Friday October 23 2015

Follow on us:

Contact Us

ನಾಯಿಗಳ ನಿಯ್ಯತ್ತೂ ಇಲ್ಲದ ಈ ರಾಜಕಾರಣಿಗಳ ವಿಕೃತಿಗಳನ್ನು ಒಗ್ಗಟ್ಟಾಗಿ ಎದುರಿಸೋಣ

 

ರುಕಿಯಾ ಎ.ರಝಾಕ್

2002 ರ ಗುಜರಾತ್ ಹತ್ಯಾಕಾಂಡದ ರಕ್ತಸಿಕ್ತ ಕೈಗಳಿಗೆ 2014 ರಲ್ಲಿ ದೇಶದ ಉನ್ನತ ಸ್ಥಾನ ಹಸ್ತಾಂತರವಾದುದು ದೇಶದ ದುರ್ಗತಿಗೆ ಮುನ್ನುಡಿ ಬರೆದ ಸನ್ನಿವೇಶವಾಗಿತ್ತು. ಅದೀಗ ತಾನು ಧರಿಸಿದ್ದ ಬಣ್ಣ ಬಣ್ಣದ ಮುಖವಾಡಗಳನ್ನು ಒಂದೊಂದಾಗಿ ಕಳಚಿ ತನ್ನ ಅಸಲೀ ರೂಪವನ್ನು ಅನಾವರಣಗೊಳಿಸುತ್ತಿದೆ. ಕಾಂಗ್ರೆಸ್ ನ ದುರಾಡಳಿತವನ್ನು ಅಡ್ಡ ಹಿಡಿದುಕೊಂಡು ಗದ್ದುಗೆಯೇರಿದ ‘ಮನು’ ವಿನ ಹಿಂಬಾಲಕರು ಒಂದೊಂದಾಗಿ ಗುಪ್ತ ಅಜೆಂಡಾಗಳನ್ನು ಬಹಿರಂಗ ಗೊಳಿಸುತ್ತಿದ್ದಾರೆ. ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಎತ್ತಿದ ಕೈಯಾದರೆ, ಭಾಜಪ ಕೋಮು ಧ್ವೇಷ ಮತ್ತು ಮಾನವ ವಿರೋಧಿ ನೀತಿಯಲ್ಲಿ ಎತ್ತಿದ ಕೈ ಎಂದು ಹೆಜ್ಜೆ ಹೆಜ್ಜೆಗೂ ಸಾಬೀತುಪಡಿಸಿದೆ. ಅಚ್ಛೇ ದಿನ್ ನ ಕನಸು ಹಂಚಿದ ಮೋದಿ ಸರಕಾರ, ಪ್ರಜೆಗಳಿಗೆ ಅಚ್ಛೇ ದಿನ್ ತೋರಿಸದಿದ್ದರೂ ತನ್ನ ಮಾತೃ ಸಂಘಟನೆಯ ಗುಪ್ತವಾಗುಳಿಯದ ಅಜೆಂಡಾಗಳ ಸಾಕಾರಕ್ಕೆ ಹರಸಾಹಸ ಪಡುತ್ತಿದೆ.

424836-dalit700ಹಸುವಿನ ಮಾಂಸ ಸೇವಿಸಿದ ಎಂಬ ಕಾರಣಕ್ಕೆ ಒಬ್ಬ ಮುಸಲ್ಮಾನ ಬರ್ಬರವಾಗಿ ಹತ್ಯೆಯಾಗುತ್ತಾನೆ. ವಾರಗಳ ಬಳಿಕ ನಾಯಕನೆನಿಸಿಕೊಂಡವನಿಂದ ಬಹಳಾ ಕಷ್ಟದಿಂದ “ಪ್ರಜೆಗಳು ರಾಜಕೀಯದ ಆಟಗಳಿಗೆ ಬಲಿಯಾಗ ಬಾರದು” ಎಂಬ ‘ಮೆದುವಾದ’ ಖಂಡನೆಯ ಹೇಳಿಕೆ ಬರುತ್ತದೆ. ದೇವಸ್ಥಾನ ಪ್ರವೇಶಿಸಿದ್ದಕ್ಕೆ ಒಬ್ಬ ಹಿರಿಯ ಅಗ್ನಿಗಾಹುತಿಯಾಗುತ್ತಾನೆ. “ಅಸ್ಪೃಶ್ಯ” ರೆನಿಸಿಕೊಂಡ ಮಹಿಳೆಯರು ನಿರಂತರ ಅತ್ಯಾಚಾರಕ್ಕೊಳಗಾಗುತ್ತಾರೆ. ದಲಿತರೆಂಬ ಒಂದೇ ಕಾರಣಕ್ಕೆ ಪುಟ್ಟ ಮಕ್ಕಳು  ಸುಟ್ಟು ಕರಕಲಾಗುತ್ತಾರೆ. ಆದರೆ, ದೇಶದ ಚುಕ್ಕಾಣಿ ಹಿಡಿದವರಿಂದ ಒಂದೇ ಒಂದು ಖಂಡನೆಯ ಶಬ್ಧವಿಲ್ಲ. ಬದಲಾಗಿ “ನಾಯಿಗೆ ಕಲ್ಲು ಹೊಡೆದರೆ ಸರಕರ ಹೊಣೆಯಾಗುವುದಿಲ್ಲ” ಎಂಬ ತೃತೀಯ ದರ್ಜೆಯ ಹೊಣೆಗೇಡಿ ಹೇಳಿಕೆ ನೀಡಲಾಗುತ್ತದೆ. ಹಾಗಿದ್ದರೆ ದೇಶಕ್ಕೆ ಇಂತಹಾ ಹೊಣೆಗೇಡಿ ಸರಕಾರದ ಅಗತ್ಯವಿದೆಯೇ? ಪ್ರಜೆಗಳ ಅಹವಾಲುಗಳಿಗೆ ಕಿವಿಯಾಗದ, ತಳವರ್ಗದ ಜನಸಾಮಾನ್ಯರನ್ನು ಮಾನವರೆಂದು ಪರಿಗಣಿಸದ, ಕೇವಲ “ಕೆನೆಪದರ” ಗಳ ಕುರಿತು ಮಾತ್ರವೇ ಚಿಂತಿಸುವ ನಾಯಕರುಗಳಿಗೆ ದೇಶದ ಮುಂದಾಳುತ್ವ ವಹಿಸುವ ನೈತಿಕ ಹಕ್ಕು ಇದೆಯೇ? ಇಂತಹಾ ತುಚ್ಛ ಮನಸ್ಥಿತಿಯ ನಾಯಕರಿಂದ ಸರ್ವರಿಗೂ ಸಮಬಾಳನ್ನು ನಿರೀಕ್ಷಿಸಬಹುದೇ? ಬ್ರಾಹ್ಮಣನಲ್ಲದ ಇತರ ಯಾರೂ ಮಾನವರಲ್ಲವೆಂಬ’ಮನು’ ಶಾಸ್ತ್ರದ ಮೇಲೆ ನಂಬಿಕೆಯಿರಿಸುವ  ಗೋಳ್ವಾಲ್ಕರನ ‘ಚಿಂತನೆ’ ಯ ‘ಅಪವಿತ್ರ ಗಂಗೆ’ಯಲ್ಲಿ ಮಿಂದೇಳುತ್ತಿರುವ ಭಟ್ಟಂಗಿಗಳಿಂದ ಇನ್ನೇನು ತಾನೇ ನಿರೀಕ್ಷಿಸಬಹುದು?

ಹೌದು, ನಾಯಿಗೆ ಕಲ್ಲು ಹೊಡೆದರೆ ಸರಕಾರ ಏನೂ ಮಾಡುವ ಹಾಗಿಲ್ಲ.. ಏಕೆಂದರೆ ಅದು ಮತಹಾಕುವುದಿಲ್ಲ, ತೆರಿಗೆ ಕಟ್ಟುವುದಿಲ್ಲ, ನಿಮ್ಮ ಹೊಲಸು ಹೊರುವುದಿಲ್ಲ, ನಿಮ್ಮ ಮುಂದೆ ತಗ್ಗಿ ಬಗ್ಗಿ ನಿಲ್ಲುವುದಿಲ್ಲ. ಆದರೆ ಹರ್ಯಾಣಾದಲ್ಲಿ ಕರಕಲಾದವರು ಇದೆಲ್ಲವನ್ನೂ ನಿಷ್ಠೆಯಿಂದ ಮಾಡುತ್ತಿದ್ದವರು. ನೀವು ಕಾಲಿನಿಂದ ತೋರಿಸಿದ್ದನ್ನು ತಲೆಯಲ್ಲಿ ಹೊತ್ತು ಮಾಡಿದವರು. ಈಗ ಅವರ ಜೀವಗಳು ಸಂಕಷ್ಟದಲ್ಲಿರುವಾಗ, ಬರ್ಬರವಾಗಿ ಹಿಂಸಿಸಲ್ಪಡುತ್ತಿರುವಾಗ ಅವರ ಬೆಂಬಲಕ್ಕೆ ನಿಲ್ಲಬೇಕಿದ್ದ ರಾಜಕಾರಣಿಗಳಿಗೆ ಅವರು ನಾಯಿಗಳಾಗಿ ಕಂಡರೇ? ಅವರ ನೋವುಗಳು ಸ್ಪಂದಿಸಲು ಅನರ್ಹವಾದುವೇ? ಯಕಃಶ್ಚಿತ್ ಸಹಾನುಭೂತಿಯನ್ನು ವ್ಯಕ್ತಪಡಿಸದಷ್ಟೂ ಅವರ ಜೀವಗಳು ಬೆಲೆಯಿಲ್ಲದಾಯಿತೇ? ಇವತ್ತು ಅವರನ್ನು ನಾಯಿ ಎಂದು ಹಿಯಾಳಿಸಿದ ನಾಯಕರೇ ಈ ಹಿಂದೆ ಮತ ಯಾಚಿಸುವಾಗ ಅವರ ಮುಂದೆ  ನಾಯಿಯಂತೆ ನಿಂತು ಜೊಲ್ಲು ಸುರಿಸಿದ್ದಿದೆ. ಸುಳ್ಳು ಆಶ್ವಾಸನೆಗಳ ದೊಡ್ಡ ಮೂಟೆಯನ್ನು ಅವರ ಬೆನ್ನಮೇಲೆ ಹೊರಿಸಿದ್ದಿದೆ. ರೊಟ್ಟಿ ಕೊಟ್ಟ ಪ್ರಭುವಿಗೆ ಬೊಗಳದೇ, ಕಚ್ಚದೇ, ಅವರ ರಕ್ಷಣೆ ಮಾಡುವ ನಿಯ್ಯತ್ತಾದರೂ ನಾಯಿಗಳಿಗೆ ಇದೆ , ಆದರೆ ಚುನಾವಣೆ ಗೆಲ್ಲಲು ಕಾರಣಕರ್ತರಾದ ಮತದಾರ ಪ್ರಭುವಿಗೇ ವಿರುದ್ಧ ನಿಂತು ಬೊಗಳುವ, ಅವರನ್ನು ತನ್ನ ವಿಷಪೂರಿತ ಮಾತುಗಳಿಂದ ಕೊಲ್ಲುವ ರಾಜಕಾರಣಿಗಳ ಕಂತ್ರಿ ಬುದ್ಧಿಗೇನೆನ್ನೋಣ? ರಾಜಕಾರಣಿಗಳಿಗೆ ಯಕಃಶ್ಚಿತ್ ನಾಯಿಗಳ ನಿಯ್ಯತ್ತೂ ಇಲ್ಲದಾಗಿಹೋಯಿತೇ?

ಹರ್ಯಾಣಾದಲ್ಲಿ ಕೊಲೆಯಾದ ಪುಟ್ಟ ಮಕ್ಕಳಾದ ದಿವ್ಯ ಮತ್ತು ವೈಭವ್ ರ ಆಕ್ರಂದನ, ಈಗಲೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೇಖಾರ ಕಿವಿಯೊಳಗೆ ಗುಂಯ್ ಗುಟ್ಟುತ್ತಿರಬಹುದು. ಠಾಕೂರರ ಧ್ವೇಷದ ಕಿಡಿಗೆ ಸುಟ್ಟು ಕರಕಲಾದ ಮಕ್ಕಳ ದೇಹದ ಕಮಟು ನಾಥ ಜಿತೇಂದ್ರರ ಹೃದಯ ಹಿಂಡುತ್ತಿರಬಹುದು. ರಾಜಕಾರಣಿಗಳಿಗೆ ಅದು ಕೇಳಿಸುತ್ತಿರಿಕ್ಕಿಲ್ಲ. ಆದರೆ ನಮಗೆ ಕೇಳಿಸುತ್ತಿದೆ. ಏಕೆಂದರೆ, ಗುಜರಾತ್ ನ ಕೌಸರ್ ಬಾನೂಳ ಹೊಟ್ಟೆ ಸೀಳಿ ಭ್ರೂಣವನ್ನು ನೀವು ಬೆಂಕಿಗೆ ಹಾಕಿದಾಗ ಆ ಬೆಂಕಿಯ ಕೆನ್ನಾಲಿಗೆಗೆ ಬೆಂದು ಹೋದವರು ನಾವು.. ನೀವು ಖೈರ್ಲಾಂಜಿಯ ಸುರೇಖಾಳ ಬರ್ಬರ ಅತ್ಯಾಚಾರ ಮಾಡಿ ಕೊಲೆಗೈದಾಗ ಅವಳ ಭೀಕರ ಚೀರುವಿಕೆಗೆ ತಲ್ಲಣಿಸಿದವರು ನಾವು.. dalit-killings-haryana-650_650x400_51445436933ಕಂಧಮಾಲ್ ನ ಕ್ರೈಸ್ತ ಸನ್ಯಾಸಿಗಳಿಗೆ ನೀವು ಬೆಂಕಿ ಹಚ್ಚಿದಾಗ ನರಳಾಡಿದವರು ನಾವು. ಕಂಬಾಲಪಲ್ಲಿಯಲ್ಲಿ ನೀವು ಸುಟ್ಟ ಏಳು ದಲಿತರ ಆತ್ಮಕ್ಕೆ ನ್ಯಾಯ ಸಿಗಲೆಂದು ಆಗ್ರಹಿಸಿದವರು ನಾವು. ನಮ್ಮ ಹೃದಯ ಮೆಡಿಟರೇನಿಯನ್ ತಟದಲ್ಲಿ ಮೃತನಾದ ಅಯ್ಲಾನ್ ಕುರ್ದಿಗಾಗಿ ಎಷ್ಟು ಮರುಗುತ್ತದೋ, ಅಷ್ಟೇ ದಿವ್ಯಾ ಮತ್ತು ವೈಭವ್ ಗಾಗಿಯೂ ಕಂಬನಿಗರೆಯುತ್ತದೆ. ಏಕೆಂದರೆ ನಮಗೆ ತಿಳಿದಿದೆ ಅವರು ನಾಯಿಗಳಲ್ಲ. ನಮ್ಮಂತೆ ದೇಹ ಪ್ರಕೃತಿ ಹೊಂದಿರುವ, ಕೆಂಪು ನೆತ್ತರು ಹರಿಯುವ, ಮೂಳೆ ಮಾಂಸ ಹೊಂದಿರುವ ಏಟಾದರೆ ನೋವಾಗುವ, ಎಲ್ಲಕ್ಕಿಂತಲೂ ಹೆಚ್ಚಾಗಿ ನಮ್ಮಂತೆ ಜೀವಿಸುವ ಸಮಾನ ಹಕ್ಕು ಪಡೆದಿರುವ ಸಾಮಾನ್ಯ ಮನುಜರು ಅವರು..

ದಲಿತರು ಶಿಕ್ಷಿತರಾಗಬೇಕಿದೆ, ಒಗ್ಗಟ್ಟಾಗಬೇಕಿದೆ, ಹೋರಾಡ ಬೇಕಿದೆ. ಸಂಪತ್ತಿಗಾಗಿ ಅಲ್ಲ, ಅಧಿಕಾರ ದಾಹಕ್ಕಾಗಿ ಅಲ್ಲ, ಆದರೆ ಸ್ವಾತಂತ್ರ್ಯಕ್ಕಾಗಿ ಎಂಬ ಡಾ. ಅಂಬೇಡ್ಕರರ ಮಾತು ನೆನಪಾಗುತ್ತಿದೆ. ಆದರೆ ಈ ಸ್ವರ್ಣ ನುಡಿ ಕೇವಲ ದಲಿತರಿಗೆ ಮಾತ್ರ ಸೀಮಿತವಲ್ಲ. ದಲಿತರು, ಹಿಂದುಳಿದವರು,  ಅಲ್ಪ ಸಂಖ್ಯಾತರೆಲ್ಲರಿಗೂ ಈ ಮಾತು ಅನ್ವಯಿಸುತ್ತದೆ.. ದಲಿತ ಶಬ್ಧದ ಮರಾಠಿ ಅರ್ಥ “ಶೋಷಿತ” ಅಂತೆ.. ಸದ್ಯಕ್ಕೀಗ ‘ಮನುವಾದಿಗಳಿಂದ’ ಅ.ಹಿಂ.ದ ಮೂರೂ ವಿಧದ ಜನರು ಶೋಷಿತರೇ..  ಮೇಲ್ಜಾತಿಯವರ ವಿಕೃತಿಯ ವಿರುದ್ಧ ತಳವರ್ಗದವರೆಲ್ಲಾ ಒಗ್ಗಟ್ಟಾಗುವುದು ಕಾಲದ ಬೇಡಿಕೆಯಾಗಿದೆ..

nksw

 

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

`ಹೋಲೋಕಾಸ್ಟ್’ ಗೆ ಫೆಲೆಸ್ತೀನ್ ಮುಖಂಡನೇ ಹೊಣೆ ಎಂದ ನೆತನ್ಯಾಹು; ಅಮೆರಿಕ, ಜರ್ಮನಿಂದ ವಿರೋಧ

ಮುಂದಿನ ಸುದ್ದಿ »

ಭಾರತವನ್ನು “ಹಿಂದೂ ರಾಷ್ಟ್ರ” ವೆಂದು ಘೋಷಿಸಿ: ದಸರಾ ಜಾಥಾಲ್ಲಿ ಉದ್ಧವ್ ಠಾಕ್ರೆ

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×