Thursday January 11 2018

Follow on us:

Contact Us

ಈ ಮಣ್ಣಿನ ರಾಶಿ ಅಗೆದಾಗ ಸಿಕ್ಕಿದ್ದೇನೆಂದು ನೋಡಿದರೆ ನೀವು ಆಶ್ಚರ್ಯಚಕಿತರಾಗುತ್ತೀರಿ!

ನಾವು ಕೆಲವೊಂದು ದೃಶ್ಯಗಳನ್ನ ನೋಡಿದಾಗ, ನಮಗೆ ಕೆಲವು ಅನುಭವಗಳಾದಾಗ, ನಿಜವಾಗಿಯೂ ಎಲ್ಲೋ ಒಂದು ಕಡೆ ದೇವರು ಇದ್ದಾನೆ ಎಂದೆನಿಸಿ ಬಿಡುತ್ತದೆ. ಅಂಥವುಗಳಲ್ಲಿ ನೀವು ಈಗ ನೋಡಲಿರುವ ದೃಶ್ಯವೂ ಒಂದು. ನಿಮಗೆ ಈಗಾಗಲೇ ಮಗು ಆಗಿರಬಹುದು ಮತ್ತು ಆ ಮಗು ಶಾಲೆಗೂ ಹೋಗುತ್ತಿರಬಹುದು. ಬೆಳಗ್ಗೆ ಎದ್ದು ನೀವು ಅಡುಗೆ ಮಾಡಿ, ನಿಮ್ಮ ಮಗುವಿಗೆ ತಿನ್ನಿಸಿ, ಆ ಮಗುವನ್ನ ಸಿದ್ಧಮಾಡಿ ಶಾಲೆಗೆ ಬಿಟ್ಟು ಬರುತ್ತೀರ.

ಆದರೆ ಬೆಳಗ್ಗೆ ಶಾಲೆಗೆ ತೆರಳುವ ನಿಮ್ಮ ಮಗುವು ಮನೆಗೆ ಸುರಕ್ಷಿತವಾಗಿ ವಾಪಾಸ್ ಆಗುತ್ತದೆ ಎಂಬ ನಂಬಿಕೆ ನಿಮ್ಮಲ್ಲಿ ಇರುತ್ತದೆ. ಆದರೆ ಜಗತ್ತಿನ ಎಲ್ಲಾ ಭಾಗಗಳಲ್ಲಿಯೂ ಇರುವ ಅಮ್ಮಂದಿರಿಗೆ ಈ ಭಾವನೆ ಇರುವುದಿಲ್ಲ. ಯುದ್ಧ, ಭಯೋದ್ಪಾದನೆ ಇಂದ ರಕ್ತಸಿಕ್ತವಾಗಿರುವ ದೇಶಗಳಲ್ಲಿ ಜನರು ಪ್ರತಿಯೊಂದು ಕ್ಷಣವನ್ನೂ ಭಯದಲ್ಲಿ ಕಳೆಯಬೇಕಾಗುತ್ತದೆ.

ಆದರೆ ಶಿಕ್ಷಣವೊಂದೇ ಮುಂದೊಂದು ದಿನ ತಮ್ಮ ನಾಡಿನಲ್ಲಿ ಶಾಂತಿ, ವಿಕಾಸ ತರಲು ಸಾಧ್ಯ ಎಂದು ಅರಿತಿರುವ ಪ್ರಜ್ಞಾವಂತ ಪ್ರಜೆಗಳು, ತಮ್ಮ ಮಕ್ಕಳನ್ನ ಇಂತಹ ದುಸ್ಥಿತಿಗಳಲ್ಲಿಯೂ ಶಾಲೆಗೆ ಸೇರಿಸುತ್ತಾರೆ. ಆದರೆ ಅವರು ಶಾಲೆಗೆ ಹೋದ ಸ್ಥಿತಿಯಲ್ಲೇ ವಾಪಾಸ್ ಆಗುವುದು ಅನುಮಾನವೇ. ಆ ಒಂದು ದುರಾದ್ರಷ್ಟಕರ ದಿನದಂದು ಆಗಿದ್ದೆ ಅದು.

ಸಿರಿಯಾ ದೇಶವು ಈಗ ಅಕ್ಷರಸಹ ಯುದ್ಧದಲ್ಲಿ ಮುಳುಗಿದ್ದು, ಆ ದಿನವು ಕೂಡ ಇದಕ್ಕೆ ಹೊರತಾಗಿರಲಿಲ್ಲ. ಆ ದಿನ, ಎದುರಾಳಿ ಪಡೆಯವರು ನಡೆಸಿದ ಕ್ಷಿಪಣಿ ದಾಳಿಯಲ್ಲಿ, ಒಂದು ಕ್ಷಿಪಣಿಯು ಪುಟ್ಟ ಪುಟ್ಟ ಮಕ್ಕಳಿರುವ ಶಾಲೆಯ ಪಕ್ಕದಲ್ಲೇ ಬಂದು ಅಪ್ಪಳಿಸಿತು. ಆ ಕ್ಷಿಪಣಿ ಅಪ್ಪಳಿಸಿದ ರಭಸಕ್ಕೆ ಶಾಲೆಯ ಗೋಡೆಗಳು ಅಕ್ಷರಸಹ ತುಂಡಾಗಿ ಹೋದವು. ಎಲ್ಲವೂ ನೆಲಸಮವಾಯಿತು. ಆದರೆ ಅದರೊಳಗಿದ್ದ ಮಕ್ಕಳು? ಕೆಲವರನ್ನ ರಕ್ಷಿಸಲಾಯಿತು. ಆದರೆ ಅವಶೇಷಗಳಡಿ ಸಿಲುಕಿರುವ ಮಕ್ಕಳು?

ಈಗ ನೀವು ಈ ವಿಡಿಯೋದಲ್ಲಿ ನೋಡುವುದು ನಿಮಗೆ ನಿಜವಾಗಿಯೂ ಮೈನವಿರೇಳಿಸುತ್ತದೆ. ಕೆಲವು ಅಡಿಗಳಷ್ಟು ಕಲ್ಲು, ಮಣ್ಣಿನ ರಾಶಿಯನ್ನ ಸ್ಥಳೀಯರು ಅಗೆದಾಗ ಅಲ್ಲಿ ಸಿಕ್ಕಿದ್ದು ಕೇವಲ ಮಗುವಲ್ಲ. ದೇವರ ವರವೇ. ಏಕೆಂದರೆ ಅಂತಹ ಸ್ಥಿತಿಯಲ್ಲಿ, ಮಗು ಇರಲಿ, ವಯಸ್ಕರರಿಗೂ ತಮ್ಮ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಈ ವಿಡಿಯೋ ನೋಡಿದರೆ, ಕೊನೆಯಲ್ಲಿ ನೀವೇ ನಿಟ್ಟುಸಿರು ಬಿಡುತ್ತೀರ ! ನೋಡಿ ಈ ವಿಡಿಯೋ

Miracle Baby

I keep watching this video over and over and I am amazed at how God saved the life of this baby through the collaborative efforts of these men. God is truly great. Please watch and share

Posted by Word Motivates on Friday, September 22, 2017

courtesy: kannadiga world

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಮಂಗಳೂರು: ಹತ್ಯೆಗೀಡಾದ ದೀಪಕ್ ಮತ್ತು ಬಶೀರ್ ರಿಗೆ ಸಂತಾಪ ಸೂಚಕ ಸಭೆ

ಮುಂದಿನ ಸುದ್ದಿ »

ಬಸ್ಸಿನಲ್ಲಿ ಮೃತಪಟ್ಟ ಪ್ರಯಾಣಿಕ: ರಾಷ್ಟ್ರೀಯ ಹೆದ್ದಾರಿಯಲ್ಲಿ ಶವ ಬಿಟ್ಟು ಹೋದ ಕಂಡಕ್ಟರ್!

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×