ಎಸ್‌ಡಿಪಿಐ ಗೂ ಮುನ್ನ ಆರ್‌ಎಸ್‌ಎಸ್, ಭಜರಂಗದಳ ನಿಷೇಧಿಸಿ: ಜಮೀರ್ ಅಹಮದ್ ಒತ್ತಾಯ

0
50

ನ್ಯೂಸ್ ಕನ್ನಡ ವರದಿ: ಎಸ್‌ಡಿಪಿಐ ಸಂಘಟನೆಗೂ ಮುನ್ನ ಆರ್.ಎಸ್.ಎಸ್ ಹಾಗೂ ಭಜರಂಗದಳವನ್ನು ನಿಷೇಧಿಸುವಂತೆ ಮಾಜಿ ಸಚಿವ ಜಮೀರ್ ಅಹಮದ್ ಒತ್ತಾಯಿಸಿದ್ದಾರೆ.

ಇಂದು ಪೌರತ್ವ ಕಾಯ್ದೆ ವಿರುದ್ಧದ ಪ್ರತಿರೋಧದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಜಮೀರ್ ಅಹಮದ್, ರಾಜ್ಯ ಬಿಜೆಪಿ ಸರ್ಕಾರ ಎಸ್​​ಡಿಪಿಐ ನಿಷೇಧಿಸಲು ಮುಂದಾಗಿದೆ. ಆರ್​ಎಸ್​ಎಸ್​ ಮತ್ತು ಭಜರಂಗ ದಳ ಬಹಿರಂಗವಾಗಿಯೇ ಕೋಮುದ್ವೇಷ ಬಿತ್ತರಿಸುವ ಹೇಳಿಕೆ ನೀಡುತ್ತಾರೆ. ಇಲ್ಲಿಯವರೆಗೂ ಎಸ್​​ಡಿಪಿಐ ಇಂತಹ ಹೇಳಿಕೆ ನೀಡಿಲ್ಲ. ಎಸ್​​ಡಿಪಿಐ ನೀಡಿರುವ ಒಂದೇ ಒಂದು ಕೋಮುವಾದಿ ಹೇಳಿಕೆಯಾದರೂ ಬಿಜೆಪಿ ತೋರಿಸಲಿ ಎಂದು ಸವಾಲು ಹಾಕಿದರು.

ಇನ್ನು ಸಮಾಜದಲ್ಲಿ ಪ್ರತಿಯೊಬ್ಬರು ಶಾಂತಿ ಹಾಗೂ ನೆಮ್ಮದಿಯಿಂದ ಬದುಕಬೇಕು. ಈ ಬದಲಾವಣೆ ಎಸ್​​ಡಿಪಿಐ ನಿಷೇಧದಿಂದ ಸಾಧ್ಯವಿಲ್ಲ. ಸಮಾಜದ ನೆಮ್ಮದಿಗೆ ಆರ್​ಎಸ್​ಎಸ್​ ಮತ್ತು ಭಜರಂಗ ದಳ ನಿಷೇಧಿಸಬೇಕೆಂದು ಅವರು ಅಭಿಪ್ರಾಯಪಟ್ಟರು.

LEAVE A REPLY

Please enter your comment!
Please enter your name here