Saturday August 12 2017

Follow on us:

Contact Us

ಈಕೆ ಮದುವೆ ದಿನದಂದು ಮೇಕಪ್, ಚಿನ್ನಾಭರಣ, ಬೆಲೆಬಾಳುವ ವಸ್ತ್ರ ಧರಿಸದಿರಲು ನಿರ್ಧರಿಸಿದ್ದೇಕೆ ಗೊತ್ತೆ?

ನ್ಯೂಸ್ ಕನ್ನಡ ವರದಿ-(12.08.17): ಪ್ರತಿಯೋರ್ವ ಹೆಣ್ಣಿಗೂ ತನ್ನ ಮದುವೆ ದಿನದಂದು ಸರ್ವಾಲಂಕಾರ ಭೂಷಿತಳಾಗಿ, ಒಡವೆಗಳಿಂದ ಅಲಂಕೃತಳಾಗಿ, ಬೆಲೆಬಾಳುವ ವಸ್ತ್ರಗಳನ್ನು ಧರಿಸಿ ಮಿಂಚಬೇಕು. ಮದುವೆ ದಿನದ ಕೇಂದ್ರಬಿಂದುವಾಗಿ ಗಮನ ಸೆಳೆಯಬೇಕು ಎಂಬ ಆಗ್ರಹವಿರುವುದು ಸಹಜ. ಆದರೆ ತನ್ನ ಮದುವೆ ದಿನದಂದು ಯಾವುದೇ ರೀತಿಯ ಅಲಂಕಾರಗಳಿಲ್ಲದೇ, ಮೇಕಪ್ ಇಲ್ಲದೇ, ಬೆಲೆಬಾಳುವ ವಸ್ತ್ರಗಳಿಲ್ಲದೇ, ಚಿನ್ನಾಭರಣಗಳೂ ಇಲ್ಲದೇ ವ್ಯತ್ಯಸ್ಥ ರೀತಿಯಲ್ಲಿ ಯುವತಿಯೊಬ್ಬಳು ಬಾಂಗ್ಲಾದೇಶದಲ್ಲಿ ಗಮನ ಸೆಳೆದಿದ್ದಾಳೆ.

ತಸ್ನೀಮ್ ಜರಾ ಎಂಬ ಬಾಂಗ್ಲಾದೇಶದ ಯುವತಿಯು ತನ್ನ ಮದುವೆಯನ್ನು ಸರಳವಾಗಿ ಆಚರಿಸಿ ಸಂಪ್ರದಾಯವಾದಿಗಳನ್ನು ನಿಬ್ಬೆರಗಾಗಿಸಿದ್ದಾರೆ. ಮದುವೆಗೆ ಯಾವುದೇ ಬೆಲೆಬಾಳುವ ಉಡುಗೆಗಳನ್ನು ತೊಡದೇ, ತನ್ನ ಅಜ್ಜಿಯ ಸೀರೆಯನ್ನೇ ಧರಿಸಿದ್ದಾರೆ. ಮಹಿಳೆಯು ಪ್ರದರ್ಶನದ ವಸ್ತುವಲ್ಲ. ಯಾರಿಗೋ ಬೇಕಾಗಿ ನಾವು ನಮ್ಮನ್ನೇ ತೆರೆದಿಡುವುದು ಮಹಿಳೆಗೆ ಅಪಮಾನಕರ. ನನ್ನ ಕುಟುಂಬದವರೂ ನನ್ನೊಂದಿಗೆ ಫೋಟೊ ತೆಗಿಸಲು ನಿರಾಕರಿಸಿದರು. ಆದರೆ ನಾನು ಯಾವುದಕ್ಕೂ ಗಮನ ನೀಡಲಿಲ್ಲ. ಮದುವೆಯ ಹೆಸರಿನಲ್ಲಿ, ವಧುವಿನ ಅಲಂಕಾರ ಎಂಬ ಹೆಸರಿನಲ್ಲಿ ನಡೆಯುವ ದುಂದುವೆಚ್ಚಗಳು ನಿಲ್ಲಬೇಕು ಎನ್ನುತ್ತಾರೆ ತಸ್ನೀಮ್

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಉತ್ತರಪ್ರದೇಶದ ಬಾಬಾ ರಾಘವ್ ದಾಸ್ ಆಸ್ಪತ್ರೆಯಲ್ಲಿ 6 ವರ್ಷಗಳಲ್ಲಿ 3000 ಮಕ್ಕಳು ಮೃತ್ಯು!

ಮುಂದಿನ ಸುದ್ದಿ »

ತನ್ನ 85 ವರ್ಷದ ತಾಯಿಯ ಆಗ್ರಹಗಳನ್ನು ವಿಭಿನ್ನ ರೀತಿಯಲ್ಲಿ ಪೂರೈಸಿದ ಮಗ!

ಸಿನೆಮಾ

 • ಸರಳವಾಗಿ ರಿಜಿಸ್ಟರ್ ಮದುವೆಯಾದ ಮುಸ್ತಫಾ-ಪ್ರಿಯಾಮಣಿ

  August 23, 2017

  ಬೆಂಗಳೂರು: ತಮಿಳು, ತೆಲುಗು, ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಗಳ ಸಿನಿಮಾದಲ್ಲಿ ನಟಿಸಿದ್ದ ಬಹುಭಾಷಾ ತಾರೆ ಪ್ರಿಯಾಮಣಿ ಇಂದು ತಮ್ಮ ಹಲವು ಕಾಲದ ಗೆಳೆಯ ಮುಸ್ತಫಾರಾಜಾರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಜಯನಗರ ರಿಜಿಸ್ಟರ್ ಆಫೀಸಿಗೆ ನಟಿ ...

  Read More
 • ಈ ಬಾರಿ ಗಣೇಶೋತ್ಸವ ಆಚರಿಸದ ಸಲ್ಮಾನ್ ಖಾನ್: ಕಾರಣವೇನು ಗೊತ್ತೇ?

  August 22, 2017

  ನ್ಯೂಸ್ ಕನ್ನಡ-(22.08.17): ಬಾಲಿವುಡ್ ನಟ ಸಲ್ಮಾನ್ ಖಾನ್ ಗಣಪತಿ ಭಕ್ತನಾಗಿದ್ದು, ಪ್ರತೀವರ್ಷವೂ ತಮ್ಮ ಮನೆಯಲ್ಲಿ ಗಣೇಶೋತ್ಸವವನ್ನು ಆಚರಿಸುತ್ತಾರೆ. ಆದರೆ ಈ ಬಾರಿ ಸತತ 15ವರ್ಷಗಳಿಂದ ತಮ್ಮ ಮನೆಯಲ್ಲಿ ನಡೆಸುತ್ತಾ ಬಂದಿದ್ದ ವೈಭವದ ಗಣೇಶೋತ್ಸವವನ್ನು ಕೈಬಿಟ್ಟು ಸಲ್ಮಾನ್ ಖಾನ್ ...

  Read More
 • ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆಗೈದ ತಮಿಳು ನಟ ಆರ್ಯ

  August 21, 2017

  ನ್ಯೂಸ್ ಕನ್ನಡ ವರದಿ-(21.08.17): ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿರುವ ಖ್ಯಾತ ಯುವನಟ ಆರ್ಯ ಮಮ್ಮೂಟಿ ಅಭಿನಯದ ಗಾಡ್ ಫಾದರ್ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ಕೇರಳದಾದ್ಯಂತ ಅಸಂಖ್ಯಾತ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದರು. ಇದೀಗ ಸೂಪರ್ ಹಿಟ್ ಚಿತ್ರವಾದ ...

  Read More
 • ಕನ್ನಡ ಸಿನಿಮಾದಲ್ಲಿ ಬಣ್ಣ ಹಚ್ಚಲಿರುವ ಕ್ರಿಕೆಟಿಗ ಶ್ರೀಶಾಂತ್!

  August 16, 2017

  ಸ್ಪಾಟ್ ಫಿಕ್ಸಿಂಗ್, ಮ್ಯಾಚ್ ಫಿಕ್ಸಿಂಗ್‌ ಆರೋಪಗಳಿಂದ ಕಂಗಾಲಾಗಿದ್ದ ಕೇರಳ ಮೂಲದ ವೇಗಿ, ರಾಜಸ್ಥಾನ್ ರಾಯಲ್ಸ್‌ನ ಮಾಜಿ ಆಟಗಾರ ಶ್ರೀಶಾಂತ್ ಇತ್ತೀಚೆಗಷ್ಟೆ ನಿರಾಳರಾಗಿದ್ದಾರೆ. ಅವರ ಮೇಲೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಜೀವ ನಿಷೇಧ ಹೇರಿತ್ತು. ಇತ್ತೀಚೆಗಷ್ಟೇ ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×