Tuesday September 29 2015

Follow on us:

Contact Us

“ಸುಲ್ತಾನ್” ಗಾಗಿ ದಬಂಗ್ ‘ಚುಲ್ ಬುಲ್ ಪಾಂಡೆ ಜೀ’ ಯಿಂದ ಕುಸ್ತಿ ಕಸರತ್ತು!

ನ್ಯೂಸ್ ಕನ್ನಡ ಮೀಡಿಯ ನೆಟ್ ವರ್ಕ್

ಮುಂಬೈ: ‘ದಬಂಗ್’ ನಲ್ಲಿ ಪೋಲಿಸ್, ‘ಕಿಕ್’ ನಲ್ಲಿ ಕಳ್ಳ, ಕ್ಯೂಂ ಕೆ.. ಯಲ್ಲಿ ಮಾನಸಿಕ ಅಸ್ವಸ್ಥ, ಬಾಡಿಗಾರ್ಡ್ ನಲ್ಲಿ ಗಂಭೀರ ಪಾತ್ರ ಹೀಗೇ ಎಲ್ಲಾ ಪಾತ್ರಗಳಿಗೂ ಸೈ ಎನಿಸಿರುವ ಬಾಲಿವುಡ್ ನ ಭಾಯಿಜಾನ್ ಸಲ್ಮಾನ್ ಖಾನ್ ತನ್ನ ಮುಂಬರುವ ಚಿತ್ರ “ಸುಲ್ತಾನ್” ಗಾಗಿ ಕುಸ್ತಿ ಮತ್ತು ಮಾರ್ಷಲ್ ಆರ್ಟ್ಸ್ ಗಳನ್ನು ಅಭ್ಯಾಸ ಮಾಡುತ್ತಿದ್ದಾರಂತೆ. ಅದಕ್ಕಾಗಿ ಅಂತರ್ರಾಷ್ಟ್ರೀಯ ಆಕ್ಷನ್ ನಿರ್ದೇಶಕ ಲಾರ್ನೆಲ್ ಸ್ಟೊವಾಲ್ ಜೊತೆ ತರಬೇತಿ ಪಡೆಯಲು ಲಾಸ್ ಏಂಜಲೀಸ್ ಗೆ ಹಾರಿದ್ದಾರಂತೆ.. ಈ ಕುರಿತು ನಿರ್ದೇಶಕ ಅಲಿ ಅಬ್ಬಾಸ್ ಝಫರ್ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

 ದಿನಂಪ್ರತಿ ಲಾರ್ನೆಲ್ ಜೊತೆ ನಾಲ್ಕು ಘಂಟೆಗಳ ಕಠಿಣ ತರಬೇತಿ ಪಡೆಯುತ್ತಿರುವ ದಬಂಗ್ ‘ಪಾಂಡೇ ಜಿ’ ಎರಡು ತಿಂಗಳ ಕಾಲ ನಿರಂತರ ತರಬೇತಿ ಪಡೆದು ಕಟ್ಟುಮಸ್ತು ಕುಸ್ತಿಪಟು “ಸುಲ್ತಾನ್” ಆಗಿ ಬದಲಾಗಲಿದ್ದಾರೆ. ನವೆಂಬರ್ ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು, ಮುಂದಿನ ರಮಝಾನ್ ಹಬ್ಬದ ಸಂದರ್ಭ ಚಿತ್ರ ತೆರಕಾಣುವ ನಿರೀಕ್ಷೆ ಇದೆ.

 “ಸುಲ್ತಾನ್” ಒಬ್ಬ ಕುಸ್ತಿಪಟುವಿನ ಜೀವನದ ಕಥೆಯನ್ನು ಹೊಂದಿದೆ. ಯಶ್ ರಾಜ್ ಬ್ಯಾನರ್ ಅಡಿಯಲ್ಲಿ, ಆದಿತ್ಯ ಚೋಪ್ರಾ ನಿರ್ಮಾಣದಲ್ಲಿ ಸೆಟ್ಟೇರಲಿರುವ ಚಿತ್ರದಲ್ಲಿ ಸಲ್ಮಾನ್ ಖಾನ್ ಪ್ರಧಾನ ಪಾತ್ರದಲ್ಲಿದ್ದು ಅವರ ನಾಯಕಿ ಇನ್ನಷ್ಟೇ ಆಯ್ಕೆಯಾಗಬೇಕಿದೆ.

 

nkrq

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ತಮಿಳುನಾಡಿಗೆ ಕಾವೇರಿ ನೀರು ಬಿಡುವ ಪರಿಸ್ಥಿತಿಯಲ್ಲಿ ರಾಜ್ಯವಿಲ್ಲ: ಕರ್ನಾಟಕ ಸರಕಾರ

ಮುಂದಿನ ಸುದ್ದಿ »

ತೂಕದ ಯಂತ್ರದ ಜೊತೆ ಬೀದಿ ಮೇಲೆ ಕೂತ ಬಾಲಕ ಹರೇಂದ್ರನಿಗೆ ಅಖಿಲೇಶ್ ನೆರವು

ಸಿನೆಮಾ

  • kattappa

    ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಕರ್ನಾಟಕದಲ್ಲಿ!

    March 18, 2017

    ನ್ಯೂಸ್ ಕನ್ನಡ ವರದಿ(18.03.2017)-ಬೆಂಗಳೂರು: ಬಾಹುಬಲಿ-2 ಚಿತ್ರಕ್ಕೆ ಕರ್ನಾಟಕದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರವನ್ನು ನಿಷೇಧ ಮಾಡುವಂತೆ ಭಾರೀ ಒತ್ತಾಯಗಳು ಕೇಳಿ ಬಂದಿದೆ. ತಮಿಳು ನಟ ಸತ್ಯರಾಜ್ ಕಾವೇರಿ ಹೋರಾಟದ ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿ ಕನ್ನಡಿಗರ ...

    Read More
  • eega

    ಕಿಚ್ಚ ಸುದೀಪ್ ಗೆ ಆಂಧ್ರ ಸರಕಾರದ ನಂದಿ ಪ್ರಶಸ್ತಿ

    March 1, 2017

    ನ್ಯೂಸ್ ಕನ್ನಡ(1-3-2017): 2012-13ನೆ ಸಾಲಿನ “ನಂದಿ ಪ್ರಶಸ್ತಿ”ಯನ್ನು ಆಂಧ್ರಪ್ರದೇಶ ಸರಕಾರ ಘೋಷಿಸಿದ್ದು, “ಅಭಿನಯ ಚಕ್ರವರ್ತಿ” ಕಿಚ್ಚ ಸುದೀಪ್ ಅತ್ಯುತ್ತಮ ಖಳನಟನಾಗಿ ಆಯ್ಕೆಯಾಗಿದ್ದಾರೆ. 2012ರಲ್ಲಿ ಬಿಡುಗಡೆಯಾಗಿದ್ದ, ಎಸ್.ಎಸ್. ರಾಜಮೌಳಿ ನಿರ್ದೇಶನದ “ಈಗ” ಚಿತ್ರದ ನಟನೆಗಾಗಿ ಸುದೀಪ್ ಅವರಿಗೆ “ನಂದಿ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×