Tuesday November 14 2017

Follow on us:

Contact Us

ತನ್ನ ಮಗನನ್ನು ಕೊಲೆಗೈದ ಅಪರಾಧಿಯನ್ನು ತಬ್ಬಿಕೊಂಡು ಕ್ಷಮಾದಾನ ನೀಡಿದ ತಂದೆ!

ನ್ಯೂಸ್ ಕನ್ನಡ ವರದಿ(14.11.2017): ಕ್ಷಮೆ, ಮಾನವೀಯತೆಗಳ ಪರಮಾವಧಿಯನ್ನು ದಾಟಿದವರನ್ನು ನಾವು ಸಂತರು ಎನ್ನುತ್ತೇವೆ. ಇಂತಹ ವ್ಯಕ್ತಿಗಳನ್ನು ಕಾಣಲು ಸಿಗುವುದು ನಿಜಕ್ಕೂ ಅಪರೂಪ. ಈ ಹಿಂದೆ ಇರಾನ್ ನಲ್ಲಿ ತನ್ನ ಮಗನನ್ನು ಕೊಂದ ವ್ಯಕ್ತಿಗೆ ಗಲ್ಲುಶಿಕ್ಷೆಯಾಗಿ ಆ ಯುವಕನ ಕೊರಳಿಗೆ ನೇಣು ಕುಣಿಕೆ ಹಾಕಿ ಇನ್ನೇನು ಶಿಕ್ಷೆ ವಿಧಿಸುತ್ತಾರೆ ಎನ್ನುವಷ್ಟರಲ್ಲಿ, ಆ ಯುವಕನ ತಾಯಿಯು ತನ್ನ ಮಗನಿಗೆ ಇಸ್ಲಾಮಿಕ್ ನಿಯಮದ ಪ್ರಕಾರ ಕ್ಷಮಾದಾನ ನೀಡಿಬಿಡುತ್ತಾರೆ. ಇಂತಹಾ ಘಟನೆಯೊಂದು ಅಮೆರಿಕಾದ ವಾಷಿಂಗ್ಟನ್ ನಲ್ಲಿ ನಡೆದಿದ್ದು, ತನ್ನ ಮಗನನ್ನು ಕೊಂದ ವ್ಯಕ್ತಿಗೆ ತಂದೆಯೊಬ್ಬ ಕ್ಷಮಾದಾನ ನೀಡಿದ ಮನಕಲಕುವ ಘಟನೆಯು ವರದಿಯಾಗಿದೆ.

ಲೆಕ್ಸಿಂಗ್ ಟನ್ ನಲ್ಲಿ ಪಿಜ್ಜಾ ಡೆಲಿವರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಸಲಾಹುದ್ದೀನ್ ಎಂಬ ಯುವಕನೋರ್ವನನ್ನು ಬರ್ಬರವಾಗಿ ಕೊಲೆಗೈಯಲಾಗಿತ್ತು. ಈ ಕೊಲೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಅಲೆಕ್ಸಾಂಡರ್ ರೆಲ್ಫೋರ್ಡ್ ಎಂಬಾತನನ್ನು ಪೊಲೀಸರು ಬಂಧಿಸಿ ಆತನಿಗೆ 31ವರ್ಷಗಳ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ರೆಲ್ಫೋರ್ಡ್ ನೇರವಾಗಿ ಕೊಲೆಯಲ್ಲಿ ಭಾಗಿಯಾಗಿಲ್ಲದಿದ್ದರೂ, ಕೊಲೆಯ ಸೂತ್ರದಾರನಾಗಿದ್ದ. ಆತನಿಗೆ ಶಿಕ್ಷೆ ವಿಧಿಸುವ ಸಂದರ್ಭದಲ್ಲಿ ಸಲಾಹುದ್ದೀನ್ ತಂದೆಯು ಎದ್ದು ನಿಂತು, ನನ್ನ ಧರ್ಮ ಇಸ್ಲಾಮ್ ನಮಗೆ ಕ್ಷಮಾಗುಣವನ್ನು ಕಲಿಸಿದ್ದು, ಇಸ್ಲಾಮ್ ಪ್ರಕಾರವಾಗಿ ನಾನು ನನ್ನ ಮಗನನ್ನು ಕೊಂದವನಿಗೆ ಕ್ಷಮಾದಾನ ನೀಡುತ್ತೇನೆ ಎಂದು ಹೇಳಿ ಅಪರಾಧಿಯನ್ನು ತಬ್ಬಿಕೊಂಡರು. ಈ ವೇಳೆ ಇಡೀ ನ್ಯಾಯಾಲಯವೇ ನಿಬ್ಬೆರಗಾಗಿತ್ತು. ಎಲ್ಲರ ಕಣ್ಣಂಚೂ ಹನಿಗೂಡಿತ್ತು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಗೌರಿ ಲಂಕೇಶ್ ಹಂತಕರು ಇನ್ನೂ ಪತ್ತೆಯಾಗಿಲ್ಲ: ಸಿಎಂ ಸಿದ್ದರಾಮಯ್ಯ

ಮುಂದಿನ ಸುದ್ದಿ »

ಬಾಹುಬಲಿಯಂತೆ ಆನೆಯ ಸೊಂಡಿಲಿಗೆ ಹತ್ತಿ ಮುತ್ತುಕೊಡಲು ಹೋದ ಯುವಕ ಈಗ ಹೇಗಿದ್ದಾನೆ ಗೊತ್ತೇ?

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×