Saturday August 12 2017

Follow on us:

Contact Us

ತನ್ನ 85 ವರ್ಷದ ತಾಯಿಯ ಆಗ್ರಹಗಳನ್ನು ವಿಭಿನ್ನ ರೀತಿಯಲ್ಲಿ ಪೂರೈಸಿದ ಮಗ!

ನ್ಯೂಸ್ ಕನ್ನಡ ವರದಿ-(12.08.17): ತಂದೆ ತಾಯಂದಿರು ಪ್ರತಿಯೊಬ್ಬರ ಜೀವನದಲ್ಲೂ ಮರೆಯಲಾರಂದತ ಅಮೂಲ್ಯ ಸೊತ್ತು. ತಂದೆ ತಾಯಂದಿರ ಅದರಲ್ಲೂ ತಾಯಿಯ ಋಣವನ್ನು ತೀರಿಸಲು ಸಾಧ್ಯವಿಲ್ಲ ಎಂಬುವುದು ಸಾರ್ವಕಾಲಿಕ ಸತ್ಯ. ಆದರೆ ತಾಯಿಯ ಆಸೆಯನ್ನು ಪೂರೈಸಲು ಸಾಧ್ಯವಾದವನೇ ನಿಜವಾದ ಭಾಗ್ಯವಂತ ಎನ್ನಬಹುದು. ಪುರಾಣಗಳಲ್ಲಿ ತಂದೆತಾಯಿಯನ್ನು ತಕ್ಕಡಿಯಲ್ಲಿಟ್ಟು ಯಾತ್ರೆ ಹೊರಟ ಶ್ರವಣಕುಮಾರಣ ಕಥೆ ನಾವು ಕೇಳಿರಬಹುದು. ಆದರೆ ಇಲ್ಲೊಬ್ಬ ಯುವಕ ವಿಭಿನ್ನ ರೀತಿಯಲ್ಲಿ ತನ್ನ ತಾಯಿಯ ಆಸೆಯನ್ನು ಪೂರೈಸಿದ್ದಾನೆ.

ಬ್ಯಾಂಕಾಕ್ ನಲ್ಲಿ ಸ್ಟುಡಿಯೋ ಹೊಂದಿರುವ ಫೋಟೊಗ್ರಾಫರ್ ಚಬ್ ನೋಕ್ಯೂ ಎಂಬಾತನ ತಾಯಿ ನಾಂಗ್ ಲೋಮ್ ಎಂಬಾಕೆಗೆ ಈಗ 85 ವರ್ಷ. ಆದರೂ ವಿಶ್ವಪರ್ಯಟನೆ ಮಾಡಿ ಪ್ರಸಿದ್ಧ ಸ್ಥಳಗಳಿಗೆ ತೆರಳಿ ಅಲ್ಲಿ ಫೋಟೊ ತೆಗಿಸಿಕೊಳ್ಳಬೇಕು ಎಂಬುವುದು ಅವರ ಅದಮ್ಯ ಆಸೆ. ಆಸೆ ಜೀವಂತವಾಗಿದ್ದರೂ, ಅವರ ಆರೋಗ್ಯ ಇದಕ್ಕೆ ಸ್ಪಂದಿಸುತ್ತಿಲ್ಲ. ಕೊನೆಗೆ ಒಂದು ಉಪಾಯ ಹೂಡಿದ ಫೋಟೊಗ್ರಾಫರ್ ಮಗ, ವಿಶ್ವದ ಪ್ರಸಿದ್ಧ ಸ್ಥಳಗಳ ಬಳಿ ತನ್ನ ಅಮ್ಮ ನಿಂತಿರುವ ರೀತಿಯಲ್ಲಿ ಫೋಟೊಶಾಪ್ ಮಾಡಿ ಅಮ್ಮನ ಆಸೆಯನ್ನು ಈಡೇರಿಸುವಲ್ಲಿ ಯಶಸ್ವಿಯಾದ. ನನ್ನ ಮಗನ ಈ ಕಾರ್ಯದಿಂದ ನಾನು ನಿಜಕ್ಕೂ ಸಂತುಷ್ಠಳಾಗಿದ್ದೇನೆ ಎನ್ನುತ್ತಾರೆ ನಾಂಗ್ ಲೋಮ್.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಈಕೆ ಮದುವೆ ದಿನದಂದು ಮೇಕಪ್, ಚಿನ್ನಾಭರಣ, ಬೆಲೆಬಾಳುವ ವಸ್ತ್ರ ಧರಿಸದಿರಲು ನಿರ್ಧರಿಸಿದ್ದೇಕೆ ಗೊತ್ತೆ?

ಮುಂದಿನ ಸುದ್ದಿ »

ಆರೆಸ್ಸೆಸ್ ನ ಯಾವ ಹೀರೋ ಕೂಡಾ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿಲ್ಲ: ಪ್ರೊ. ಇರ್ಫಾನ್ ಹಬೀಬ್

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×