Friday October 2 2015

Follow on us:

Contact Us
sharaja 5

ಶಾರ್ಜ ಅಪಾರ್ಟ್ ಮೆಂಟಿನಲ್ಲಿ ಬೆಂಕಿ ಅವಘಡ; ಮನೆಕಳೆದುಕೊಂಡ 250 ಕುಟುಂಬಗಳು

ಶಾರ್ಜ: ಇಲ್ಲಿಯ ಕಿಂಗ್ ಫೈಝಲ್ ರಸ್ತೆಯ ಸಮೀಪದಲ್ಲಿರುವ ವಸತಿ ಸಮುಚ್ಚಯ ಅಲ್ -ನಾಸೆರ್ ಟವರ್ ನಲ್ಲಿ ಬೆಂಕಿ ಅಪಘಾತ ಸಂಭವಿಸಿದ್ದು, 250 ಕುಟುಂಬಗಳು ಮನೆಕಳೆದುಕೊಂಡಿವೆ. ಅಲ್ಲದೆ, ವಿದೇಶಿ ನಿವಾಸಿಗಳಲ್ಲಿ ಕೆಲವರು ತಮ್ಮ ಮಹತ್ವದ ದಾಖಲೆಗಳು ಬೆಂಕಿಗೆ ಆಹುತಿಯಾದ ಭೀತಿಯಲ್ಲಿದ್ದಾರೆ.

36 ಮಹಡಿಗಳಿರುವ, 24 ನಿವಾಸ ಹಾಗೂ 6 ಪಾರ್ಕಿಂಗ್ ವ್ಯವಸ್ಥೆಗಳಿರುವ ಈ ಕಟ್ಟಡದ  ಅಪಾರ್ಟ್ ಮೆಂಟಿನ ಮೊದಲ ಮಹಡಿಯಲ್ಲಿ ನಿನ್ನೆ ಮಧ್ಯಾಹ್ನ 2.15ಕ್ಕೆ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲೇ ಬೆಂಕಿ ಜ್ವಾಲೆಗಳು ಮೇಲಿನ ಮಹಡಿಗಳಿಗೂ ಹರಡಿದ್ದು, ಕಟ್ಟಡದ ಅತ್ಯಂತ ಮೇಲಿನ ಮಹಡಿಯವರೆಗೂ ತಲುಪಿದೆ.

ಪ್ರಾಣಹಾನಿಯಂತಹ ಗಂಭೀರ ಅವಘಡಗಳೇನೂ ಸಂಭವಿಸದಿದ್ದರೂ, ನಾಗರಿಕ ಭದ್ರತಾ ಅಧಿಕಾರಿಗಳ ಪ್ರಕಾರ, 6ನೇ ಹಂತದಲ್ಲಿ ಪಾರ್ಕಿಂಗ್ ಮಾಡಲಾಗಿದ್ದ 14 ಕಾರುಗಳು ಧ್ವಂಸಗೊಂಡಿವೆ.

ಬೆಂಕಿಯಿಂದಾಗಿ ಉಸಿರಾಟದ ತೊಂದರೆಗೊಳಗಾದ 40 ಮಂದಿಯನ್ನು ಐದು ಆಂಬ್ಯಲೆನ್ಸುಗಳ ಮೂಲಕ ಶಾರ್ಜಾದ ಅಲ್-ಖಾಸಿಮಿ ಹಾಗೂ ಅಲ್-ಕುವೈಟಿ ಆಸ್ಪತ್ರೆಗೆಗಳಿಗೆ ದಾಖಲಿಸಲಾಯಿತು.sharja 3

ಬೆಂಕಿಗಾಹುತಿಯಾದ ಕಟ್ಟಡದ ಹಾಗೂ ನೆರೆಯ ಕಟ್ಟಡಗಳ ನಿವಾಸಿಗಳನ್ನು ವಾಯು ವಿಭಾಗದ ಪೊಲೀಸರು ಸ್ಥಳಾಂತರಿಸಿದರು. ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಲು ಹರ ಸಾಹಸಪಟ್ಟರು. ವಾಯು ಪಡೆಗಳ ಸಿಬ್ಬಂದಿಗಳು ಧ್ವನಿ ವರ್ಧಕಗಳ ಮೂಲಕ ನಿವಾಸಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸುತ್ತಿದ್ದುದು ಕಂಡು ಬಂತು. ನಿವಾಸಿಗಳನ್ನು ಸ್ಥಳಾಂತರಿಸುವ ಸಂದರ್ಭದಲ್ಲಿ ವಾಯು ಪಡೆಯ ಸಿಬ್ಬಂದಿಗಳು, ಪೊಲೀಸರು ಹಾಗೂ ನಾಗರಿಕ ಭದ್ರತಾ ಪಡೆಯ ಸಿಬ್ಬಂದಿಗಳು ಅಪಾರ್ಟ್ ಮೆಂಟಿನಿಂದ ಅಪಾರ್ಟ್ ಮೆಂಟಿಗೆ ಧಾವಿಸಿದ್ದು, ಯಾವುದೇ ಪ್ರಾಣಾಪಾಯವಾಗದಂತೆ ನಿವಾಸಿಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.

ಅಲ್ಲದೆ, ಪೊಲೀಸರು ಸಾಮಾಜಿಕ ತಾಣಗಳ ಮೂಲಕ ಕಿಂಗ್ ಫೈಝಲ್ ರಸ್ತೆಯ ಮೂಲಕ ಪ್ರಯಾಣಿಸದಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದರು. ಅಲ್ಲದೆ, ಸ್ಥಳಕ್ಕೆ ರೆಡ್ ಕ್ರೆಸೆಂಟ್ ಹಾಗೂ ಇತರ ಸಂಘಸಂಸ್ಥೆಗಳ ಕಾರ್ಯಕರ್ತರು ಧಾವಿಸಿ ಬಂದಿದ್ದು, ನಿವಾಸಿಗಳಿಗೆ ತಕ್ಕ ಮಟ್ಟಿಗೆ ನೆರವಾಗಿದ್ದಾರೆ.sharja2

ಗಾಬರಿಗೊಂಡ ನಿವಾಸಿಗಳು ಒಮ್ಮೆಲೆ ಧಾವಿಸಿ ಬಂದ ಪರಿಣಾಮ ಮತ್ತು ಎಕ್ಸಿಟ್ ಬಾಗಿಲು ಭಾಗಶಃ ಮುಚ್ಚಿಕೊಂಡಿದ್ದರಿಂದ ಕಾಲ್ತುಳಿತ ಉಂಟಾಗಿ ಸಣ್ಣಪುಟ್ಟ ಗಾಯಗಳಾದವು. ಮೂಲಗಳ ಪ್ರಕಾರ, ಕಟ್ಟಡದಲ್ಲಿ ಕನಿಷ್ಠ ಅಗ್ನಿ ನಿರೋಧಕ ವ್ಯವಸ್ಥೆಗಳಿರಲಿಲ್ಲ. ಅಗ್ನಿ ಅನಾಹುತ ಸಂಭವಿಸುವ ಸಂದರ್ಭದಲ್ಲಿ ನಿವಾಸಿಗಳನ್ನು ಎಚ್ಚರಿಸಲು ಅಲರಾಂ ಹಾಗೂ ಬೆಂಕಿ ನಂದಿಸುವ ವ್ಯವಸ್ಥೆಯೂ ಇರಲಿಲ್ಲ ಎನ್ನಲಾಗಿದೆ. ಎರಡು ತಿಂಗಳ ಹಿಂದೆ ಕಡು ಬೇಸಿಗೆ ಸಂದರ್ಭದಲ್ಲಿ ಎಸಿ ವ್ಯವಸ್ಥೆ ಮಾಡಲಾಗಿಲ್ಲ ಎಂದು ನಿವಾಸಿಗಳು ಕಟ್ಟಡದ ಮಾಲಕರ ವಿರುದ್ಧ ದೂರು ಸಲ್ಲಿಸಿದ್ದರು. ಆದಾಗ್ಯೂ, ಯಾವುದೇ ಕ್ರಮ ತೆಗೆದುಕೊಳ್ಳಲಾಗದ ಕಾರಣ, ಶಾರ್ಜ ಮುನ್ಸಿಪಾಲಿಟಿ ಮಾನವೀಯ ನೆಲೆಯಲ್ಲಿ ಮಧ್ಯಪ್ರವೇಶಿಸಿ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಟ್ಟಿತ್ತು.

sharja

“ಬೆಂಕಿ ಅವಘಡದ ಸಂದರ್ಭದಲ್ಲಿ ನಾನು ಮತ್ತು ಪತ್ನಿ ಕೆಲಸಕ್ಕೆ ತೆರಳಿದ್ದೆವು. ಅನಾಹುತ ಕುರಿತು ನಮಗೆ ಪೋನ್ ಮೂಲಕ ತಿಳಿದಿದ್ದು, ತಕ್ಷಣ ನನ್ನ ಅಪಾರ್ಟ್ ಮೆಂಟಿಗೆ ಧಾವಿಸಿದೆ. ಆದರೆ, ಪೊಲೀಸರು ನನ್ನನ್ನು ತಡೆದರು. ನನ್ನ ಅತೀ ಮುಖ್ಯ ದಾಖಲೆಗಳು ಹಾಗೂ ಇತರ ವಸ್ತುಗಳು ಪ್ಲಾಟ್ ಒಳಗಡೆ ಉಳಿದಿವೆ. ನನ್ನ ಬಳಿ ಹಣವೂ ಇಲ್ಲ. ಇದೆಲ್ಲ ನಮಗೆ ತಿಳಿದಿರಲಿಲ್ಲ. ನಾವೇನು ಮಾಡಲಿ” ಎಂದು ಸಫ್ವಾನ್ ಅಬ್ದುಲ್ ಕರೀಮ್ ಎಂಬವರು ಮಾಧ್ಯಮವೊಂದರ ಜೊತೆ ತಮ್ಮ ಅಹವಾಲು ತೋಡಿಕೊಂಡಿದ್ದಾರೆ.

ಅವಘಡದ ಸಂದರ್ಭದಲ್ಲಿ ಕೆಲವರು ಕೆಲಸಕ್ಕೆ ತೆರಳಿದ್ದರೆ, ಇನ್ನು ಕೆಲವರು ಗಾಢ ನಿದ್ರೆಯಲ್ಲಿದ್ದರು. ಫಕೀರ್ ಆಸಿಫ್ ಎಂಬವರು ಅವಘಡದ ಸಂದರ್ಭದಲ್ಲಿ ನಿದ್ದೆಯಲ್ಲಿದ್ದು, ಪೊಲೀಸರ ಧ್ವನಿವರ್ಧಕದ ಶಬ್ಧಕ್ಕೆ ಬೆಚ್ಚಿ ಬಿದ್ದಿರುವುದಾಗಿ ಹೇಳಿಕೊಂಡಿದ್ದಾರೆ.

ಈ ಸಂಬಂಧ ರಿಯಲ್ ಎಸ್ಟೇಟ್ ಕಂಪೆನಿ ಎನ್ ಎಂ ಎಯನ್ನು ತಾನು ಸಂಪರ್ಕಿಸಲು ಯತ್ನಿಸಿದ್ದು, ಯಾವುದೇ ಪ್ರತಿಕ್ರಿಯೆ ಇಲ್ಲ ಎಂದು ಖಲೀಜ್ ಟೈಮ್ಸ್ ಹೇಳಿದೆ.

nksw

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಭಯೋತ್ಪಾದನೆ ಬಿಟ್ಟುಬಿಡಿ, ಆ ಮೇಲೆ ಮಾತ್ನಾಡೋಣ: ವಿಶ್ವ ಸಂಸ್ಥೆಯಲ್ಲಿ ಪಾಕ್ ಗೆ ಸುಶ್ಮಾ ಸ್ವರಾಜ್ ಖಡಕ್ ಉತ್ತರ

ಮುಂದಿನ ಸುದ್ದಿ »

ನೂರು ವಿಘ್ನ, ನೂರು ಆತಂಕ, ಹಾದಿತುಂಬಾ ಮುಳ್ಳುಗಳು.. ಅದೆಲ್ಲವನ್ನೂ ಮೀರಿ…

ಸಿನೆಮಾ

 • 3

  ನನಗೂ ತುಳು ಸಿನಿಮಾದಲ್ಲಿ ನಟಿಸುವ ಆಸೆ: ಶಿವರಾಜ್ ಕುಮಾರ್

  January 19, 2017

  – ಶಫೀ ಉಚ್ಚಿಲ ನ್ಯೂಸ್ ಕನ್ನಡ ವರದಿ (19-1-17): ಕಾಪು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ಟಗರು ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ‘ಟಗರು’ ತಂಡ ಎರಡನೇ ಹಂತವನ್ನು ಕಾಪು ಸಮೀಪದ ಉಚ್ಚಿಲದಲ್ಲಿ ಚಿತ್ರೀಕರಿಸುತ್ತಿದ್ದು, ...

  Read More
 • Chennai-Express-First-Look-tbwm

  ಚೆನ್ನೈ ಎಕ್ಸ್ ಪ್ರೆಸ್ ನಿರ್ಮಾಪಕನ ವಿರುದ್ಧ ಅತ್ಯಾಚಾರ ಆರೋಪ

  January 18, 2017

  ನ್ಯೂಸ್ ಕನ್ನಡ(18-1-2017): ಸೂಪರ್ ಹಿಟ್ ಬಾಲಿವುಡ್ ಚಲನಚಿತ್ರ “ಚೆನ್ನೈ ಎಕ್ಸ್ ಪ್ರೆಸ್”ನ ನಿರ್ಮಾಪಕ ಕರೀಂ ಮೊರಾನಿ ವಿರುದ್ಧ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 25 ವರ್ಷದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರಗೈದಿರುವುದಾಗಿ ದೂರು ದಾಖಲಾಗಿದ್ದು, ...

  Read More
 • ra-one

  “ರಾ ಒನ್” ಚಿತ್ರದ ರಾಷ್ಟ್ರಪ್ರಶಸ್ತಿ ವಿಜೇತ ಅನಿಮೇಟರ್ ನಿಧನ

  January 18, 2017

  ನ್ಯೂಸ್ ಕನ್ನಡ(18-1-2017): ರಾ ಒನ್ ಚಿತ್ರದ ಅನಿಮೇಷನ್ ಗಾಗಿ ರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದ ಚಾರು ಖಂದಾಲ್ ನಿಧನರಾಗಿದ್ದಾರೆ. 4 ವರ್ಷಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚಾರು ದೀರ್ಘಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಶಾರುಕ್ ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×