Friday November 10 2017

Follow on us:

Contact Us

ಉತ್ತರ ಕನ್ನಡ: ಮಹಬಲೇಶ್ವರ ದೇವಸ್ಥಾನದಲ್ಲಿ ಟಿಪ್ಪು ಸುಲ್ತಾನ್ ಹೆಸರಲ್ಲಿ ನಡೆಯುತ್ತೆ ನಿತ್ಯ ಪೂಜೆ!

ನ್ಯೂಸ್ ಕನ್ನಡ ವರದಿ: ಕರ್ನಾಟಕ ರಾಜ್ಯ ಸರ್ಕಾರ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಆರಂಭಿಸಿದ ನಂತರ ಅದರ ಪರ ವಿರೋಧ ಚರ್ಚೆ ಪ್ರತಿಭಟನೆ ವಾದ ವಿವಾದಗಳು ನಡೆಯುತ್ತಿರುವುದು ನೀವೀಗಾಗಲೇ ಕಂಡಿದ್ದೀರಿ. ಆದರೆ ಇಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಗೋಕರ್ಣದ ಮಹಾಬಲೆಶ್ವರ ದೇವಸ್ಥಾನದಲ್ಲಿ ಟಿಪ್ಪು ಸುಲ್ತಾನ್ ಹೆಸರಲ್ಲಿ ನಿತ್ಯ ಪೂಜೆ ನಡೆಸಲಾಗುವ ಪದ್ಧತಿ ಶತಮಾನದದಿಂದ ಆಚರಣೆಯಲ್ಲಿದೆ.

ಗೋಕರ್ಣದ ಮಹಾಬಲೇಶ್ವರ, ಪಾರ್ವತಿ ದೇವಿ ಮತ್ತು ತಾಮ್ರ ಗೌರಿ ಮಂದಿರದಲ್ಲಿ ರಾತ್ರಿ ವೇಳೆ ಟಿಪ್ಪು ಹೆಸರಿನಲ್ಲಿ ಸಲಾಂ ಪೂಜೆ ಸಲ್ಲಿಸಲಾಗುತ್ತೆ. ಈ ಪೂಜೆಯು ಹಿಂದೂಪರ ಮಂತ್ರೋಚ್ಛಾರಣೆಯಲ್ಲಿ ನಡೆದರೂ, ಪೂಜೆಯ ಪೂರ್ವದಲ್ಲಿ ಮೂರು ಬಾರಿ ಸಲಾಂ ಎಂದು ಉದ್ಘೋಷ ಮಾಡಲಾಗುತ್ತದೆ. ಮಹಾಬಲೇಶ್ವರ ದೇವಸ್ಥಾನದ ದ್ವಾರದಲ್ಲಿ ಸಲಾಂ.. ಸಲಾಂ.. ಎಂದು ಕೂಗಿ ಟಿಪ್ಪುವನ್ನು ಸ್ಮರಿಸಿ ನಂತರವೇ ಆತ್ಮಲಿಂಗಕ್ಕೆ ಪೂಜೆ ಕೈಗೊಳ್ಳತ್ತಾ ಬಂದಿದ್ದಾರೆ. ಟಿಪ್ಪುವಿನ ಆಳ್ವಿಕೆಯ ಕಾಲದಲ್ಲಿ ಗೋಕರ್ಣಕ್ಕೆ ಆತನ ಸೈನಿಕರು ಮುತ್ತಿಗೆ ಹಾಕಿ ದೇವಸ್ಥಾನವನ್ನು ವಶಪಡಿಸಿಕೊಳ್ಳಲು ಹೊರಟಿದ್ದ ಸಂದರ್ಭದಲ್ಲಿ ಟಿಪ್ಪುವಿಗೆ ಶಿವನು ಕನಸಿನಲ್ಲಿ ಬಂದಿದ್ದರಿಂದ ಟಿಪ್ಪು ದೇವಸ್ಥಾನಕ್ಕೆ ಬಂದು ಕ್ಷಮೆ ಯಾಚಿಸಿ ಸಲಾಂ ವಂದನೆ ನೀಡಿ ಕಪ್ಪಕಾಣಿಕೆ ಅರ್ಪಣೆ ಮಾಡಿದ್ದನಂತೆ. ಹೀಗಾಗಿ ಆತ ಬಂದು ಕ್ಷಮೆ ಕೇಳಿದ ಹೊತ್ತನ್ನು ಹಾಗೂ ಆತ ಸಲಾಂ ಹೇಳಿದ ಶಬ್ದವನ್ನು ಇಲ್ಲಿ ಬಳಸಿ ಆತನನ್ನು ಸ್ಮರಿಸಲಾಗುತ್ತಿದೆ ಎಂದು ಆಚರಣೆಯ ಹಿಂದಿರುವ ನಂಬಿಕೆಯನ್ನು ಹೇಳುತ್ತಾರೆ ಹಿರಿಯ ಅರ್ಚಕರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಚೊಚ್ಚಲ ಪಂದ್ಯವಾಡಿದ ಮುಹಮ್ಮದ್ ಸಿರಾಜ್ ಕೈಗೆ ಟ್ರೋಫಿ ನೀಡಿದ ವಿರಾಟ್ ಕೊಹ್ಲಿ

ಮುಂದಿನ ಸುದ್ದಿ »

ಜೆಎನ್ಯೂ: ಬೀಫ್ ಬಿರಿಯಾನಿ ತಿಂದ ವಿದ್ಯಾರ್ಥಿಗಳಿಗೆ ದಂಡ ವಿಧಿಸಿದ ಆಡಳಿತ ಮಂಡಳಿ!

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×