Friday June 16 2017

Follow on us:

Contact Us

ಖಾಲಿ ಜೇಬಿನ ಸರದಾರನಾಗಿದ್ದ ಗೂಗಲ್ ಸಿಇಒ ಪ್ರೇಮಕಥೆ ಗೊತ್ತಾ?

ಅವರಿಬ್ಬರ ಪ್ರೀತಿ ಹುಟ್ಟಿಕೊಂಡಿದ್ದು ಕಾಲೇಜು ದಿನಗಳಲ್ಲಿ. ಆಕೆ ಹೆಸರು ಅಂಜಲಿ; ಆತನ ಹೆಸರು ಸುಂದರ್ ಪಿಚೈ; ಸದ್ಯ ಗೂಗಲ್ ಸಂಸ್ಥೆಯ ಸಿಇಒ. ಅವರ ಪ್ರತಿ ದಿನದ ಸಂಬಳವೇ 3.5 ಕೋಟಿ. ಆದರೆ ಅಂಜಲಿ ಪ್ರೇಮದ ಬಲೆಯಲ್ಲಿ ಬಿದ್ದಾಗ ಪಿಚೈ ಜೇಬಿನಲ್ಲಿ ಏನೂ ಇರಲಿಲ್ಲ; ಖಾಲಿ ಜೇಬು. ಅವತ್ತಿಗೆ ಚೆನ್ನೈ ಅಪಾರ್ಟ್ಮೆಂಟ್ ಒಂದರಲ್ಲಿ ಪಿಚೈ ವಾಸವಾಗಿದ್ದರು. ಕಾರಿರಲಿಲ್ಲ, ಮನೆಯಲ್ಲೊಂದು ಟಿವಿಯೂ ಇರಲಿಲ್ಲ.

ಅಲ್ಲಿಂದ ಐಐಟಿ ಖರಗ್ ಪುರದಲ್ಲಿ ಎಂಜಿನಿಯರಿಂಗ್ ಅಭ್ಯಾಸ ಮಾಡಲು ಇಬ್ಬರೂ ತೆರಳಿದರು. ಅಲ್ಲಿ ಡೇಟಿಂಗ್ ಆರಂಭಿಸಿದರು. ಜೇಬಿನಲ್ಲಿ ಕಾಸಿಲ್ಲದಿದ್ದರೇನಂತೆ ಹೃದಯ ಶ್ರೀಮಂತವಾಗಿತ್ತು. ಪಿಚೈ ಅಂಜಲಿ ಮುಂದೆ ಮದುವೆ ಪ್ರಸ್ತಾಪ ಇಟ್ಟರು. ಅಂಜಲಿಯೂ ಅಷ್ಟೆ ಅತ್ತಿತ್ತ ನೋಡದೆ ಮದುವೆಗೆ ಒಪ್ಪಿಗೆ ನೀಡಿಯೇ ಬಟ್ಟರು. ಅಂಜಲಿಗೆ ಪಿಚೈ ಬಡತನದ ಬಗ್ಗೆ ಗೊತ್ತಿರಲಿಲ್ಲವೆಂದಲ್ಲ. ಸುಂದರ್ ಮನೆಯ ಎಲ್ಲಾ ಪರಿಸ್ಥಿತಿಯೂ ಅಂಜಲಿಗೆ ಗೊತ್ತಿತ್ತು. ಹೀಗಿದ್ದೂ ಮದುವೆಗೆ ಒಪ್ಪಿಕೊಂಡರು.

ಮುಂದೆ ಸುಂದರ್ ಪಿಚೈ ಸ್ನಾತಕೋತ್ತರ ವ್ಯಾಸಾಂಗಕ್ಕೆ ಅಮೆರಿಕಾಗೆ ಹಾರಿದರು. ಆದರೆ ಅಂಜಲಿ ಮಾತ್ರ ಭಾರತದಲ್ಲೇ ಉಳಿದುಕೊಂಡರು. ಅಮೆರಿಕಾದಿಂದ ಮರಳಿದರೂ ಫೋನ್ ಕೊಳ್ಳುವಷ್ಟೂ ಹಣ ಪಿಚೈ ಬಳಿ ಉಳಿದಿರಲಿಲ್ಲ. ಅದೇ ಕಾರಣಕ್ಕೆ ಇಬ್ಬರ ನಡುವೆ ಹುಸಿ ಮುನಿಸು. ಆರು ತಿಂಗಳು ಒಬ್ಬರಿಗೊಬ್ಬರು ಮಾತೂ ಆಡಲಿಲ್ಲ. ಮುಂದೆ ಸುಂದರ್ ಪಿಚ್ಚೈ ಗೂಗಲ್ ನಲ್ಲಿ ಕೆಲಸ ಸಿಕ್ಕಿತು. ಅಂಜಲಿಯೂ ಅಮೆರಿಕಾಗೆ ಶಿಫ್ಟ್ ಆದರು. ಒಂದಷ್ಟು ಹಣ ಕೈ ಸೇರುತ್ತಿದ್ದಂತೆ ಸುಂದರ್ ಪಿಚೈ ಮದುವೆಯಾಗಲು ನಿರ್ಧರಿಸಿದರು. ಹೀಗೆ ಅಂಜಲಿ ಮತ್ತು ಪಿಚೈ ಮದುವೆಯಾಯಿತು.

ಆದರೆ ಇಂಟರೆಸ್ಟಿಂಗ್ ಪಾಯಿಂಟ್ ಇರುವುದು ಇಲ್ಲಿ. ಮದುವೆಯಾದ ನಂತರ ಇಬ್ಬರೂ ಒಟ್ಟಿಗೆ ಬಾಳಲು ಆರಂಭಿಸಿದರು. ಆಗ ಪಿಚೈಗೆ ಮೈಕ್ರೋಸಾಫ್ಟ್, ಯಾಹೂ ಮತ್ತು ಟ್ವಿಟ್ಟರಿನಿಂದ ಆಫರ್ ಗಳು ಬಂದಿದ್ದವು. ಆದರೆ ಅಂಜಲಿ ಮಾತ್ರ ಅದ್ಯಾವುದೂ ಬೇಡ ಗೂಗಲ್ ನಲ್ಲೇ ಮುಂದುವರಿಯಿರಿ ಎಂದು ಪಿಚೈಗೆ ಪ್ರೀತಿಯಲ್ಲಿ ತಾಕೀತು ಮಾಡಿದರು. ಪರಿಣಾಮ ನಾನಿವತ್ತು ಗೂಗಲ್ ಸಿಇಒ ಆಗಿದ್ದೇನೆ ಎಂದು ಅವತ್ತಿನ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ಸುಂದರ್ ಪಿಚೈ.ಇದಕ್ಕೆ ಅಲ್ವಾ ಹೇಳುವುದು ಪ್ರತಿ ಯಶಸ್ವೀ ಪುರುಷನ ಹಿಂದೆಯೂ ಆದರ್ಶ ಪತ್ನಿ ಇರುತ್ತಾಳೆ ಅಂತ. ಮದುವೆಯಾಗುವಾಗ ಹಣವಿಲ್ಲದಿದ್ದರೇನಂತೆ ಇವತ್ತು ದಂಪತಿಗಳು ಅಮೆರಿಕಾದ ಭವ್ಯ ಬಂಗಲೆಯಲ್ಲಿ ವಾಸವಾಗಿದ್ದಾರೆ. ಕಾವ್ಯ ಮತ್ತು ಕಿರಣ್ ಎಂಬ ಇಬ್ಬರು ಮಕ್ಕಳೂ ಇದ್ದಾರೆ.

courtesy: oneindia kannada

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಪ್ರೇಮ ನಿರಾಕರಿಸಿದ ಯುವತಿಗೆ ಹಾಡಹಗಲೇ ಯುವಕನಿಂದ ಥಳಿತ: ಪ್ರಕರಣ ದಾಖಲು

ಮುಂದಿನ ಸುದ್ದಿ »

ಇಸ್ರೇಲ್ ನಿಂದ ಸೌದಿ ಅರೇಬಿಯಾಕ್ಕೆ ನೇರ ವಿಮಾನ ಹಾರಾಟ: ಮುಂದುವರಿಯುತ್ತಿರುವ ಮಾತುಕತೆ

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಕನ್ನಡ ಸಿನಿಮಾದಲ್ಲಿ ಬಣ್ಣ ಹಚ್ಚಲಿರುವ ಕ್ರಿಕೆಟಿಗ ಶ್ರೀಶಾಂತ್!

    August 16, 2017

    ಸ್ಪಾಟ್ ಫಿಕ್ಸಿಂಗ್, ಮ್ಯಾಚ್ ಫಿಕ್ಸಿಂಗ್‌ ಆರೋಪಗಳಿಂದ ಕಂಗಾಲಾಗಿದ್ದ ಕೇರಳ ಮೂಲದ ವೇಗಿ, ರಾಜಸ್ಥಾನ್ ರಾಯಲ್ಸ್‌ನ ಮಾಜಿ ಆಟಗಾರ ಶ್ರೀಶಾಂತ್ ಇತ್ತೀಚೆಗಷ್ಟೆ ನಿರಾಳರಾಗಿದ್ದಾರೆ. ಅವರ ಮೇಲೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಜೀವ ನಿಷೇಧ ಹೇರಿತ್ತು. ಇತ್ತೀಚೆಗಷ್ಟೇ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×