Saturday October 7 2017

Follow on us:

Contact Us

ಮಳೆಯಿಂದಾಗಿ ಪಡುಬಿದ್ರಿ ಹೆದ್ದಾರಿ ಕಾಮಗಾರಿ ವಿಳಂಬವಾಯಿತೇ..?

 

 ನ್ಯೂಸ್ ಕನ್ನಡ ವರದಿ-(07.10.17): ಇಲ್ಲಿಯ ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿಯು ಮಂದಗತಿಯಲ್ಲಿ ಸಾಗುತ್ತಿದ್ದು, ತುರ್ತಾಗಿ ಕಾಮಗಾರಿ ನಡೆಸುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಮುನ್ನ ಪೇಟೆಭಾಗವಾಗಿ ಹಾಗೂ ಬೈಪಾಸ್ ಮಾಡುವುದಾಗಿ ಹಲವಾರು ಪರವಿರೋಧ ತಕರಾರು ನಡೆದಿದ್ದು,ಪಟ್ಟು ಬಿಡದ ಎರಡೂ ಕಡೆಯವರಿಂದ ಹೋರಾಟಗಳು ನಡೆದಿದ್ದವು.

ಈ ನಡುವೆ ಹೆದ್ದಾರಿ ಇಲಾಖೆ ಪಡುಬಿದ್ರಿ ಪೇಟೆಭಾಗವಾಗಿ ಹೆದ್ದಾರಿ ಕಾಮಗಾರಿ ನಡೆಸುದಾಗಿ ಬಹಳಷ್ಟು ವಿಳಂಬವಾಗಿ ತೀರ್ಮಾನವನ್ನು ಘೋಷಿಸಿ.ಪಡುಬಿದ್ರಿ ಬೀಡು ಬಳಿಯಿಂದ ಕಾಮಗಾರಿ ಪ್ರಾರಂಭಿಸಿ ನಾಗರಾಜ್ ಎಸ್ಟೇಟ್ ಬಳಿ ಕೊನೆಗೊಳಿಸಿದರೆ.ಇತ್ತ ತೆಂಕ ಎರ್ಮಾಳು ಬಳಿ ಕಾಮಗಾರಿಯನ್ನು ನಿಲ್ಲಿಸಲಾಗಿದೆ.ಪಡುಬಿದ್ರಿ ಭಾಗದಲ್ಲಿ ಹೆದ್ದಾರಿ ಅಗಲೀಕರಣಕ್ಕಾಗಿ ಕಟ್ಟಡ ತೆರವುಗೊಳಿಸುವ ಸಂದರ್ಭದಲ್ಲಿ ಕೆಲವೊಂದೆಡೆ ವಿನಾಯಿತಿ ನೀಡಿ ತಮ್ಮ ತಾರತಮ್ಯ ನೀತಿಯನ್ನು ಇಲಾಖೆ ಪ್ರದರ್ಶಿಸಿದೆ.

ಈಗಾಗಲೇ ಪೂರ್ವ ಬಾಗದ ಕಟ್ಟಡಗಳ ಕೆಲಪಾಶ್ವಗಳನ್ನು ತುಂಡರಿಸಿ ನೂತನವಾಗಿ ಕಟ್ಟಡವನ್ನು ದುರಸ್ತಿ ಮಾಡಿ ವ್ಯಾಪಾರಕ್ಕೆ ಸಂಪೂರ್ಣ ಅಣಿಯಾದರೆ , ಪಶ್ಚಿಮ ಭಾಗದಲ್ಲಿ ಕಟ್ಟಡಗಳ ಧರಾಶಾಯಿ ಕೆಲಸ ನಡೆಯುತ್ತಲೇ ಇದ್ದು ಹೆದ್ದಾರಿ ಕಾಮಗಾರಿ ನಿಂತ ನೀರಿನಂತಾಗಿದೆ ಎಂದು ಜನ ಆರೋಪಿಸುತ್ತಿದ್ದಾರೆ. ಮಳೆಯಿಂದಾಗಿ ಕಾಮಗಾರಿಗೆ ಅಡ್ಡಿಯಾಯಿತೇ ..? ಹೆದ್ದಾರಿ ಕಾಮಗಾರಿ ಸಂದರ್ಭದಲ್ಲಿ ಈ ಮೊದಲು ಮಳೆಗಾಳದಲ್ಲಿ ಯಾವುದೇ ತಡೆಯಿಲ್ಲದೆ ವೇಗವಾಗಿ ಕೆಲಸ ನಡೆಸಿದ್ದರೆ.

ಪಡುಬಿದ್ರಿ ಭಾಗದಲ್ಲಿ ಕಾಮಗಾರಿ ಮುಂದುವರಿಸಲು ಮಳೆಯಿಂದಾಗಿ ಅಡ್ಡಿಯಾಗುತ್ತಿದೆ ಎಂದು ಹಾಸ್ಯಾಸ್ಪದ ಉತ್ತರವನ್ನು ನೀಡಿದ ನವಯುಗ ಕಂಪನಿಯ ಅಧಿಕಾರಿ ಚಂದ್ರಶೇಖರ ಹಾಗು ರಾಮಕೃಷ್ಣ ಇವರು ಮಾಧ್ಯಮದೊಂದಿಗೆ ಮಾತನಾಡಿ, ಮಳೆಯಿಂದಾಗಿ ಕಾಮಗಾರಿ ಅಪೂರ್ಣವಾಗಿದೆ. ಸ್ವಲ್ಪ ಮಳೆ ನಿಂತರೆ ಸಾಕು ಕಾಮಗಾರಿ ಮುಂದುವರಿಸುತ್ತೇವೆ. ಒಂದೆರಡು ತಿಂಗಳುಗಳಲ್ಲಿ ಹೆದ್ದಾರಿ ಪೂರ್ಣಗೊಳ್ಳಲಿದೆ ಎಂದಿದ್ದಾರೆ.

ಹೆದ್ದಾರಿಯು 9ಮಿಟರ್ ಅಗಲವಾಗಿದ್ದು, ಸರ್ವಿಸ್ ರಸ್ತೆಯು 6 ಮೀಟರ್ ಅಗಲವಾಗಲಿದೆ. ಚರಂಡಿ ಹಾಗೂ ಫುಟ್ಪಾತ್ ರಸ್ತೆಯೂ ಇರಲಿದೆ. ಪಕ್ಕದಲ್ಲಿ ಮೂರು ಮೀಟರ್ಗಳ ಪಾರ್ಕಿಂಗ್ ಕೂಡ ಇರಲಿದೆ ಎಂದಿದ್ದಾರೆ. ಹೆದ್ದಾರಿ ಹೋರಾಟ ಸಮಿತಿಯ ಗುಲಾಂ ಅಹಮ್ಮದ್ ಹಾಗೂ ಶೇಖರ ಹೆಜ್ಮಾಡಿ ಮಾತನಾಡಿ, ಪಡುಬಿದ್ರಿ ಹೆದ್ದಾರಿ ಕಾಮಗಾರಿಯಲ್ಲಿ ಹೆದ್ದಾರಿ ಇಲಾಖೆಯು ಮಲತಾಯಿ ಧೋರಣೆಯನ್ನು ಅನುಸರಿಸಿದೆ. ಕೆಲವು ಜನರನ್ನು ತೃಪ್ತಿಗೊಳಿಸುವ ಸಲುವಾಗಿ ಮತ್ತೊಬ್ಬರಿಗೆ ನಷ್ಠ ಉಂಟು ಮಾಡಿದೆ. ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಶೀಘ್ರವಾಗಿ ಕಾಮಗಾರಿ ಮುಗಿಸಿ ಸಾರ್ವಜನಿಕರ ಸಮಸ್ಯೆಯನ್ನು ಬಗೆಹರಿಸಬೇಕೆಂದು ಆಗ್ರಹಿಸಿದ್ದಾರೆ.

 

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಅಕ್ಟೋಬರ್ 13: ರಾಷ್ಟ್ರಾದ್ಯಂತ ಪೆಟ್ರೋಲ್ ಬಂಕ್ ಬಂದ್ ಗೆ ಕರೆ

ಮುಂದಿನ ಸುದ್ದಿ »

ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ರಕ್ತಕ್ಕೆ ಪರ್ಯಾಯವಾದ ವಸ್ತುವಿಲ್ಲ: ಡಾ.ಎಂ.ಲೋಕೇಶ್

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×