ಮತದಾನದ ಅಂಕಿ ಅಂಶ ಪ್ರಕಟಿಸದ ಚುನಾವಣಾ ಆಯೋಗ: ಕೇಜ್ರಿವಾಲ್ ಗರಂ

0
25

ನ್ಯೂಸ್ ಕನ್ನಡ ವರದಿ: ದೆಹಲಿ ವಿಧಾನಸಭೆ ಚುನಾವಣೆಯ ಮತದಾನದ ಶೇಕಡಾವಾರು ಅಂಕಿ ಅಂಶವನ್ನು ಪ್ರಕಟಿಸದ ಚುನಾವಣಾ ಆಯೋಗದ ನಡೆಯನ್ನು ಸಿಎಂ ಅರವಿಂದ್ ಕೇಜ್ರಿವಾಲ್ ಟೀಕಿಸಿದ್ದಾರೆ.

ಮತದಾನದ ಶೇಕಡಾವಾರು ಮತದಾನದ ಅಂಕಿ-ಅಂಶ ಪ್ರಕಟಿಸಲು ವಿಳಂಬ ಮಾಡುತ್ತಿರುವ ಆಯೋಗದ ಕ್ರಮಕ್ಕೆ ಅರವಿಂದ್ ಕೇಜ್ರಿವಾಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮತದಾನ ಪ್ರಕ್ರಿಯೆ ಮುಕ್ತಾಯಗೊಂಡು ಒಂದು ದಿನವೇ ಕಳೆದಿದ್ದರೂ ಚುನಾವಣಾ ಆಯೋಗ ಏಕೆ ಶೇಕಡಾವಾರು ಮತದಾನದ ಅಂಕಿ-ಅಂಶ ಪ್ರಕಟಿಸುತ್ತಿಲ್ಲ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಕೇಜ್ರಿವಾಲ್, ಶೇಕಡಾವಾರು ಮತದಾನದ ಅಂಕಿ ಅಂಶ ಪ್ರಕಟಿಸದಿರುವ ಚುನಾವಣಾ ಆಯೋಗದ ನಡೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಹರಿಹಾಯ್ದಿದ್ದಾರೆ.

ನಿನ್ನೆ(ಶನಿವಾರ)ಚುನಾವಣಾ ಆಯೋಗ ಪ್ರಕಟಿಸಿರುವ ಅಂಕಿ-ಅಂಶಗಳ ಪ್ರಕಾರ ದೆಹಲಿಯಲ್ಲಿ ಶೇ.61.46 ರಷ್ಟು ಮತದಾನ ನಡೆದಿತ್ತು. ಆದರೆ ಅಂತಿಮ ಅಂಕಿ ಅಂಶಗಳನ್ನು ಆಯೋಗ ಇದುವರೆಗೂ ಪ್ರಕಟಿಸಿಲ್ಲ.

LEAVE A REPLY

Please enter your comment!
Please enter your name here