Friday September 25 2015

Follow on us:

Contact Us
bakrid

ಮರಳಿ ಬರಲಿ ಆ ಸೌಹಾರ್ಧತೆಯ ಹಬ್ಬಗಳ ಸಂಭ್ರಮ

-ರುಕಿಯ್ಯಾ ಎ ರಝಾಕ್

ನಿನ್ನೆ ಬಕ್ರೀದ್ ಹಬ್ಬ, ಸಡಗರ ಸಂಭ್ರಮದಿಂದ ಹೆಣ್ಣುಮಕ್ಕಳು ಮದರಂಗಿ ಹಚ್ಚಿ ಓಡಾಡುತ್ತಿದ್ದುದು… ಘಳಿಗೆಗೊಮ್ಮೆ ಬಂದು ಶರಬತ್ತಿಗಾಗಿ, ಅಡುಗೆ ತಯಾರಿಯಲ್ಲಿ ವ್ಯಸ್ತರಾದ ಅಮ್ಮಂದಿರನ್ನು ಕಾಡಿಸುವುದು… ಹೊಸಬಟ್ಟೆ, ಮಲ್ಲಿಗೆಯ ಘಮಲು, ಪುಟಾಣಿಗಳ ಕಲರವದಿಂದ ವಾತಾರಣದಲ್ಲಿ ಅದೆಂತಹದ್ದೋ ಸಂಭ್ರಮ… ಹಿರಿಯರು ಕೊಟ್ಟ ಈದೀ ಉಡುಗೊರೆ ಹಿಡಿದುಕೊಂಡು ಓಡಾಡುತ್ತಿದ್ದ ಮಗಳನ್ನು ಕಂಡು, ನನಗರಿಯದೇ ನಾನು ಬಾಲ್ಯ ತಲುಪಿದ್ದೆ…

ಒಂದು ಕಾಲವಿತ್ತು, ಪ್ರತಿಯೊಂದು ಮನೆಯಲ್ಲೂ ಒಪ್ಪೊತ್ತಿನ ಊಟದಷ್ಟು ಮಾತ್ರವೇ ಇದ್ದರೂ ನೆರೆಯವನ ಹಸಿವಿನ ಕುರಿತೂ ಯೋಚಿಸುವಷ್ಟು ಮಾನವ ಮಾನವನಾಗಿದ್ದ. ಆ ನೆರೆಯವ ಯಾವ ಜಾತಿ ಅನ್ನುವುದಕ್ಕಿಂತಲೂ ಅವನ ಹೊಟ್ಟೆಯ ಹಸಿವಿನ ಕೂಗು ಹೆಚ್ಚಿನ ಪ್ರಾಮುಖ್ಯತೆ ಪಡೆದಿರುತ್ತಿತ್ತು. ಒಂದು ಮನೆಯ ಟಿವಿ ಜಾತಿ ಧರ್ಮಗಳ ಬೇಧವಿಲ್ಲದೆ ಇಪ್ಪತ್ತು ಮನೆಯವರ ಮನರಂಜಿಸುತ್ತಿತ್ತು. ಒಂದು ರೇಡಿಯೋದ ಕಮೆಂಟ್ರಿ, ಇಡೀ ಹಳ್ಳಿಯ ಯುವ ಸಮೂಹದ ಕ್ರಿಕೆಟ್ ದಾಹವನ್ನು ತಣಿಸುತ್ತಿತ್ತು. ಕಾಲೋನಿಯ ಎಲ್ಲಾ ಸಮುದಾಯದ ಮನೆಯ ಮಕ್ಕಳು ಸೇರಿದಾಗ ಮಾತ್ರವೇ ಆಟ ಪರಿಪೂರ್ಣ ಅನಿಸುತ್ತಿತ್ತು. ಟೀವಿಯಲ್ಲಿ ಪ್ರಸಾರವಾಗುವ ‘ತೆನಾಲಿ ರಾಮ’ ನಿಗೆ ಎಷ್ಟು ಮುಸ್ಲಿಂ ಅಭಿಮಾನಿಗಳಿದ್ದರೋ, ಅಷ್ಟೇ ಹಿಂದು ಅಭಿಮಾನಿಗಳು ‘ಟಿಪ್ಪು ಸುಲ್ತಾನ್’ ಗೆ ಇರುತ್ತಿದ್ದ ಕಾಲ. ಆಗ ಅದು ಕೇವಲ ಮನರಂಜನೆಯಾಗಿತ್ತೇ ಹೊರತು, ಎದೆಯ ಮೇಲೇರಿಬರುವ ಜಾತ್ಯಾಭಿಮಾನವಾಗಿರಲಿಲ್ಲ. ಇನ್ನು ಹಬ್ಬ ಹರಿದಿನಗಳು, ಜನ್ಮಾಷ್ಠಮಿ, ದೀಪಾವಳಿ, ಚೌತಿ, ರಮಝಾನ್, ಬಕ್ರೀದ್ ಗಳು ಧಾರ್ಮಿಕ ಆಚರಣೆಗಳಿಗಿಂತಲೂ ಸಾರ್ವಜನಿಕ ಹಬ್ಬವೇನೋ ಅನಿಸುವಷ್ಟು ಪ್ರತಿಯೊಬ್ಬರೂ ಭಾಗವಹಿಸುತ್ತಿದ್ದರು. ಚೌತಿ, ದೀಪಾವಳಿ, ಜನ್ಮಾಷ್ಠಮಿಗಳ ಸಂದರ್ಭ ಹಿಂದೂಗಳಿಗಿಂತಲೂ ಅತಿ ಹೆಚ್ಚು ಸಂಭ್ರಮವಿರುತ್ತಿದ್ದುದು ಮುಸ್ಲಿಮರಿಗೇ, ಹಿಂದೂ ಬಾಂಧವರು ಊರೆಲ್ಲಾ ಹಂಚುತ್ತಿದ್ದ ಕಬ್ಬು, ಆ ಕಬ್ಬುಗಳೊಂದಿಗೇ ಊರು ತುಂಬಾ ಹರಿದಾಡುತ್ತಿದ್ದ ಸೌಹಾರ್ಧದ ಸಿಹಿ, ಮತ್ತು ಮುಸ್ಲಿಂ, ಹಿಂದೂ ಎಂಬ ಬೇಧವೇ ಇರದೇ, ಹುಲಿವೇಷಧಾರಿಗಳನ್ನು ನೋಡುತ್ತಾ ಅವರ ಆಟಗಳನ್ನು ಆಸ್ವಾದಿಸುತ್ತಾ ಹುಲಿವೇಷದ ತಂಡ ನಡೆದಷ್ಟೂ ದೂರ ಅವರನ್ನು ಹಿಂಬಾಲಿಸುತ್ತಾ ನಡೆಯುವ ಮಕ್ಕಳ ತಂಡ, ಅಲ್ಲಿ ವೇಷಧಾರಿಗಳೂ ಹಾಗೇ ಊರಿನ ಪ್ರತಿಯೊಂದು ಮುಸ್ಲಿಂ ಮನೆಗಳಲ್ಲೂ ಹುಲಿಯಾಟ ತೋರಿಸಿ ಬಕ್ಷೀಸು ಪಡೆಯದೇ ಮುಂದೆ ಸಾಗುವವರೇ ಅಲ್ಲ. ಇನ್ನು, ಮುಸ್ಲಿಮರ ಈದ್ ಸಂದರ್ಭ ಹಿಂದೂಗಳಿಗೂ ಇದೇ ಸಂಭ್ರಮ ಇರುತ್ತಿತ್ತು. ಕೈಯಲ್ಲಿ ಮದರಂಗಿ ಇಟ್ಟು ಹೊಸ ಬಟ್ಟೆ ತೊಟ್ಟು ಸಂಭ್ರಮಿಸುವ ಪುಟಾಣಿ ಹೆಣ್ಣುಮಕ್ಕಳನ್ನು ಹತ್ತಿರ ಕರೆದು ನೆಟಿಕೆ ತೆಗೆದು ಕಾಡಿಗೆ ಹಚ್ಚಿ ಧೃಷ್ಟಿ ತಾಕದಿರಲೆಂದು ಹಾರೈಸುವ ನೆರೆಯ ಹಿಂದೂ ಮಹಿಳೆಯರು, ತಮ್ಮ ಮನೆಯ ಅಡುಗೆಯನ್ನು ನೆರೆಯ ಹಿಂದೂ ಬಾಂಧವರೊಂದಿಗೆ ಹಂಚಿಕೊಳ್ಳದಿದ್ದರೆ ಹಬ್ಬವೇ ಅಪೂರ್ಣವೆನಿಸುವ ಮುಸ್ಲಿಂ ಸ್ತ್ರೀಯರು…! ಪರಸ್ಪರ ಧಾರ್ಮಿಕ ಆಚರಣೆಯ ಸಂದರ್ಭ ಪಾನಿಯ ಗಳ ವಿತರಣೆ…. ಹೀಗೆ ಒಟ್ಟಾರೆಯಾಗಿ, ಊರಿನ ಯಾವ ಮನೆಯಲ್ಲಿ ಯಾವ ಧರ್ಮದವರಿಗೇ ಹಬ್ಬದ ಸಂಭ್ರಮವಿರಲಿ ಊರಿಗೆ ಊರೇ ಆ ಆಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದವು. , ಜಾತಿ ಎನ್ನುವ ಕಲ್ಪನೆಯೇ ಇರಲಿಲ್ಲ ಎನಿಸುವಷ್ಟು ಧರ್ಮಗಳು ಜನರ ಮನೆಯೊಳಗೇ ಇರುತ್ತಿದ್ದವು, ಮನೆಯ ಆವರಣ ದಾಟಿ ಹೊರಗೆ ಬಂದಾಗ ಪ್ರತಿಯೊಬ್ಬರ ಧರ್ಮವೂ ಒಂದೇ ಆಗಿಬಿಡುವಷ್ಟು ಸಾಮಾಜಿಕ ಕಳಕಳಿ.

ಮೆರವಣಿಗೆಗಳು, ಬಾಂಗ್ ಗಳು, ಕುರ್ಬಾನಿಗಳು, ಹುಲಿವೇಷಗಳು, ರಾತ್ರಿಯ ವೇಳೆ ನಡೆಯುತ್ತಿದ್ದ ಭೂತಾರಾಧನೆಗಳು, ಚರ್ಚಿನ ಘಂಟೆಗಳು ಯಾವುದೂ ಪರಸ್ಪರರಿಗೆ ಕಿರಿಕಿರಿ ಅನಿಸುತ್ತಲೇ ಇರಲಿಲ್ಲ. ಅದೊಂದು ನಮ್ಮ ಸಮಾಜದ ಸರ್ವೇ ಸಾಮಾನ್ಯ ಅವಿಭಾಜ್ಯ ಅಂಗವೇ ಆಗಿದೆ ಎನ್ನುವಷ್ಟು ಆ ಆಚರಣೆಗಳಿಗೆ ಸಮಾಜದ ಪ್ರತಿಯೊಬ್ಬರೂ ಗೌರವಿಸುತ್ತಿದ್ದರು. ಮತ್ತು ಎಲ್ಲರೂ ಎಲ್ಲದಕ್ಕೂ ಒಗ್ಗಿಕೊಂಡಿದ್ದೆವು. ಇಷ್ಟೆಲ್ಲಾ ಯಾಕಾಗಿತ್ತೆಂದರೆ, ಬಹುಶಃ ಆ ಕಾಲದಲ್ಲಿ ಜನರಿಗೆ ಎರಡು ಹೊತ್ತಿನ ತುತ್ತಿನ ಚೀಲದ ಚಿಂತೆಯೇ ಬಹಳಾ ಮುಖ್ಯವಾಗಿತ್ತು. ಅದಲ್ಲದೇ ಜನರಿಗೆ ‘ಮತ್ತೊಂದು ಯೋಚನೆ’ ಅವಶ್ಯಕತೆ ಇರಲಿಲ್ಲ. ಅಥವಾ ಮತ್ತೊಂದು ಯೋಚನೆ ಬೇಡವಾಗಿತ್ತು!

ಒಂದು ದೀರ್ಘ ಅವಧಿಯ ವರೆಗೂ ಇವುಗಳನ್ನೆಲ್ಲಾ ಅನುಭವಿಸಿದ ನಮಗೆ ಇತ್ತೀಚೆಗೆ ಇದೆಲ್ಲಾ ಮರೆತೇ ಹೋಗಿತ್ತು. ಈಚೆಗಿನ ಹಲವಾರು ವರ್ಷಗಳಿಂದಲೂ ಬಕ್ರೀದ್ ಆಚರಣೆಯನ್ನು ಒಂದು ‘ಅಪರಾಧ’ ಅನ್ನುವ ರೀತಿಯಲ್ಲಿ ಅಚರಿಸಿಕೊಂಡು ಬರಲಾಗುತ್ತಿದೆ. ರಮಝಾನ್ ಎಷ್ಟು ಸರಾಗವಾಗಿ ಆಚರಿಸಿಕೊಂಡು ಹೋಗುತ್ತೇವೋ, ಬಕ್ರಿದ್ ಅಷ್ಟು ಸಾಂಗವಾಗಿ ಆಚರಿಸಲು ಸಾಧ್ಯವಾಗುತ್ತಿಲ್ಲ. ಬಕ್ರೀದ್ ಸಂದರ್ಭ ಎಲ್ಲಾ ಚೆಕ್ ಪಾಯಿಂಟ್ ಗಳಲ್ಲಿ ಒಬ್ಬ ಖಾಕಿ ಸಮವಸ್ತ್ರದವರು ಕಂಡು ಬರುತ್ತಾರೆ, ಮತ್ತು ಸಮವಸ್ತ್ರದ ಕಣ್ಗಾವಲಿನಲ್ಲೇ ಬಕ್ರೀದ್ ಆಚರಿಸಲಾಗುತ್ತಿದೆ. ಇದೆಂತಹಾ ಅದಾವತು ಬಂದಿದೆ ನಮ್ಮ ಊರಿನ ಸೌಹಾರ್ಧತೆಗೆ, ಎಂದು ಯೋಚಿಸುವಾಗ ಹೃದಯದೊಳಗೆ ವಿಚಿತ್ರ ಸಂಕಟ ವುಂಟಾಗುತ್ತಿದೆ. ಇನ್ನು ಈ ವೈಮನಸ್ಕತೆಗಳು ಮುಗಿಯುವುದೇ ಇಲ್ಲವೇನೋ ಎಂದು ಯೋಚಿಸುತ್ತಿರುವಾಗಲೇ ಅಲ್ಲೆಲ್ಲೋ ಬೆಳಕಿಂಡಿಯೊಂದು ಮೆಲ್ಲನೇ ಕಣ್ಣು ತೆರೆಯುತ್ತಿರುವಂತಹಾ ಸೂಚನೆ ಕಂಡಾಂತಾಗಿದೆ. ಹಲವಾರು ಕೋಮುಗಲಭೆಗಳು, ಆತಂಕವಾದೀಯ ದಾಳಿ, ಆಕ್ರಮಣಗಳಿಗೆ ಮಾತ್ರವೇ ಸುದ್ದಿಯಾಗುತ್ತಿದ್ದ ಮುಂಬೈಯಲ್ಲಿ ಮೊನ್ನೆ ನಮಾಝ್ ಮಾಡುತ್ತಿದ್ದ ಮುಸ್ಲಿಂ ಬಾಂಧವರು ಗಣೇಶ ಚತುರ್ಥಿಯ ಸಂದರ್ಭ, ಮೆರವಣಿಗೆಗೆ ಅವಕಾಶ ನಿಡಿದ್ದೂ, ನಮಾಝ್ ಮಾಡುತ್ತಿರುವ ಮುಸ್ಲಿಂ ಬಾಂಧವರಿಗೆ ತೊಂದರೆಯಾಗದಂತೆ ಹಿಂದೂ ಬಾಂಧವರು ಗಣೇಶನ ಮೆರವಣಿಗೆಯನ್ನು ಶಾಂತಿಯುತವಾಗಿ ನಡೆಸಿದ ಸುದ್ದಿ ಅತೀವ ಸಂತೋಷ ಕೊಟ್ಟಿತ್ತು.

ಹೌದು, ನಮ್ಮ ಸಮಾಜದಲ್ಲಿ ಸೌಹಾರ್ದತೆ ಇನ್ನೂ ಹದಗೆಟ್ಟಿಲ್ಲ. ನಾವೆಲ್ಲರೂ ಇನ್ನೂ ಪರಸ್ಪರರ ಹಿತಚಿಂತಕರಾಗಿಯೇ ಉಳಿದು ಕೊಂಡಿದ್ದೇವೆ, ಶಾಂತಿ, ಸಾಮರಸ್ಯ, ನೆಮ್ಮದಿಯ ಬದುಕು ಬೇಕು ಎನ್ನುವ ಕೂಗು ನಮ್ಮಾತ್ಮದೊಳಗೆ ಇನ್ನೂ ಜೀವಂತವಾಗಿದೆ ಎಂಬುವುದಕ್ಕೆ ಇದೊಂದು ಸುಸ್ಪಷ್ಟ ನಿದರ್ಶನವಾಗಿದೆ. ಈ ನಮಾಝು, ಈ ಗಣೇಶನ ಮೆರವಣಿಗೆಗಳು ನಮ್ಮೊಳಗಿನ ನಾವು ಜೀವಂತವಾಗಿರುವುದನ್ನು ಸಾಬೀತು ಪಡಿಸಿದವು. ಈ ಜಿವಂತಿಕೆ ಭಾರತದ ಮೂಲೆ ಮುಲೆಗಳಲ್ಲೂ ಕಾಣ ಸಿಗಬೆಕಿದೆ. ಇಂತಹಾ ಸೌಹಾರ್ಧತೆಗಳು, ಸಮಾಜದ ಶ್ರೀ ಸಾಮಾನ್ಯನ ಇಚ್ಛಾ ಶಕ್ತಿಯಿಂದಾಗಿಯೇ ಉಂಟಾಗುತ್ತದೆ. ಇಂತಹಾ ಸೌಹಾರ್ಧಯುತ ನಮಾಝ್ ಗಳು, ಗಣೇಶ ಚತುರ್ತಿಗಳು ಮತ್ತೆ ಮತ್ತೆ ನಮ್ಮೊಳಗೆ ಮಲಗಿರುವ ನಮ್ಮನ್ನು ಬಡಿದೆಚ್ಚರಿಸುತ್ತಾ? ಹಳೆಯ ಆ ಮಾಲಿನ್ಯ ರಹಿತ ದಿನಗಳು ಮತ್ತೆ ಮರಳಿ ಬರಲಿ ಎಂಬ ನಿರೀಕ್ಷೆಯೊಂದಿಗೆ…

bakrid 2

 

 

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಚೆಕ್ ಪೋಸ್ಟ್ ಬಳಿ ಇಸ್ರೇಲ್ ಸೈನಿಕನಿಂದ ಫೆಲೆಸ್ತೀನೀ ವಿದ್ಯಾರ್ಥಿನಿಯ ಬರ್ಬರ ಹತ್ಯೆ

ಮುಂದಿನ ಸುದ್ದಿ »

ಗೋ ಬಲಿದಾನ ನಿಷೇಧ; ಕಾಶ್ಮೀರದಲ್ಲಿ ಯುವ ಸಮೂಹ ಮತ್ತು ಭದ್ರತಾ ಪಡೆಯ ನಡುವೆ ಘರ್ಷಣೆ

ಸಿನೆಮಾ

 • 3

  ನನಗೂ ತುಳು ಸಿನಿಮಾದಲ್ಲಿ ನಟಿಸುವ ಆಸೆ: ಶಿವರಾಜ್ ಕುಮಾರ್

  January 19, 2017

  – ಶಫೀ ಉಚ್ಚಿಲ ನ್ಯೂಸ್ ಕನ್ನಡ ವರದಿ (19-1-17): ಕಾಪು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ಟಗರು ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ‘ಟಗರು’ ತಂಡ ಎರಡನೇ ಹಂತವನ್ನು ಕಾಪು ಸಮೀಪದ ಉಚ್ಚಿಲದಲ್ಲಿ ಚಿತ್ರೀಕರಿಸುತ್ತಿದ್ದು, ...

  Read More
 • Chennai-Express-First-Look-tbwm

  ಚೆನ್ನೈ ಎಕ್ಸ್ ಪ್ರೆಸ್ ನಿರ್ಮಾಪಕನ ವಿರುದ್ಧ ಅತ್ಯಾಚಾರ ಆರೋಪ

  January 18, 2017

  ನ್ಯೂಸ್ ಕನ್ನಡ(18-1-2017): ಸೂಪರ್ ಹಿಟ್ ಬಾಲಿವುಡ್ ಚಲನಚಿತ್ರ “ಚೆನ್ನೈ ಎಕ್ಸ್ ಪ್ರೆಸ್”ನ ನಿರ್ಮಾಪಕ ಕರೀಂ ಮೊರಾನಿ ವಿರುದ್ಧ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 25 ವರ್ಷದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರಗೈದಿರುವುದಾಗಿ ದೂರು ದಾಖಲಾಗಿದ್ದು, ...

  Read More
 • ra-one

  “ರಾ ಒನ್” ಚಿತ್ರದ ರಾಷ್ಟ್ರಪ್ರಶಸ್ತಿ ವಿಜೇತ ಅನಿಮೇಟರ್ ನಿಧನ

  January 18, 2017

  ನ್ಯೂಸ್ ಕನ್ನಡ(18-1-2017): ರಾ ಒನ್ ಚಿತ್ರದ ಅನಿಮೇಷನ್ ಗಾಗಿ ರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದ ಚಾರು ಖಂದಾಲ್ ನಿಧನರಾಗಿದ್ದಾರೆ. 4 ವರ್ಷಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚಾರು ದೀರ್ಘಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಶಾರುಕ್ ...

  Read More
 • dangal

  ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಬಾಚಿಕೊಂಡ “ದಂಗಲ್”

  January 15, 2017

  ನ್ಯೂಸ್ ಕನ್ನಡ(15-1-2017): ಮುಂಬೈಯಲ್ಲಿ ನಡೆದ ಫಿಲ್ಮ್ ಫೇರ್ ಅವಾರ್ಡ್‍ನಲ್ಲಿ ಅಮೀರ್ ಖಾನ್ ನಟನೆಯ ಸೂಪರ್ ಹಿಟ್ ಚಲನಚಿತ್ರ “ದಂಗಾಲ್” ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಉತ್ತಮ ಚಿತ್ರ ಪ್ರಶಸ್ತಿಯನ್ನು ದಂಗಾಲ್ ಗಳಿಸಿದ್ದು, ಉತ್ತಮ ನಟ ಪ್ರಶಸ್ತಿಯನ್ನು ಅಮೀರ್ ಖಾನ್, ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×