Tuesday December 5 2017

Follow on us:

Contact Us

ಕಾರುಗಳಿಗೆ ಬರೋಬ್ಬರಿ 40,000ರೂ.ವರೆಗೆ ಡಿಸ್ಕೌಂಟ್ ಘೋಷಿಸಿದ ಮಾರುತಿ!

ಹೊಸದಿಲ್ಲಿ: ಭಾರತದ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಿಕ ಸಂಸ್ಥೆ ಮಾರುತಿ ಸುಜುಕಿ, ತನ್ನ ಶ್ರೇಣಿಯ ಕಾರುಗಳಿಗೆ 30,000 ರೂ.ಗಳಿಂದ 40,000 ರೂ.ಗಳ ವರೆಗೆ ಡಿಸ್ಕೌಂಟ್ ಒದಗಿಸುತ್ತಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ವರ್ಷಾಂತ್ಯದ ವೇಳೆಯಲ್ಲಿ ಗರಿಷ್ಠ ಮಾರಾಟವನ್ನು ಗುರಿಯಾಗಿರಿಸಿಕೊಂಡಿರುವ ಮಾರುತಿ ಜನಪ್ರಿಯ ಕಾರುಗಳಿಗೆ ರಿಯಾಯಿತಿಯನ್ನು ಘೋಷಿಸಿದೆ. ಆಲ್ಟೊ, ವ್ಯಾಗನಾರ್, ಸ್ವಿಫ್ಟ್ ಹಾಗೂ ಎರ್ಟಿಗಾ ಮುಂತಾದ ಕಾರುಗಳಿಗೆ ಡಿಸ್ಕೌಂಟ್ ಲಭ್ಯವಾಗಲಿದೆ. ಈ ಪೈಕಿ ಮಾರುತಿ ಆಲ್ಟೊ 800 ಖರೀದಿ ವೇಳೆಯಲ್ಲಿ 35,000 ಹಾಗೂ ಜನಪ್ರಿಯ ಸ್ವಿಫ್ಟ್ ಖರೀದಿಯ ವೇಳೆಯಲ್ಲಿ 30,000 ರೂ.ಗಳ ಡಿಸ್ಕೌಂಟ್ ಪಡೆಯಬಹುದು.

ಇನ್ನು ಎರ್ಟಿಗಾ ಡೀಸೆಲ್ ಮಾದರಿಗೆ ಖರೀದಿ ವೇಳೆಯಲ್ಲಿ 40,000 ರೂ.ಗಳ ರಿಯಾಯಿತಿ ನೀಡಲಾಗುತ್ತಿದೆ. ಅದೇ ಹೊತ್ತಿಗೆ ಈ ಶೈತ್ಯ ಕಾಲಘಟ್ಟದಲ್ಲಿ ಡಿಸೆಂಬರ್ 07ರಿಂದ 11 ದಿನಗಳ ವರೆಗಿನ ಉಚಿತ ಚೆಕಪ್ ಕಾರ್ಯವನ್ನು ಮಾರುತಿ ಏರ್ಪಡಿಸುತ್ತಿದೆ.

 

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಪತಿಯ ಅನೈತಿಕ ಸಂಬಂಧದಿಂದ ಬೇಸತ್ತ ಪತ್ನಿ ಕೋಪಗೊಂಡು ಮಾಡಿದ್ದೇನು ಗೊತ್ತೇ?!

ಮುಂದಿನ ಸುದ್ದಿ »

ಮಹಮದೀಯ ನೌ ಜವಾನ್ ಕಮಿಟಿ ವತಿಯಿಂದ ಈದ್ ಮಿಲಾದ್ ಪ್ರಯುಕ್ತ ಬಡವರಿಗೆ ಈದ್ ಕಿಟ್

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×