Saturday October 7 2017

Follow on us:

Contact Us

ಓಲಾ ಕ್ಯಾಬ್ ನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ: ಸಂಸ್ಥೆ ನೀಡಿದ ಭರ್ಜರಿ ಗಿಫ್ಟ್ ಏನು ಗೊತ್ತೇ?

ನ್ಯೂಸ್ ಕನ್ನಡ-(07.10.17): ಸರ್ವೇಸಾಮಾನ್ಯವಾಗಿ ರೈಲುಗಳಲ್ಲಿ, ಆಂಬುಲೆನ್ಸ್ ಗಳಲ್ಲಿ, ವಿಮಾನಗಳಲ್ಲಿ ಮಗುವಿಗೆ ಜನ್ಮ ನೀಡಿದ ಕುರಿತು ನಾವು ಹಲವು ಬಾರಿ ಕೇಳಿದ್ದೇವೆ. ವಿಮಾನದಲ್ಲಿ ಜನ್ಮ ನೀಡಿದ ಮಗುವಿಗೆ ಜೀವನಪರ್ಯಂತ ಉಚಿತ ವಿಮಾನಯಾನ ವ್ಯವಸ್ಥೆ ಕಲ್ಪಿಸಿದ ಸಂಸ್ಥೆಗಳೂ ಇವೆ. ಇದೀಗ ಮಹಿಳೆಯೋರ್ವರು ಓಲಾ ಕ್ಯಾಬ್ ನಲ್ಲಿ ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗುವಿಗೆ ಓಲಾ ಭರ್ಜರಿ ಆಫರ್ ನೀಡಿದ ಘಟನೆಯು ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ಈಶ್ವರಿ ಸಿಂಗ್ ವಿಶ್ವಕರ್ಮ ಓಲಾ ಕ್ಯಾಬ್ನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ. ಅಕ್ಟೋಬರ್ 2ರಂದು ಬೆಳಗ್ಗೆ ಈಶ್ವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಪತಿ ರಮೇಶ್ ಸಿಂಗ್ ವಿಶ್ವಕರ್ಮ ಪತ್ನಿ ಈಶ್ವರಿಯನ್ನು ಆಸ್ಪತ್ರೆಗೆ ಕೆರೆದೊಯ್ಯುವ ನಿಟ್ಟಿನಲ್ಲಿ ಓಲಾ ಕ್ಯಾಬ್ ಬುಕ್ ಮಾಡಿದ್ದಾರೆ. ಅಂತೆಯೇ ಕ್ಯಾಬ್ನಲ್ಲಿ ಪತ್ನಿ ಈಶ್ವರಿ, ತಾಯಿ ಮತ್ತು ಸಹೋದರ ಮೂವರನ್ನು ಕಮಲಾ ನೆಹರೂ ಆಸ್ಪತ್ರೆಗೆ ರಮೇಶ್ ರವಾನಿಸಿದ್ದಾರೆ. ಆದರೆ, ಮನೆಯಿಂದ ಐದು ಕಿ.ಮೀ. ದೂರು ಸಾಗುವಷ್ಟರಲ್ಲಿ ಈಶ್ವರಿ ಕ್ಯಾಬ್ನಲ್ಲೇ ಜನ್ಮ ನೀಡಿದ್ದಾಳೆಂದು ರಮೇಶ್ಗೆ ಸಹೋದರ ಫೋನ್ ಮಾಡಿ ತಿಳಿಸಿದ್ದಾನೆ.

ಅಕ್ಟೋಬರ್ 24 ರಂದು ಈಶ್ವರಿಗೆ ಹೆರಿಗೆಯಾಗಬಹುದೆಂದು ನಾವು ಭಾವಿಸಿದ್ದೇವೆ. ಆದರೆ, 2ನೇ ತಾರೀಕು ಬೆಳಗ್ಗೆ 7 ಗಂಟೆ ಸುಮಾರಿಗೆ ಆಕೆಗೆ ಹೆರಿಗೆ ನೋವು ಶುರುವಾಯಿತು. ಹೀಗಾಗಿ ಆಸ್ಪತ್ರೆಗೆ ದಾಖಲಿಸಲು ಓಲಾ ಕ್ಯಾಬ್ ಬುಕ್ ಮಾಡಿದ್ದೆವು. ನನ್ನ ತಾಯಿ ಹಾಗೂ ಸಹೋದರ ಕಾರಿನಲ್ಲಿದ್ದರು ಎಂದು ರಮೇಶ್ ಸಿಂಗ್ ಹೇಳಿದ್ದಾರೆ. ಕ್ಯಾಬ್ನಲ್ಲಿ ಈಶ್ವರಿ ಪರಿಸ್ಥಿತಿಯನ್ನು ನೋಡಿದ ಮೇಲೆ, ಆಸ್ಪತ್ರೆ ತಲುಪುವವರೆಗೂ ಕಾರನ್ನು ಎಲ್ಲಿಯೂ ನಿಲ್ಲಿಸಕೂಡದೆಂದು ನಾನು ನಿರ್ಧರಿಸಿದೆ. ಆದರೆ 4-5 ಕಿಲೋ ಮೀಟರ್ ಕ್ರಮಿಸಿದ್ದಾಗ, ಹಿಂಬದಿಯ ಸೀಟಲ್ಲಿದ್ದ ಈಶ್ವರಿ ತಮ್ಮ ಸಂಬಂಧಿಕರ ನೆರವೊಂದಿಗೆ ಮಗುವಿಗೆ ಜನ್ಮ ನೀಡಿದರು ಎಂದು ಚಾಲಕ ಯಶವಂತ್ ಗಾಲಂಡೆ ತಿಳಿಸಿದ್ದಾರೆ.

ಇನ್ನು, ತಮ್ಮ ಕ್ಯಾಬ್ನಲ್ಲಿ ಹುಟ್ಟಿದ ಮಗು ಮತ್ತು ಮಗುವಿಗೆ ಜನ್ಮ ನೀಡಿದ ತಾಯಿಗೆ ಓಲಾ ಸಂಸ್ಥೆ ಭರ್ಜರಿ ಗಿಫ್ಟ್ ನೀಡಿದೆ. ತಾಯಿ ಹಾಗೂ ಮಗು ಇಬ್ಬರಿಗೂ 5 ವರ್ಷಗಳ ಕಾಲ ಉಚಿತ ಸೇವೆ ನೀಡಲಾಗುವುದು ಎಂದು ಓಲಾ ಕ್ಯಾಬ್ ಸಂಸ್ಥೆ ಟ್ವೀಟ್ ಮಾಡಿದೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಮುಖ್ಯಮಂತ್ರಿ ಸಿದ್ದರಾಮಯ್ಯರ ಹಿರಿಯ ಸಹೋದರಿ ನಿಧನ

ಮುಂದಿನ ಸುದ್ದಿ »

ಮುಸ್ಲಿಮರು ಇಲ್ಲದೇ ಇರುತ್ತಿದ್ದರೆ ಬಿಜೆಪಿಯ ಹೋರಾಟಕ್ಕೆ ಅಜೆಂಡಾಗಳೇ ಇರುತ್ತಿರಲಿಲ್ಲ: ಎಸ್.ಬಿ ದಾರಿಮಿ

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×