ಫೆಬ್ರವರಿ 23 ರಂದು ಗುರುಪುರ ಕೈಕಂಬದಲ್ಲಿ ದ್ವಿತೀಯ ಬಾರಿಗೆ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರ ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರ

0
16

ನ್ಯೂಸ್ ಕನ್ನಡ ವರದಿ ಗುರುಪುರ,ಕೈಕಂಬ : ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಹಾಗೂ ಸುನ್ನೀ ಜಂ-ಇಯ್ಯತುಲ್ ಮುಅಲ್ಲಿಮೀನ್ (S.J.M) ಕೈಕಂಬ ರೇಂಜ್ ಇದರ ಜಂಟಿ ಆಶ್ರಯದಲ್ಲಿ ಯೆನೆಪೋಯ ಆಸ್ಪತ್ರೆ ದೇರಳಕಟ್ಟೆ ಇವರ ಸಹಭಾಗಿತ್ವದಲ್ಲಿ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರ ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರವು ದಿನಾಂಕ 23/02/2020 ನೇ ಭಾನುವಾರ ಬೆಳಗ್ಗೆ 9 ರಿಂದ ಮಧ್ಯಾಹ್ನ 1:30 ರ ತನಕ ಗುರುಪುರ ಕೈಕಂಬದ ಬಿ.ಎಸ್ ಟವರ್ ಮುಂಭಾಗದ ಜಂಕ್ಷನ್ ನಲ್ಲಿ ನಡೆಯಲಿರುವುದು.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಶಿಬಿರದ ಸದುಪಯೋಗ ಪಡೆದುಕೊಳ್ಳಲು ವಿನಂತಿ ಮಾಡುತ್ತಾ ಹಾಗೂ ಮಹಿಳೆಯರಿಗೂ ಈ ಶಿಬಿರದ ಸದುಪಯೋಗ ಪಡೆದುಕೊಳ್ಳಲು ಅವಕಾಶ ಇದೆ ಎಂದು ಪ್ರಕಟಣೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಮುಝಮ್ಮಿಲ್ ನೂಯಿ ಅಡ್ಡೂರು (+918296086719),ರಫೀಕ್ (ಮುನ್ನ) ಕೈಕಂಬ (+919964873192),ಕೆ.ಎಚ್.ಯು ಶಾಫಿ ಮದನಿ ಕರಾಯ(+917353238846) ಇವರನ್ನು ಸಂಪರ್ಕಿಸುವಂತೆ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಹಾಗೂ ಸುನ್ನೀ ಜಂ-ಇಯ್ಯತುಲ್ ಮುಅಲ್ಲಿಮೀನ್ (S.J.M) ಕೈಕಂಬ ರೇಂಜ್ ಜಂಟಿ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಕಟಣೆ : ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಮಾಧ್ಯಮ ವಿಭಾಗ

LEAVE A REPLY

Please enter your comment!
Please enter your name here