Friday October 16 2015

Follow on us:

Contact Us
c1

ಮಣಿಪಾಲ ಅತ್ಯಾಚಾರ ಪ್ರಕರಣದ ತೀರ್ಪಿನಂತೆಯೇ ಇನ್ನುಳಿದ ಅಮಾಯಕರ ನೋವಿಗೂ ಧ್ವನಿಯಾಗಲಿ ನ್ಯಾಯಾಂಗ

– ರುಕಿಯಾ ಎ. ರಝಾಕ್

2013 ರ ಜೂನ್ ನಲ್ಲಿ ನಡೆದ ಮಣಿಪಾಲ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಅಪರಾಧಿಗಳಿಗೆ ಎರಡು ವರುಷಗಳ ಬಳಿಕ ಕೊನೆಗೂ ನ್ಯಾಯಾಲಯ ಶಿಕ್ಷೆ ಜಾರಿಗೊಳಿಸಿದೆ. ಇದರಿಂದ ನ್ಯಾಯಾಂಗವೆಂಬ ಸರಕಾರದ ಯಂತ್ರ ‘ಉಸಿರಾಡುತ್ತಿದೆ’ ಎಂಬುದು ಸಾಬೀತಾಯಿತು. ಏನೋ ಒಂದು ರೀತಿಯ ಸಂತೃಪ್ತಿ, ನೆಮ್ಮದಿ ಇದೆ ಆದರೂ ಆ ಹೆಣ್ಣು ಅನುಭವಿಸಿದ ಮಾನಸಿಕ ದೈಹಿಕ ಯಾತನೆಗಳೆದರು ಆವಳ ಕಣ್ಣಂಚಿನಲ್ಲಿ ಬದುಕಿನ ಹಂಬಲ ಹತ್ಯೆಯಾಗಿದ್ದುದರೆದುರು, ಆಕೆಯ ಹೆತ್ತವರ ಕರುಳ ಸಂಕಟದೆದುರು ಈ ಜಿವಾವಧಿಗಳು ಅತೀ ಅಲ್ಪ ಶಿಕ್ಷೆಯೆನಿಸಿತು. ಆದರೂ ಅಪರಾಧಿಗಳು ಶಿಕ್ಷೆಗೊಳಗಾದರೆಂಬ ತೃಪ್ತಿ ಖಂಡಿತಾ ಇದೆ.

ಇತ್ತೀಚಿನ ಹಲವಾರು ಪ್ರಕರಣಗಳಿಂದಾಗಿ ಜನತೆ ನ್ಯಾಯಾಂಗ, ಶಾಸಕಾಂಗ ಸಹಿತ ಕಾನೂನು ವ್ಯವಸ್ಥೆಯ ಮೇಲಿನ ವಿಶ್ವಾಸ ಕಳೆದುಕೊಳ್ಳತೊಡಗಿದ್ದಾರೆ. ಇದು ಜನತೆಯ ಮಾನಸಿಕ ದುರ್ಬಲ ಸ್ಥಿತಿ ಖಂಡಿತಾ ಅಲ್ಲ ನಮ್ಮ ದೇಶದ ವ್ಯವಸ್ಥೆ ಪ್ರಜೆಗಳಲ್ಲಿ ಇಂತಹಾ ಒಂದು ಅಭದ್ರತೆ, ಅಪನಂಬಿಕೆಯ ಭಾವ ಉಂಟು ಮಾಡಿದೆ. ನಮ್ಮ ವ್ಯವಸ್ಥೆಯೇ ಆ ರೀತಿ ನಡೆದುಕೊಂಡು ಬಂದಿದೆ. ಇಲ್ಲಿ ಅಪರಾಧಿಗಳು ‘ಒಳ’ ಸೇರಿದಷ್ಟೇ ಸಲೀಸಾಗಿ ‘ಹೊರ’ ಬಂದು ನಿರ್ಭಿತರಾಗಿ ಎದೆಸೆಟೆಸಿ ನಡೆಯುತ್ತಾ ನ್ಯಾಯವನ್ನು ಅಣಕಿಸಿದ ಹಲವಾರು ಘಟನೆ ನಮ್ಮ ಕಣ್ಣಮುಂದೆಯೇ ನಡೆದಿದೆ. ಅಲ್ಲದೇ ನಿರಪರಾಪರಾಧಿಗಳು ವರ್ಷಾನುಗಟ್ಟಲೆ ಜೈಲಿನಲ್ಲಿ ಕೊಳೆಯುತ್ತಾರೆ. ತಮ್ಮದಲ್ಲದ ತಪ್ಪಿಗಾಗಿ ತಮ್ಮ ಜೀವಿತದ ಅಮೂಲ್ಯ ಕ್ಷಣಗಳನ್ನು ಸಲಾಖೆಗಳ ಹಿಂದೆ ನಿಟ್ಟುಸಿರಿಡುತ್ತಾ, ಬಂಧುಗಳನ್ನು ಸೇರುವ ತವಕದಲ್ಲೇ ಕಳೆದುಬಿಡುತ್ತಾರೆ. ಅಷ್ಟೇ ಏಕೆ, ವಿಚಾರಣೆಗಳು, ಜಾಮೀನು, ಆರೋಪ, ಪ್ರತ್ಯಾರೋಪವೆಲ್ಲಾ ಅನಂತರದ ವಿಚಾರವಾಯಿತು, ನಮ್ಮ ದೇಶದ ನ್ಯಾಯಾಲಯಗಳಲ್ಲಿ ಇನ್ನೂ ತೆರೆಯಲ್ಪಡದ ಪ್ರಕರಣಗಳ ಉದ್ದದ ಪಟ್ಟಿಯೇ ಇದೆ.!

news kannada

“ವಿಳಂಬಿತ ನ್ಯಾಯ ನಿರಾಕರಿಸಲ್ಪಟ್ಟ ನ್ಯಾಯ” ಎಂಬ ಹೇಳಿಕೆ ಇದೆ. ನ್ಯಾಯ ಪ್ರಕ್ರಿಯೆ ವಿಳಂಬವಾದಷ್ಟೂ ಬಲಾಢ್ಯ ಅಪರಾಧಿಯ ಸ್ಥೈರ್ಯ ಹೆಚ್ಚುತ್ತಾ ಹೋಗುತ್ತದೆ. ವಕೀಲರ ಜೇಬು ಗಟ್ಟಿಗೊಳಿಸುತ್ತಾ ಮುಂದಿನ ದಿನಾಂಕ ‘ಖರೀದಿಸಲು’ ಈ ಅಪರಾಧಿಗಳಿಗೆ ಹೆಚ್ಚು ಕಷ್ಟಪಡಬೇಕಾದುದೇನಿಲ್ಲ. ಈ ರೀತಿ ಮುಂದೂಡಿಸಲ್ಪಟ್ಟ ನ್ಯಾಯ ವಿಳಂಬವಾದಷ್ಟೂ ಪ್ರಕರಣದ ತೀವ್ರತೆ ಕಳೆದುಕೊಳ್ಳುತ್ತಾ ಮುಂದೊಂದು ದಿನ ತಣ್ಣಗಾಗಿ ಹೇಳಹೆಸರಿಲ್ಲದಂತಾಗಿಬಿಡುತ್ತದೆ. ಕೋರ್ಟು ಕಚೇರಿಗಳ ಮೆಟ್ಟಿಲುಗಳಲ್ಲಿ ತಿಪ್ಪರಲಾಗ ಹಾಕುವ ಬಡಜನತೆ ಮಾತ್ರ ವಕೀಲರ ಫೀಸು ಕಟ್ಟಲಾಗದೇ, ಭ್ರಷ್ಟ ಪೋಲಿಸರ ಮೇಜಿನಡಿಯ ಚೀಲ ತುಂಬಿಸಲಾಗದೇ ರೋಸಿ ಹೋಗಿಬಿಟ್ಟಿರುತ್ತಾರೆ. ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಿರುವ ಮಧ್ಯಮ ವರ್ಗದ ಜನತೆಗೆ ಈ ‘ದುಬಾರಿ ಖರ್ಚಿನ’ ಉಸಾಬರಿ ಬೇಡವಾಗಿ ಬಿಟ್ಟಿರುತ್ತದೆ. ಹೀಗಾಗಿಯೇ ಅದೆಷ್ಟೋ ನ್ಯಾಯ ಪ್ರಕರಣಗಳು ನ್ಯಾಯಾಲಯದ ಹೊರಗೆಯೇ ಕಾಂಚಾಣದ ಬೆಲೆಗೆ ಮಾರಲ್ಪಟ್ಟಿರುತ್ತವೆ.

news kannada

ಮಣಿಪಾಲದ ‘ನಿರ್ಭಯಾ’ ಅಪರಾಧಿಗಳಿಗೆ ಶಿಕ್ಷೆಯಾಯಿತು. ಇಂತಹ ಸಂದರ್ಭ ಬೈಂದೂರಿನಲ್ಲಿ ಅತ್ಯಾಚಾರಗೈದು ಹತ್ಯೆ ಮಾಡಲ್ಪಟ್ಟ ರತ್ನಾ ಕೊಠಾರಿಗೂ ನ್ಯಾಯ ಸಿಗಲಿ ಎಂದು ಮನಸ್ಸು ಹಾರೈಸುತ್ತಿದೆ. ಕತ್ತಲೆಯ ಲೋಕದಲ್ಲಿ ನಿಗೂಢ ರೀತಿಯಲ್ಲಿ ಕಣ್ಮರೆಯಾದ ಯುವತಿಯರ ಆತ್ಮಗಳಿಗೂ ಒಂದಿಷ್ಟು ಶಾಂತಿ ಸಿಗಲಿ. ದೌರ್ಜನ್ಯಕ್ಕೊಳಗಾಗಿ ಹೇಳಹೆಸರಿಲ್ಲದಂತೆ ಕಣ್ಮರೆಯಾದ ಯುವತಿಯ ಹತ್ಯೆಯ ಅಪರಾಧಿಗಳಿಗೆ ಶಿಕ್ಷೆಯಾಗುವುದನ್ನು ಕಂಡು ಹೆತ್ತವರ ಹೃದಯಕ್ಕೊಂದಿಷ್ಟು ನೆಮ್ಮದಿ ಸಿಗಲಿ. ರತ್ನಾ ವಿಚಾರದಲ್ಲಿ ಯಾವ ರೀತಿಯ ಅನ್ಯಾಯವಾಗಿದೆಯೆಂದರೆ, ರತ್ನಾ ಸಾವಿನ ವರುಷವೊಂದು ಕಳೆದರೂ ಮರಣೋತ್ತರ ಪರೀಕ್ಷೆಯ ವರದಿಯನ್ನೂ ಮನೆಯವರಿಗೆ ನೀಡಲಾಗಿಲ್ಲ! ಕಾನೂನು ಪಾಲಕರು ನ್ಯಾಯ ವ್ಯವಸ್ಥೆಯನ್ನು ಕಾಪಾಡುವ ನೈತಿಕತೆಯನ್ನು ತೋರಿದ್ದರೆ ಸಂತ್ರಸ್ತೆಯರ ಪರವಾಗಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಾ ಬೀದಿಗಿಳಿಯುವ ಅವಶ್ಯಕತೆಯೇ ಇರುತ್ತಿರಲಿಲ್ಲ , ಮತ್ತು ಅದರ ಮೂಲಕ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರಮೇಯವೇ ಬರುತ್ತಿರಲಿಲ್ಲ. ಇನ್ನು ಉಜಿರೆ ಎಸ್. ಡಿ. ಎಮ್ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಮತ್ತು ಸೌಜನ್ಯಾಗಿಂತಲೂ ಮುನ್ನ ನಡೆದ ವೇದವಲ್ಲಿ, ಪದ್ಮಲತಾ ಸಹಿತ ನೂರಾರು ಮುಚ್ಚಿ ಹೋದ, ಮುಚ್ಚಲ್ಪಟ್ಟ ನಿಗೂಢ ನಾಪತ್ತೆ, ಅತ್ಯಾಚಾರ, ಸಾವಿನ ಪ್ರಕರಣಗಳೂ ಇತ್ಯರ್ಥವಾಗಲಿ. ನೈಜ ಅಪರಾದಿಗಳು ಶಿಕ್ಷೆಗೊಳಪಡಲಿ. ಜನತೆ ನ್ಯಾಯಾಂಗದ ಮೇಲಿನ ಭರವಸೆ ಕಳೆದುಕೊಳ್ಳದೇ ಅದು ಇನ್ನಷ್ಟು ಗಟ್ಟಿಗೊಳ್ಳಲಿ ಎಂಬ ಆಶಾವಾದ, ಹಾರೈಕೆಯೊಂದಿಗೆ…

 

nkspb

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಗುಲಾಮ್ ಅಲಿ, ಖುರೇಶಿ ಬಳಿಕ ಶಿವಸೇನೆಯಿಂದ ಮೈಸೂರ್ “ಪಾಕ್” ನಿಷೇಧಕ್ಕೆ ಆಗ್ರಹ

ಮುಂದಿನ ಸುದ್ದಿ »

ಶಾರ್ಜಾ: 7ನೇ ಮಹಡಿಯಿಂದ ಬಿದ್ದು ಭಾರತೀಯ ವಿದ್ಯಾರ್ಥಿನಿ ದಾರುಣ ಸಾವು

ಸಿನೆಮಾ

 • kattappa

  ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಕರ್ನಾಟಕದಲ್ಲಿ!

  March 18, 2017

  ನ್ಯೂಸ್ ಕನ್ನಡ ವರದಿ(18.03.2017)-ಬೆಂಗಳೂರು: ಬಾಹುಬಲಿ-2 ಚಿತ್ರಕ್ಕೆ ಕರ್ನಾಟಕದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರವನ್ನು ನಿಷೇಧ ಮಾಡುವಂತೆ ಭಾರೀ ಒತ್ತಾಯಗಳು ಕೇಳಿ ಬಂದಿದೆ. ತಮಿಳು ನಟ ಸತ್ಯರಾಜ್ ಕಾವೇರಿ ಹೋರಾಟದ ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿ ಕನ್ನಡಿಗರ ...

  Read More
 • eega

  ಕಿಚ್ಚ ಸುದೀಪ್ ಗೆ ಆಂಧ್ರ ಸರಕಾರದ ನಂದಿ ಪ್ರಶಸ್ತಿ

  March 1, 2017

  ನ್ಯೂಸ್ ಕನ್ನಡ(1-3-2017): 2012-13ನೆ ಸಾಲಿನ “ನಂದಿ ಪ್ರಶಸ್ತಿ”ಯನ್ನು ಆಂಧ್ರಪ್ರದೇಶ ಸರಕಾರ ಘೋಷಿಸಿದ್ದು, “ಅಭಿನಯ ಚಕ್ರವರ್ತಿ” ಕಿಚ್ಚ ಸುದೀಪ್ ಅತ್ಯುತ್ತಮ ಖಳನಟನಾಗಿ ಆಯ್ಕೆಯಾಗಿದ್ದಾರೆ. 2012ರಲ್ಲಿ ಬಿಡುಗಡೆಯಾಗಿದ್ದ, ಎಸ್.ಎಸ್. ರಾಜಮೌಳಿ ನಿರ್ದೇಶನದ “ಈಗ” ಚಿತ್ರದ ನಟನೆಗಾಗಿ ಸುದೀಪ್ ಅವರಿಗೆ “ನಂದಿ ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×