Tuesday January 9 2018

Follow on us:

Contact Us

ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ಚಿತ್ರಗಳಾದ ಕಾರಣದಿಂದ ಕಲಾವಿದರಿಗೂ ಮತ್ತು ತಂತ್ರಜ್ಞರಿಗೂ ಸ್ವಲ್ಪ ಕೆಲಸ ಹೆಚ್ಚೇ. ಅದರಲ್ಲಿಯೂ ಹಲವು ವರ್ಷಗಳಿಂದ ಕ್ಯಾನ್ಸರ್ ಜೊತೆಗೆ ಹೋರಾಡಿಕೊಂಡು ಬಂದಿರುವ ಜಬ್ಬಾರ್ ಎಂಬ ಧೀರನಿಗೆ ಹೆಚ್ಚು ಕೆಲಸ ಕೊಡಲು ನಾನು ಅಧೀರನಾಗುತ್ತಿದ್ದೆ.

ಆದರೆ, ನನಗೇನಾದರೂ ಆಯಾಸವಾದರೆ, ಬೇಕೆನಿಸಿದರೆ ನಾನೇ ಹೇಳುತ್ತೇನೆ ಎನ್ನುತ್ತಾ ನಮ್ಮ ಸಂತೈಸುವಿಕೆಯನ್ನು ನಿರಾಕರಿಸುತ್ತಿದ್ದ ಜಬ್ಬಾರ್ ಇಡೀ ಎರಡು ದಿನಗಳ ಚಿತ್ರೀಕರಣದ ಕೆಲಸದ ವಿಷಯದಲ್ಲಿ ತನಗೆಂದು ಏನೂ ವಿನಾಯತಿ ತೆಗೆದುಕೊಳ್ಳಲೇ ಇಲ್ಲ. ಕಾಲುಗಳಲ್ಲಿ ಅಂತಹ ಬಲವಿಲ್ಲದಿದ್ದರೂ ಮತ್ತು ನಡೆಯಲು ಆಧಾರವನ್ನು ಪಡೆಯುವಂತಹ ಪರಿಸ್ಥಿತಿ ಇದ್ದರೂ ಮಂಗಳೂರಿನಿಂದ ಉಪ್ಪಿನಂಗಡಿಗೆ ತಾನೊಬ್ಬನೇ ಸ್ಕೂಟರ್ ನಲ್ಲಿ ಬಂದಿದ್ದು, ಯಾರೂ ಕರೆದುಕೊಂಡು ಬರುವವರು ಇರಲಿಲ್ಲ ಎಂದಲ್ಲ. ತನ್ನ ಶಕ್ತಿ ಮತ್ತು ಸ್ಫೂರ್ತಿ ತನ್ನಲ್ಲಿ ಜೀವಂತವಾಗಿದೆ ಎಂದು.

ಚಿತ್ರೀಕರಣದಲ್ಲಿ ಒಂದೇ ದೃಶ್ಯವನ್ನು ಹಲವು ಕೋನಗಳಿಂದ, ಹಲವು ಬಾರಿ ತೆಗೆದುಕೊಳ್ಳಲು ಮತ್ತು ಅದಕ್ಕೆ ಸೆಟ್ ಮಾಡಿಕೊಳ್ಳಲು ಹಲವು ರೀತಿಗಳನ್ನು ಜಬ್ಬಾರ್ ರವರನ್ನು ಕಾಯಿಸುತ್ತಾ, ಹೊಂದಿಸಿಕೊಳ್ಳುತ್ತಾ, ಅನುಸರಿಸಿಕೊಳ್ಳಲು ಹೇಳುತ್ತಿದ್ದರೂ ಅದಕ್ಕೆ ಸಕಾರಾತ್ಮಕವಾಗಿಯೇ ಸ್ಪಂದಿಸುತ್ತಾ ಚಿತ್ರೀಕರಣಕ್ಕೆ ತಮ್ಮ ಭಾಗವಹಿಸುವಿಕೆಯ ವಿಶೇಷ ಕೊಡುಗೆಯನ್ನು ನೀಡಿದರು. ಎಲ್ಲಿಯೂ ಸಾಕಾಯ್ತೆಂಬ ಸುಸ್ತಿನ ನಿಟ್ಟುಸುರು ಬಿಡದೇ, ನಾವು ಕ್ಯಾನ್ಸರ್ ಹೋರಾಟಗಾರನಿಗೆ ಹಿಂಸೆ ಕೊಡುತ್ತಿದ್ದೇವೆ ಎಂದು ನನಗೆ ಎಲ್ಲಿಯೂ ಅಪರಾಧಪ್ರಜ್ಞೆ ಮೂಡದಂತೆ ತಮ್ಮ ನಡೆ ನುಡಿ ಮತ್ತು ಚಟುವಟಿಕೆಗಳಲ್ಲಿ ಸಂಯಮವನ್ನು ಮತ್ತು ಸಹಕಾರವನ್ನು ತೋರಿದರು. ಎರಡೂ ಭಾಷೆಯ ಚಿತ್ರೀಕರಣಗಳಲ್ಲಿ ಬೇಕಾದ ಹಾಗೆ ನಟಿಸಿದರು.

ಜಬ್ಬಾರ್ ರವರ ಜೀವನ ಪ್ರೀತಿ ಕ್ಯಾನ್ಸರ್ ಭೀತಿಯನ್ನು ಮೀರಿದೆ ಎಂಬುದಂತೂ ಇಡೀ ಚಿತ್ರೀಕರಣದ ಸಮಯದಲ್ಲಿ ನಾನು ಕಂಡುಕೊಂಡದ್ದು. ಚಿತ್ರೀಕರಣದ ಸಂದರ್ಭದಲ್ಲಿ ಚಿತ್ರೀಕರಿಸುತ್ತಿದ್ದ ಕ್ಯಾಮರಾಮ್ಯಾನ್ ರಾಜ್ ಶಿವಶಂಕರ್ ಭಾವುಕರಾಗಿ ಬಿಕ್ಕಿ ಬಿಕ್ಕಿ ಚಿತ್ರೀಕರಿಸಲು ಸಾಧ್ಯವಾಗದೇ ಅತ್ತದ್ದುಂಟು. ನಾನು ಅವರಿಗೆ ಸಮಾಧಾನ ಪಡಿಸಿ ಚಿತ್ರೀಕರಣ ಮುಂದುವರಿಸಲು ಹೇಳುತ್ತಿದ್ದೆ. ಮೇಕಪ್ ಮೋಹನ್ ಕೂಡ ಅಳುತ್ತಿದ್ದ. ಹೀಗೆ ಹಲವರು ಭಾವುಕರಾದರೂ ಜಬ್ಬಾರ್ ನೀಡುತ್ತಿದ್ದದ್ದೇನೆಂದರೆ ತನ್ನ ಶಕ್ತಿ ಮತ್ತು ಸಂಯಮದ ಸಂಕೇತವಾಗಿರುವ ಮಾಸದ ಮುಗುಳ್ನಗೆ.

ಚಿತ್ರೀಕರಣದ ಮರುದಿನವೇ ಕೀಮೋ ಥೆರಪಿಗೆ ಜಬ್ಬಾರ್ ಹೋಗಿದ್ದು, ಚಿಕಿತ್ಸೆಯು ನಮ್ಮ ಜಬ್ಬಾರ್ ಪೊನ್ನೋಡಿಯ ತಮ್ಮ ಜಬರ್ದಸ್ತ್ ಶಕ್ತಿ ಮತ್ತು ಸ್ಫೂರ್ತಿಯನ್ನು ನಮ್ಮೊಡನೆ ದೀರ್ಘಕಾಲ ಹಂಚಿಕೊಂಡಿರಲೆಂದು ನಮ್ಮ ಹಂಸಗೀತೆ ಚಿತ್ರೀಕರಣದ ತಂಡದ ಆಶಯ ಮತ್ತು ಹಾರೈಕೆ.

ಇನ್ನೊಬ್ಬರು ನನ್ನ ಹೃದಯಕ್ಕೆ ಆಪ್ತವಾದ ವ್ಯಕ್ತಿಯೆಂದರೆ, ಜೆಟ್ ರಿಪ್ಪಾ ತಂದೆ ಯು ಟಿ ಹಂಜ಼ಾ. ಅವರು ತಮ್ಮ ತೋಟದಲ್ಲಿ ನಮ್ಮ ಚಿತ್ರೀಕರಣಕ್ಕೆ ಅನುಕೂಲ ಮಾಡಿಕೊಡಲು ಎಲ್ಲಾ ಸಿದ್ಧತೆ ಮಾಡಿದ್ದರು. ಅವರ ತೋಟದ ಹಿಂದಿನ ನದಿದಂಡೆಯಲ್ಲಿ ಚಿತ್ರೀಕರಣ ಮಾಡಲಾಯಿತೇ ಹೊರತು, ಸಮಯದ ಅಭಾವದಿಂದ ಅವರ ತೋಟದ ಸಂಪೂರ್ಣ ಸೇವೆಯನ್ನು ಪಡೆಯಲು ಸಾಧ್ಯವಾಗಲಿಲ್ಲ. ಆದರೆ, ಅವರ ಕಾಳಜಿ ಮತ್ತು ಪ್ರೀತಿಗೆ ನಾನು ಶರಣು ಹೋದೆ.

ಇನ್ನು ಇಂತಹ ವಿಶ್ವದ ಗಮನ ಸೆಳೆಯಲು ಹೋಗುತ್ತಿರುವಂತಹ ಇಂತಹದ್ದೊಂದು ಚಿತ್ರವು ಉಪ್ಪಿನಂಗಡಿಯಲ್ಲಿ ಪ್ರಾರಂಭವಾಯಿತೆಂದು ಹೆಮ್ಮೆಯಿಂದ ಹೇಳುತ್ತೇನೆ. ಇದಕ್ಕೆ ಕಾರಣ ಇರ್ಷದ್ ರವರ ಮನೆ ಮತ್ತು ಹಂಜ಼ಾರವರ ತೋಟ. ಇರ್ಷದ್ ಮನೆಯ ಆವರಣದಲ್ಲಿಯೇ ಚಿತ್ರೀಕರಣ ಪ್ರಾರಂಭವಾಗಿದ್ದು, ಬಹುಪಾಲು ಚಿತ್ರೀಕರಣ ಅಲ್ಲಿಯೇ ನಡೆಯಿತು. ಇನ್ನು ಚಿತ್ರದ ಕ್ಲೈಮ್ಯಾಕ್ಸ್ ಹಂಜ಼ಾರವರ ತೋಟದ ಹಿಂದೆ ನಡೆದಿದ್ದು. ಇರ್ಷದ್ ರವರ ಸಹಕಾರ ಮತ್ತು ಒತ್ತಾಸೆ ಚಿತ್ರಕ್ಕೆ ಬಹಳ ಮುಖ್ಯ ಕಾಣ್ಕೆಗಳನ್ನು ನೀಡಿದೆ. ಅವರ ಸ್ನೇಹಕ್ಕೆ ಮತ್ತು ಪ್ರೀತಿಗೆ ನನ್ನದೊಂದು ಅಪ್ಪುಗೆ.

ಒಟ್ಟಾರೆ ಕ್ಯಾನ್ಸರ್ ಬಗ್ಗೆ ಭಾರತದ ಸಾಮಾಜಿಕ, ತಾತ್ವಿಕ, ಚಿಕಿತ್ಸಕ ಆಯಾಮಗಳನ್ನು ವಿಶ್ವದ ದೃಷ್ಟಿಗೆ ತರಲು ಹೋಗುತ್ತಿರುವ ಈ ಸಿನಿಮಾದ ಆರಂಭ ಉಪ್ಪಿನಂಗಡಿಯಲ್ಲಿ ಪ್ರಾರಂಭವಾಯಿತೆಂದು ಹೆಮ್ಮೆಯಿಂದ ಹೇಳುವುದರೊಂದಿಗೆ ಇರ್ಷದ್ ರಂತಹ ಸ್ನೇಹಿತರ ಸಹಕಾರಗಳನ್ನು ಪ್ರೀತಿಯಿಂದ ನೆನೆಯುತ್ತೇನೆ.
ಮುಂದಿನ ದಿನಗಳಲ್ಲಿ ಮಂಗಳೂರಿನ ಮತ್ತು ಕುಡ್ಲದ ಇತರ ಭಾಗದ ಸ್ನೇಹಿತರ ಸಹಕಾರವನ್ನು ಸ್ನೇಹದ ಸಲುಗೆಯೊಂದಿಗೆ ಜಬರ್ದಸ್ತಾಗಿಯೇ ಪಡೆಯುತ್ತೇನೆ. ಈ ಚಿತ್ರೀಕರಣದ ಹಂತದಲ್ಲಿ ಕಾರಣಾಂತರಗಳಿಂದ ನನಗೆ ಅವರು ಸಿಕ್ಕಿರಲಿಲ್ಲ. ಇರಲಿ, ಮತ್ತೆ ಮುಂದಿನ ಚಿತ್ರೀಕರಣ ಎಲ್ಲಿ ಮತ್ತು ಎಂದು ಅಂತ ಸಧ್ಯಕ್ಕೆ ಹೇಳೋದಿಲ್ಲ. ನಡೆದ ಮೇಲೆ ನಿಮ್ಮ ಜೊತೆ ಪ್ರೀತಿ ಮತ್ತು ಹೆಮ್ಮೆಯಿಂದ ಹಂಚಿಕೊಂಡೇತೀರುತ್ತೇನೆ.
ಲವ್ ಯೂ

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಮೂಡಿಗೆರೆ ವಿದ್ಯಾರ್ಥಿನಿ ಆತ್ಮಹತ್ಯೆಗೆ ಕಾರಣರಾದ ಎಲ್ಲರನ್ನೂ ಬಂಧಿಸಿ: ಕ್ಯಾಂಪಸ್ ಫ಼್ರಂಟ್

ಮುಂದಿನ ಸುದ್ದಿ »

ಪ್ರಧಾನಿ ಮೋದಿ ಯಾರ ದುಡ್ಡಲ್ಲಿ ವಿದೇಶ ಪ್ರವಾಸ ಮಾಡುತ್ತಾರೆ?: ಸಿದ್ದರಾಮಯ್ಯ ಪ್ರಶ್ನೆ

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×