Friday November 10 2017

Follow on us:

Contact Us

ಚೊಚ್ಚಲ ಪಂದ್ಯವಾಡಿದ ಮುಹಮ್ಮದ್ ಸಿರಾಜ್ ಕೈಗೆ ಟ್ರೋಫಿ ನೀಡಿದ ವಿರಾಟ್ ಕೊಹ್ಲಿ

ನ್ಯೂಸ್ ಕನ್ನಡ ವರದಿ(10.11.2017): ಭಾರತೀಯ ಕ್ರಿಕೆಟ್ ತಂಡ ನ್ಯೂಜಿಲೆಂಡ್ ವಿರುದ್ಧ ತೃತೀಯ ಟಿ20 ಪಂದ್ಯ ಗೆದ್ದು ಸರಣಿ ತನ್ನದಾಗಿಸಿಕೊಂಡಿತು ಮತ್ತು ಕಪ್ತಾನ ವಿರಾಟ್ ಕೊಹ್ಲಿಯ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಯಿತು. ಇದೀಗ ಕ್ಯಾಪ್ಟನ್ ಕೋಹ್ಲಿ ಸರಣಿ ಗೆದ್ದು ಪಡೆದ ಟ್ರೋಫಿಯನ್ನು ಸಿರಾಜ್ ಕೈಗೆ ನೀಡಿ ಹುರುದುಂಬಿಸಿದ ವೀಡಿಯೋ ವೈರಲ್ ಆಗಿದ್ದು, ಸಾರ್ವಜನಿಕ ಜಾಲತಾಣದಲ್ಲಿ ಪ್ರಶಂಸೆಯ ಸುರಿಮಳೆಯಾಗಿದೆ.

ಪ್ರಬುದ್ಧ ನಾಯಕನು ತನ್ನ ತಂಡದ ಪ್ರತಿಯೊಬ್ಬನನ್ನು ಹುರುದುಂಬಿಸಿ ಪ್ರೋತ್ಸಾಹಿಸಿ ಅವರನ್ನು ಯಶಸ್ಸಿನೆಡೆಗೆ ಕೊಂಡೊಯ್ಯುತ್ತಾನೆ. ಅದೇ ರೀತಿಯಲ್ಲಿ ಪ್ರಥಮ ಬಾರಿಗೆ ಭಾರತ ತಂಡಕ್ಕೆ ಆಯ್ಕೆಯಾಗಿ ಚೊಚ್ಚಲ ಟ್ವೆಂಟಿ ಟ್ವೆಂಟಿ ಪಂದ್ಯವಾಡಿದ್ದ ಹೈದರಾಬಾದಿನ ವೇಗದ ಬೌಲರ್ ಮಹಮ್ಮದ್ ಸಿರಾಜ್ ಗೆ ಭಾರತ ತಂಡದ ಗೆಲುವಿನ ಸಂಭ್ರಮಾಚರಣೆಯಲ್ಲಿ ಸ್ವತಹ ಭಾಗವಹಿಸುವ ಮೊದಲ ಅನುಭವ. ಆ ಸಂದರ್ಭದಲ್ಲಿ ಗೆದ್ದ ಟ್ರೋಫಿಯನ್ನು ತಂದ ವಿರಾಟ್ ಕೊಹ್ಲಿ ನೇರವಾಗಿ ಸಿರಾಜ್ ಕೈಗೆ ತಂದಿಟ್ಟು ಅವರ ಜೀವನದ ಅತ್ಯಂತ ರೋಚಕ ಸಂತೋಷದ ಕ್ಷಣಕ್ಕೆ ಸಾಕ್ಷಿಯಾದರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಪದವು ಎಂಬ ಊರು ಟಿಪ್ಪುನಗರವಾದ ಕಥೆ…!

ಮುಂದಿನ ಸುದ್ದಿ »

ಉತ್ತರ ಕನ್ನಡ: ಮಹಬಲೇಶ್ವರ ದೇವಸ್ಥಾನದಲ್ಲಿ ಟಿಪ್ಪು ಸುಲ್ತಾನ್ ಹೆಸರಲ್ಲಿ ನಡೆಯುತ್ತೆ ನಿತ್ಯ ಪೂಜೆ!

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×