಕ್ತವಾಗಿ ಟೀಕಿಸುವ ವಾತವರಣವಿಲ್ಲ!

0
268

ನ್ಯೂಸ್ ಕನ್ನಡ ವರದಿ: ನರೇಂದ್ರ ಮೋದಿ ಸರಕಾರವು ತನ್ನ ನೀತಿಗಳು ಹಾಗೂ ನಿರ್ಧಾರಗಳ ಕುರಿತು ವ್ಯಕ್ತವಾಗುವ ಟೀಕೆಗಳಿಗೆ ಹೆಚ್ಚು ಮುಕ್ತಮನಸ್ಸು ಹೊಂದಿರಬೇಕು ಎಂಬ ಕೈಗಾರಿಕೋದ್ಯಮಿ ರಾಹುಲ್ ಬಜಾಜ್ ಅವರ ಅಭಿಪ್ರಾಯವನ್ನು ಉದ್ಯಮಿ, ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಝುಂದಾರ್ ಶಾ ಬೆಂಬಲಿಸಿದ್ದಾರೆ.

ಕೇಂದ್ರ ಸರಕಾರವು ಭಾರತೀಯ ಉದ್ಯಮರಂಗದ ಆಶಯಗಳಿಗೆ ಸ್ಪಂದಿಸಬೇಕು ಹಾಗೂ ಕುಸಿಯುತ್ತಿರುವ ಭಾರತದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಜೊತೆಗೂಡಿ ಶ್ರಮಿಸಬೇಕು ಎಂದು ಕಿರಣ್ ರವಿವಾರ ಟ್ವೀಟ್ ಮಾಡಿದ್ದಾರೆ.

”ಸರಕಾರವು ಭಾರತದ ಉದ್ಯಮವಲಯಕ್ಕೆ ಸ್ಪಂದಿಸುವುದೆಂಬ ಭರವಸೆ ಹೊಂದಿದ್ದೇವೆ. ಖರೀದಿಸುವಿಕೆ ಹಾಗೂ ಬೆಳವಣಿಗೆಯನ್ನು ಪುನಶ್ಚೇತನ ಗೊಳಿಸುವ ನಿಟ್ಟಿನಲ್ಲಿ ಮಾರ್ಗೊಪಾಯಗಳನ್ನು ಕಂಡುಹಿಡಿಯಬೇಕಾಗಿದೆ.

ಈಗ ನಾವೆಲ್ಲರೂ ಅಸ್ಪೃಶ್ಯರಾಗಿಬಿಟ್ಟಿದ್ದೇವೆ ಹಾಗೂ ದೇಶದ ಆರ್ಥಿಕತೆಯ ಬಗ್ಗೆ ಯಾವುದೇ ರೀತಿಯ ಟೀಕೆಗಳನ್ನು ಆಲಿಸಲು ನಮ್ಮ ಸರಕಾರ ಬಯಸುತ್ತಿಲ್ಲ” ಎಂದು ಶಾ ಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here