Monday February 12 2018

Follow on us:

Contact Us

ಭಾರತದಲ್ಲಿ ಗಾಂಜಾ ಕಾನೂನುಬದ್ಧಗೊಳಿಸುವತ್ತ ಚಿಂತನೆ ನಡೆಸುತ್ತಿರುವ ಪತಂಜಲಿ ಆಯುರ್ವೇದಿಕ್ ಸಂಸ್ಥೆ!

ನ್ಯೂಸ್ ಕನ್ನಡ ವರದಿ-(12.2.18): ಗಾಂಜಾ ಸಸ್ಯವನ್ನು ಬೆಳೆಸುವ ಮತ್ತು ಕಾನೂನುಬದ್ಧಗೊಳಿಸಿ ವಿವಿಧ ರೀತಿಯ ಔಷಧಿ ತಯಾರಿಕೆಗಳಿಗೆ ಬಳಸುವ ಕುರಿತು ಬಾಬಾ ರಾಮ್ ದೇವ್ ನೇತೃತ್ವದ ಪತಂಜಲಿ ಸಂಸ್ಥೆಯು ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ. ಯೋಗಗುರು ಬಾಬಾ ರಾಮ್ ದೇವ್ ನೇತೃತ್ವದ ಪತಂಜಲಿ ಸಂಸ್ಥೆಯು ಈಗಾಗಲೇ ಭಾರತದ ಮಾರುಕಟ್ಟೆಯಲ್ಲಿ ತನ್ನದೇ ಆದ ಮೌಲ್ಯವನ್ನು ಹೊಂದಿದೆ.

ಬಹಳ ಪುರಾತನ ಕಾಲದಿಂದಲೂ ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಗಾಂಜಾ ಸಸ್ಯವನ್ನು ಬಳಸಲಾಗುತ್ತಿತ್ತು. ಹಲವು ಗಿಡಮೂಲಿಕೆಗಳಲ್ಲಿ ಈ ಸಸ್ಯವೂ ಒಂದಾಗಿದ್ದು, ಈಗಲೂ ಈ ಸಸ್ಯವನ್ನು ಬಳಸಿ ಹಲವು ರೋಗಗಳಿಗೆ ಔಷಧಿ ಕಂಡು ಹುಡುಕುವುದು ನಮ್ಮ ಚಿಂತನೆಯಾಗಿದೆ ಎಂದು ಪತಂಜಲಿಯ ಮುಖ್ಯಸ್ಥರಾದ ಬಾಲಕೃಷ್ಣ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಭಾರತದ ಹರಿದ್ವಾರದಲ್ಲಿ ಪತಂಜಲಿಯ ರಿಸರ್ಚ್ ಮತ್ತು ಡೆವಲಪ್ ಮೆಂಟ್ ಸೆಂಟರ್ ಇದ್ದು, ಇದರಲ್ಲಿ ಇನ್ನೂರಕ್ಕೂ ಹೆಚ್ಚು ವಿಜ್ಞಾನಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ಈಗಾಗಲೇ ಸುಮಾರು 200ರಷ್ಟು ಗಿಡಮೂಲಿಕೆಗಳಿಂದ ವೈದ್ಯಕೀಯ ಲಾಭದ ಕುರಿತಾಂತೆ ಸಂಶೋಧನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅಮೆರಿಕಾ ಸೇರಿದಂತೆ ಹಲವು ದೇಶಗಳ ಕೆಲವು ಪ್ರದೇಶಗಳಲ್ಲಿ ಗಾಂಜಾ ಕಾನೂನುಬ್ಧವಾಗಿದ್ದು, ಹಲವಾರು ವೈದ್ಯಕೀಯ ಚಿಕಿತ್ಸೆಗಳಿಗೆ ಇದನ್ನು ಬಳಸಲಾಗುತ್ತಿದೆ. ಇನ್ನು ಬಳಸುವಂತೆಯೇ ಬಳಸಬೇಕೆ ಹೊರತು ಇತರ ಮಾರ್ಗಗಳಲ್ಲಿ ಬಳಸಿದರೆ ಅನಾಹುತ ತಪ್ಪಿದ್ದಲ್ಲ.

source: India Times

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ನನಗೆ ಅನೈತಿಕ ಸಂಬಂಧವಿದೆ ಎಂದು ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ: ಮೊಯ್ದಿನ್ ಬಾವ ಸವಾಲ್

ಮುಂದಿನ ಸುದ್ದಿ »

ಬೀದಿಬದಿಯ ಕ್ಯಾಂಟೀನ್ ನಲ್ಲಿ ಚಹಾ, ಬಜ್ಜಿಯನ್ನು ಸವಿದ ರಾಹುಲ್ ಗಾಂಧಿ, ಸಿದ್ದರಾಮಯ್ಯ!

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×