Thursday December 7 2017

Follow on us:

Contact Us

ನೋಟ್ ಬ್ಯಾನ್ ಮಾಡಿದ ಕೇವಲ 53 ದಿನಗಳಲ್ಲೇ ನಡೆಯಿತು ಈ ಘಟನೆ!

ನ್ಯೂಸ್ ಕನ್ನಡ ವರದಿ-(07.12.17): ಪ್ರಧಾನಿ ನರೇಂದ್ರ ಮೊದಿ ನೇತೃತ್ವದ ಕೇಂದ್ರ ಸರಕಾರವು ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ 500ರೂ. ಮತ್ತು 1000ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿತು. ದೇಶದಲ್ಲಿರುವ ಅಪಾರ ಪ್ರಮಾಣದ ಕಪ್ಪುಹಣ, ಖೋಟಾನೋಟು ದಂಧೆ, ಭಯೋತ್ಪಾದನೆ ಮುಂತಾದ ಕೃತ್ಯಗಳನ್ನು ತಡೆಯುವ ಮುಖ್ಯ ಉದ್ದೇಶದಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಪ್ರಧಾನಿ ಮೋದಿ ದೇಶದ ಜನತೆಗೆ ತಿಳಿಸಿದ್ದರು. ಆದರೆ ವಾಸ್ತವವು ಬೇರೆಯೇ ಇದೆ. ನೋಟ್ ಬ್ಯಾನ್ ಆದ ಕೇವಲ 53ನೇ ದಿನಗಳಲ್ಲೇ 2000ರೂ.ಯ ಯಥಾ ನಕಲು ನೋಟುಗಳನ್ನು ತಯಾರಿಸಲಾಗಿದೆ ಎಂದು ತಿಳಿದು ಬಂದಿದೆ.

ರಾಷ್ಟ್ರೀಯ ಅಪರಾಧ ದಾಖಲೆ ಮಂಡಳಿಯು ಬಿಡುಗಡೆ ಮಾಡಿದ ದಾಖಲೆಗಳಗಳಲ್ಲಿ ಈ ಕುರಿತು ಪ್ರಸ್ತಾಪಿಸಲಾಗಿದೆ. ಕೇವಲ 53 ದಿನಗಳು ಅಂದರೆ ನವೆಂಬರ್ 8ರಿಂದ ಡಿಸೆಂಬರ್ 31ರೊಳಗೆ ಪೊಲೀಸರು ಒಟ್ಟು 2,272 ನಕಲಿ 2000ರೂ. ನೋಟುಗಳನ್ನು ವಶಪಡಿಸಿಕೊಂಡಿದ್ದರು. ಈ ಸಂದರ್ಭದಲ್ಲಿ 2000ರೂ. ನೋಟುಗಳು ಸಿಗದೇ ಜನರು ಕಷ್ಟಪಡುತ್ತಿದ್ದರು. ಗುಜರಾತ್ ನಲ್ಲಿ 1,300 ನಕಲಿ ನೋಟುಗಳನ್ನು, ಪಂಜಾಬ್ ನಲ್ಲಿ 548, ಕರ್ನಾಟಕದಲ್ಲಿ 254, ತೆಲಂಗಾಣದಲ್ಲಿ 114, ಮಹಾರಾಷ್ಟ್ರದಲ್ಲಿ 27, ಮಧ್ಯಪ್ರದೇಶದಲ್ಲಿ 8, ರಾಜಸ್ತಾನದಲ್ಲಿ 6 ಹಾಗೂ ಆಂದ್ರಪ್ರದೇಶ, ಅರುಣಾಚಲ ಪ್ರದೇಶ ಮತ್ತು ಹರ್ಯಾಣ ರಾಜ್ಯದಲ್ಲಿ ತಲಾ 3 ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ತನ್ನ ಮಗಳ ಬಗ್ಗೆ ಟ್ರೋಲ್ ಮಾಡಿದವರಿಗೆ ಟ್ವಿಟ್ಟರ್ ನಲ್ಲಿ ಖಡಕ್ ಉತ್ತರ ನೀಡಿದ ಅಭಿಷೇಕ್ ಬಚ್ಚನ್ !

ಮುಂದಿನ ಸುದ್ದಿ »

ಇಸ್ರೇಲ್ ರಾಜಧಾನಿಯಾಗಿ ಜೆರುಸಲೇಂ ಘೋಷಣೆ: ಇಸ್ರೇಲ್ ವಿರುದ್ಧ ದಂಗೆಯೇಳಲು ಹಮಾಸ್ ನಾಯಕನ ಕರೆ!

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×