Friday January 12 2018

Follow on us:

Contact Us

ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರತೀ ದಿನ ‘ಎಂ’ಪ್ರೆಂಡ್ಸ್ ಮೂಲಕ ಅನ್ನದಾನ ಪುಣ್ಯದ ಕೆಲಸ: ಯುಟೀ ಖಾದರ್

ನ್ಯೂಸ್ ಕನ್ನಡ ವರದಿ: ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ರೋಗಿಗಳೊಂದಿಗೆ ಉಳಿದುಕೊಳ್ಳುವ ಕೇರ್ ಟೇಕರ್ ಗಳಿಗೆ ಪ್ರತೀ ದಿನ ರಾತ್ರಿ ಅನ್ನಾದಾನ ಮಾಡುವ ಯೋಜನೆಯನ್ನು ಆರಂಭಿಸಿರುವ ಎಂ ಪ್ರೆಂಡ್ಸ್ ಬಳಗವು ಈ ಮೂಲಕ ನೂರಾರು ಜನರ ಹಸಿವು ತಣಿಸುವ ಪ್ರಯತ್ನ ಮಾಡುತ್ತಿದೆ. ಸದಾ ವಿಭಿನ್ನವಾಗಿ ಸಮಾಜದ ಜನರೊಂದಿಗೆ ಸ್ಪಂದಿಸುವ ‘ಎಂ’ ಪ್ರೆಂಡ್ಸ್ ನ ಈ ಪ್ರಯತ್ನಕ್ಕೆ ಸಾರ್ವತ್ರಿಕ ಪ್ರಶಂಶೆ ವ್ಯಕ್ತವಾಗಿದೆ. ಆಹಾರ ಸಚಿವರಾದ ಯುಟೀ ಖಾದರ್ ರವರು ‘ಎಂ’ಪ್ರೆಂಡ್ಸ್ ನ ಸದಸ್ಯರ ಆತ್ಮವಿಶ್ವಾಸ ಮತ್ತು ಸಾಮಾಜಿಕ ಕಳಕಳಿಗೆ ಅಭಿನಂದನೆ ಸಲ್ಲಿಸಿದರು. ಸಮಾಜದಲ್ಲಿ ಸಕರಾತ್ಮಕ ಆಲೋಚನೆಗಳನ್ನು ಕಾರ್ಯಗತಗೊಳಿಸಿ ಯುವ ಸಮೂಹವು ಇಂತಹ ಪ್ರಯತ್ನಗಳನ್ನು ಮಾಡಿದಾಗ ನಾವು ಸುಂದರ ಸಮಾಜವನ್ನು ನಿರ್ಮಿಸಬಹುದು ಎಂದವರು ಅಭಿಪ್ರಾಯಪಟ್ಟರು. ಇದು ಕೇವಲ ಊಟ ವಿತರಿಸುವ ಕಾರ್ಯ ಮಾತ್ರವಲ್ಲ ಇದು ಮಾನವೀಯತೆಯನ್ನು ಹರಡುವ ಪ್ರಯತ್ನ ಎಂದ ಸಚಿವರು ಸಮಾಜದ ಯುವಕರು ಇಂತಹ ಉದಾತ್ತ ಕಾರ್ಯದಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದರು.

ವೆನ್ಲಾಕ್ ಸರಕಾರಿ ಆಸ್ಪತ್ರೆಗೆ ರಾಜ್ಯದ ಮೂಲೆ ಮೂಲೆಯಿಂದಲೂ ಬಡ ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ರೋಗಿಗಳಿಗೆ ಸರಕಾರದ ವತಿಯಿಂದ ಆಹಾರ ಸಿಗುತ್ತದೆ. ಆದರೆ ರೋಗಿಗಳೊಂದಿಗೆ ಉಳಿದುಕೊಳ್ಳುವ ಬಡ ಕುಟುಂಬದ ಸದಸ್ಯರಿಗೆ ಇಲ್ಲಿ ಯಾವುದೇ ಸೌಲಭ್ಯ ಇರುವುದಿಲ್ಲ. ಮಂಗಳೂರಿ ಪಟ್ಟದ ಹೋಟೇಲ್ ಗಳ ದುಬಾರಿ ಊಟದ ವೆಚ್ಚವನ್ನು ಕೊಡಲು ಇವರು ಶಕ್ತರಲ್ಲ. ದೂರದ ಜಿಲ್ಲೆಗಳಿಂದ ಬರುವ ರೋಗಿಗಳು ಅತ್ಯಂತ ಕಡು ಬಡವರೇ ಆಗಿರುತ್ತಾರೆ. ರೋಗಿಗಳೊಂದಿಗೆ ಹೆಚ್ಚಾಗಿ ವೃದ್ದರು ಇಲ್ಲವೇ ಮಹಿಳೆಯರೇ ಇರುತ್ತಾರೆ. ಇವರು ಪಟ್ಟಣದ ಸುತ್ತ ಅಲೆದಾಡಿ ರಾತ್ರಿಯ ಊಟಕ್ಕೆ ಪರದಾಡುತ್ತಿದ್ದರು. ಕೆಲವರು ಹಸಿದು ಮಲಗಿದ್ದೂ ಇದೆ. ಇದನ್ನೆಲ್ಲ ಮನಗಂಡು ‘ಎಂ’ ಪ್ರೆಂಡ್ಸ್’ ಇಂತಹ ಅಸಾಹಯಕರ ನೆರವಿಗೆ ರಾತ್ರಿಯ ಊಟದ ಸೌಲಭ್ಯವನ್ನು ಕಲ್ಪಿಸಿಕೊಟ್ಟಿದೆ. ಪ್ರತೀ ದಿನವು ನಾಲ್ಕು ನೂರಕ್ಕಿಂತ ಹೆಚ್ಚಿನ ಜನರು ಇದರ ಪ್ರಯೋಜನಪಡೆಯುತ್ತಿದ್ದಾರೆ.

ನಿನ್ನೆ ಉಧ್ಯಮಿ ಹಾಗೇ ಶಮಾ ಗೋಲ್ಡ್ ಇದರ ಮಾಲಕರಾದ ಶರೀಫ್ ಜೋಕಟ್ಟೆಯವರು ರೋಗಿಗಳ ಸಂಬಂಧಿಕರಿಗೆ ಎಂ ಪ್ರೆಂಡ್ಸ್ ಮೂಲಕ ಅನ್ನದಾನ ಮಾಡಿದರು. ಸಹೋದರತ್ವ ಮತ್ತು ಸೌಹಾರ್ಧತೆ ಇಲ್ಲಿ ನಶಿಸಿ ಹೋಗುತ್ತಿದೆ. ಕರಾವಳಿ ಸದಾ ಪಕ್ಷ್ಯುಬ್ಧವಾಗಿದೆ ಎಂದು ಆರೋಪಿಸುವ ಜನರಿಗೆ ಕರಾವಳಿ ಜಿಲ್ಲೆಯ ಜನರ ಮಾನವೀಯ ಮೌಲ್ಯಗಳ ಪರಿಚಯ ಮಾಡಿಸುವ ಇಂತಹ ಪ್ರಯತ್ನಗಳಿಗೆ ಎಲ್ಲರೂ ಸಹಕರಿಸಬೇಕು ಎಂದು ಅವರು ವಿನಂತಿಸಿದರು. ಇದು ಪುಣ್ಯದ ಕೆಲಸ ಇದನ್ನೇ ನಮ್ಮ ಪ್ರವಾದಿ ಮುಹಮ್ಮದ್ (ಸ) ನಮಗೆ ಕಲಿಸಿರುವುದು. ‘ಎಂ’ ಪ್ರೆಂಡ್ಸ್ ಎಲ್ಲಾ ಧರ್ಮೀಯರ ಸಹಕಾರದಿಂದ ಇಂತಹ ಕಾರ್ಯವನ್ನು ಯಶಸ್ವಿಯಾಗಿ ಮುಂದುವರಿಸಲಿ ಎಂದು ಅವರು ಹಾರೈಸಿದರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ತುಮಕೂರು: ಬಿಜೆಪಿ ನಾಯಕಿ, ಸಂಸದೆ ಶೋಭಾ ಕರಂದ್ಲಾಜೆ ಬಂಧನ!

ಮುಂದಿನ ಸುದ್ದಿ »

ಹಾಸನದಲ್ಲಿ ಭೀಕರ ಅಪಘಾತ: ವೈದ್ಯಕೀಯ ವಿದ್ಯಾರ್ಥಿನಿ ಸೇರಿ 8 ಮಂದಿ ಮೃತ್ಯು!

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×