Wednesday December 6 2017

Follow on us:

Contact Us

ಕೊನೆಗೂ ರೋಡಿಗಿಳಿದ ಬಹುನಿರೀಕ್ಷಿತ ಟಿವಿಎಸ್ ಅಪಾಚಿ ಆರ್.ಆರ್310 ಸ್ಪೋಟ್ಸ್ ಬೈಕ್!

ಹೊಸದಿಲ್ಲಿ: ಭಾರತದ ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆ ಟಿವಿಎಸ್ ಮೋಟಾರ್ಸ್, ಬಹುನಿರೀಕ್ಷಿತ ಅಪಾಚಿ ಆರ್‌ಆರ್ 310 ಕ್ರೀಡಾ ಬೈಕ್ ದೇಶದಲ್ಲಿ ಬಿಡುಗಡೆಗೊಳಿಸಿದೆ. ನಿಮಗೆಲ್ಲರಿಗೂ ತಿಳಿದಿರುವಂತೆಯೇ ಜರ್ಮನಿಯ ಐಕಾನಿಕ್ ದ್ವಿಚಕ್ರ ವಾಹನ ಸಂಸ್ಥೆ ಬಿಎಂಡಬ್ಲ್ಯು ಮೊಟೊರಾಡ್ ಸಹಭಾಗಿತ್ವದಲ್ಲಿ ಟಿವಿಎಸ್ ಅಪಾಚಿ ಆರ್‌ಆರ್ 310 (ಅಕುಲಾ) ಸೂಪರ್ ಪ್ರೀಮಿಯರ್ ಮೋಟಾರ್‌ಸೈಕಲ್ ಅಭಿವೃದ್ಧಿಪಡಿಸಲಾಗಿದೆ. ಈ ವಿಭಾಗದಲ್ಲಿ ಇತರೆ ಕ್ರೀಡಾ ಬೈಕ್‌ಗಳನ್ನು ಹೋಲಿಸಿದಾಗ ಟಿವಿಎಸ್ ಅಪಾಚಿ ಆರ್‌ಆರ್310 ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಂಡಿರುವುದು ಹೆಚ್ಚು ಗಮನಾರ್ಹವೆನಿಸಿದೆ.

ರಾಷ್ಟ್ರ ರಾಜಧಾನಿಯಲ್ಲಿ 2016ರಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಅಕುಲಾ 310 ರೇಸ್ ಬೈಕ್ ಮೊದಲ ಬಾರಿಗೆ ಅನಾವರಣಗೊಳಿಸಲಾಗಿತ್ತು. ಇದರ ಆಗಮನಕ್ಕಾಗಿ ಕ್ರೀಡಾ ಬೈಕ್ ಪ್ರೇಮಿಗಳು ಅತ್ಯಂತ ಕಾತರದಿಂದ ಕಾದು ಕುಳಿತಿದ್ದರು. ಏರೋಡೈನಾಮಿಕ್ ಫ್ರೇಟ್ ಫೇರಿಂಗ್, ದೊಡ್ಡದಾದ ವಿಂಡ್‌ಸ್ಕ್ರೀನ್, ವಿಭಜಿತ ಹೆಡ್‌ಲ್ಯಾಂಪ್, ಟ್ವಿನ್ ಎಲ್‌ಇಡಿ ಹೆಡ್‌ಲ್ಯಾಂಪ್ಸ್, ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಪ್ರೊಜೆಕ್ಟರ್ ಬೀಮ್ಸ್, ಎರಡು ಸೀಟು, ಎಲ್‌ಇಡಿ ಟೈಲ್ ಲ್ಯಾಂಪ್ ಇತ್ಯಾದಿ ವ್ಯವಸ್ಥೆಗಳಿದೆ.

312.2 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್‌ನಿಂದ ನಿಯಂತ್ರಿಸ್ಪಡುವ ನೂತನ ಟಿವಿಎಸ್ ಅಪಾಚಿ ಆರ್‌ಆರ್310 ಸ್ಪೋರ್ಟ್ಸ್ ಬೈಕ್, 27.3 ಎನ್‌ಎಂ ತಿರುಗುಬಲದಲ್ಲಿ (7,700rpm) 34 ಅಶ್ವಶಕ್ತಿಯನ್ನು (9,700rpm) ಉತ್ಪಾದಿಸಲಿದೆ. ಇದು ಮುಂಬರುವ ಬಿಎಂಡಬ್ಲ್ಯು ಜಿ 310 ಆರ್ ಮಾದರಿಗೆ ಸಮಾನವಾಗಿರಲಿದೆ.

ವೇಗವರ್ಧನೆ: 2.93 ಸೆಕೆಂಡುಗಳಲ್ಲೇ 0-60kmph ಕೀ.ಮೀ.
ಗರಿಷ್ಠ ವೇಗ: 160kmph
ಭಾರ: 169.5kg
ಬೆಲೆ: 2.05 ಲಕ್ಷ ರೂ. (ಎಕ್ಸ್ ಶೋ ರೂಂ ದಿಲ್ಲಿ)

ಅಲಾಯ್ ಹಾಗೂ ಅಗಲವಾದ ಟ್ಯೂಬ್‌ಲೆಸ್ ಚಕ್ರಗಳನ್ನು ಜೋಡಣೆ ಮಾಡಲಾಗಿದೆ. ಮುಂದುಗಡೆ ಬೆರ್ರಿ ಇನ್ವರ್ಟಡ್ ಫಾರ್ಕ್ ಹಾಗೂ ಹಿಂದುಗಡೆ ಮೊನೊಶಾಕ್ ಜತೆ ಫ್ಲೋಟಿಂಗ್ ಪಿಸ್ತಾನ್ ಸಸ್ಪಷನ್ ವ್ಯವಸ್ಥೆಯನ್ನು ಪಡೆದಿದೆ. ಹಾಗೆಯೇ ಮುಂದುಗಡೆ 300 ಎಂಎಂ ಫ್ರಂಟ್ ಮತ್ತು ಹಿಂದುಗಡೆ 240 ಎಂಎಂ ರಿಯರ್ ಪೆಡಲ್ ಡಿಸ್ಕ್ ಬ್ರೇಕ್ ಸೌಲಭ್ಯಗಳಿರಲಿದೆ. ಅಷ್ಟೇ ಯಾಕೆ ಡ್ಯುಯಲ್ ಚಾನೆಲ್ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಸೌಲಭ್ಯವನ್ನು ಹೊಂದಿರುತ್ತದೆ.

cts: vijayakarnataka

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಕರ್ನಾಟಕದಲ್ಲಿ ಬಿಜೆಪಿಗರು ಐಸಿಸ್ ಉಗ್ರರಂತೆ ವರ್ತಿಸುತ್ತಿದ್ದಾರೆ: ರಾಮಲಿಂಗಾ ರೆಡ್ಡಿ

ಮುಂದಿನ ಸುದ್ದಿ »

ವೀಡಿಯೋ ರೆಕಾರ್ಡ್ ಮಾಡಿ ಆತ್ಮಹತ್ಯೆಗೈದ ಕ್ಯಾಬ್ ಚಾಲಕ!

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×