Friday November 20 2015

Follow on us:

Contact Us
ರೆಬೆಲ

ಕೋಮುವಾದಿ ಸಂಘಟನೆಗಳ ಬೆಂಬಲಿಗರಿಗೆ ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ

ರುಖಿಯಾ.ಎ.ರಝಾಕ್

ಮಂಗಳೂರು ಸಿಟಿ ಸ್ಮಾರ್ಟ್ ಆಯಿತು. ಬುದ್ಧಿಜೀವಿಗಳ ಜಿಲ್ಲೆಯೆಂದು ಪ್ರಸಿದ್ಧವಾಯಿತು. ಅದರೊಂದಿಗೇ ಕೊಲೆ ಸುಲಿಗೆ, ಅನೈತಿಕ ಗೂಂಡಾಗಿರಿಗೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕಕ್ಕೆ ಇನ್ನಿಲ್ಲದ ಕುಖ್ಯಾತಿಯನ್ನೂ ತಂದು ಕೊಟ್ಟಿತು. ಕೋಮುಗಲಭೆ, ಅಸಹಿಷ್ಣುತೆ. ಅನ್ಯಾಯಗಳಿಗೆ ಮತ್ತೆ ಮತ್ತೆ ಸುದ್ದಿಯಾಯಿತು. ಇದೀಗ ಮತ್ತೆ ಕೋಮು ಧ್ವೇಷ ಸಾಧನೆಗೂ ಸುದ್ದಿಯಾಗುತ್ತಿದೆ. ಹರೀಶ್ ಪೂಜಾರಿ ಹತ್ಯೆ ಮಾಡಿ ಸಹ ಕೋಮಿನ ಮೇಲೆ ಗೂಬೆ ಕೂರಿಸುವ ಹುನ್ನಾರ ಮಾಡಿದ್ದನೆಂಬ ಅಪರಾಧಕ್ಕಾಗಿ ಬಂಟ್ವಾಳದ ಭುವಿತ್ ಶೆಟ್ಟಿಯನ್ನು ಬಂಧಿಸಲಾಗಿದೆ. ಆದರೆ ನಿಜವಾದ ಹಾವು ಹುತ್ತದೊಳಗೆ ಅಡಗಿರುವ ಸಾಧ್ಯತೆಯೇ ಹೆಚ್ಚು. ಬಡ ಕುಟುಂಬದ ಹರೀಶ್ ಪೂಜಾರಿ, ಸಮೀಯುಲ್ಲಾನೊಂದಿಗೆ ತೆರಳುತ್ತಿದ್ದ ಸಂದರ್ಭ ಹಳೆ ಗೇಟ್ ಬಳಿ ದುಷ್ಕರ್ಮಿಗಳು ದಾಳಿ ನಡೆಸಿ ಆತನನ್ನು ಹತ್ಯೆ ಮಾಡಿದ್ದಾರೆ. ಜೊತೆಗಿದ್ದ ಗೆಳೆಯ ಸಮಿಯುಲ್ಲಾಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ.  ಭುವಿತ್ ಗೆ ಹರೀಶ್ ನ ಮೇಲೆ ಯಾವುದೇ ರೀತಿಯ ಪೂರ್ವ ದ್ವೇಷವಿರಲಿಲ್ಲ! ತನ್ನದೇ ಸಮುದಾಯವನ್ನು ಅಲ್ಪಸಂಖ್ಯಾತರ ವಿರುದ್ಧ ಎತ್ತಿ ಕಟ್ಟಿ ದ್ವೇಷ ಹುಟ್ಟು ಹಾಕುವ ಹುನ್ನಾರವಲ್ಲದೇ ಇನ್ಯಾವ ಕಾರಣಗಳೂ ಈ ಹತ್ಯೆಯ ಹಿಂದೆ ಇಲ್ಲ. ಇದು ಖಂಡಿತಾ ಭುವಿತ್ ನ ಸ್ವಯಂಕೃತಾಪರಾಧವಲ್ಲ. ಬದಲಾಗಿ ಭುವಿತ್ ನಂತಹ ಬಿಸಿರಕ್ತದ ಯುವಕರನ್ನು ಹಲವು ಬೈಠಕ್ ಗಳಲ್ಲಿ ಕುಳ್ಳಿರಿಸಿ, ತರಗತಿ ನೀಡಿ , ಕೋಮು ದ್ವೇಷದ ವಿಷ ನೀರೆರೆದು ಪೋಷಿಸಲಾಗುತ್ತದೆ. ಬೈಠಕ್ ಗಳನ್ನು ಪ್ರವೇಶಿಸುವ ಮೊದಲು ಸಾಮಾನ್ಯರಾಗಿರುವ ಯುವಕರು, ಯುವತಿಯರು, ಮಹಿಳೆಯರು, ಪುರುಷರು, ಬೈಠಕ್ ನಿಂದ ಹೊರಬರುವಾಗ ಪೈಶಾಚಿಕತೆಯನ್ನು ಆವಾಹಿಸಿಕೊಂಡು ಬಿಟ್ಟಿರುತ್ತಾರೆ. ಬೈಠಕ್ ಗಳಲ್ಲಿ ಸಹೋದರ ಧರ್ಮಗಳ ಕುರಿತು ಅಸಹನೆ ಉಂಟುಮಾಡುವ ಈ ಬೋಧಕರು ನಿಜವಾದ ಅಪರಾಧಿಗಳಾಗಿರುತ್ತಾರೆ. ಇಲ್ಲಿ ಭುವಿತ್ ನಂತಹವರು ಕೇವಲ ನಿಮಿತ್ತ ಮಾತ್ರ.

bhuvithಹರೀಶ್ ಪೂಜಾರಿ ಒಬ್ಬ ಸಾಮಾನ್ಯ ಯುವಕ. ತನ್ನ ರೋಗ ಪೀಡಿತ ತಂದೆ-ತಾಯಿ ಸಹೋದರಿಯೊಂದಿಗೆ ಬದುಕುತ್ತಿದ್ದ. ಈತನ ಹತ್ಯೆ ಬಲಪಂಥೀಯರಿಗೆ ಒಂದರ್ಥದಲ್ಲಿ ಸಿಹಿ ಸುದ್ದಿಯೇ ಆಗಿದೆ. ಏಕೆಂದರೆ, ಹರೀಶ್ ಹಂತಕರನ್ನು ಅನ್ಯ ಸಮುದಾಯದವರೆಂದು ಬಿಂಬಿಸಿ, ಕೋಮು ದ್ವೇಷ ಹರಡುವ ಸದವಕಾಶಕ್ಕಾಗಿ ಇವರೆಲ್ಲಾ ಕಾಯುತ್ತಿದ್ದರು. ಅದಕ್ಕಾಗಿ ಪ್ರಕರಣವನ್ನು ಸಿ.ಬಿ.ಐ ಗೆ ಒಪ್ಪಿಸುವ, ನೈಜ ಅಪರಾಧಿಯನ್ನು ಬಂಧಿಸುವ ಪುಕಾರು ಈ ಸಂಘಟನೆಯಿಂದ ಜೋರಾಗಿ ನಡೆದಿತ್ತು. ಇದೀಗ ಅಸಲಿ ಅಪರಾಧಿ ತಪ್ಪೊಪ್ಪಿಕೊಂಡ ಬಳಿಕ ಈ ಸಂಘಟನೆಗಳು, ಪಕ್ಷಗಳು ಸೊಲ್ಲೆತ್ತದೆ, ಗಾಢ ಮೌನವಾಗಿಬಿಡುವ ತನ್ನ ಹಿಂದಿನ ಚಾಳಿಗೆ ಅಂಟಿಕೊಂಡಿವೆ. ಈ ಹಿಂದೊಮ್ಮೆ ಮಣಿಪಾಲದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ನಡೆದಾಗ ಇದೇ ಕೇಸರಿ ಪಡೆಗಳು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದ, ಇತರ ಸಂಘಟನೆಗಳೊಡಗೂಡಿ ತಾವೂ ಪ್ರತಿಭಟನೆ ನಡೆಸಿದ್ದವು. ಆದರೆ ತಮ್ಮದೇ ಕೋಮಿನವರು ಅತ್ಯಾಚಾರಿಗಳೆಂದು ಸಾಬೀತಾದ ಕೂಡಲೇ ಮೌನವಾಗಿ ಬಿಟ್ಟಿತ್ತು.

ಇಷ್ಟರವರೆಗೂ ದ.ಕ ಜಿಲ್ಲೆಯಲ್ಲಿ ಸಮುದಾಯಗಳು ಪರಸ್ಪರ ಹೊಡೆದಾಡಿಕೊಂಡಿವೆ. ಉದ್ವಿಗ್ನ ಪರಿಸ್ಥಿತಿಯುಂಟಾಗಿವೆ. ಆದರೆ, ತನ್ನದೇ ಸಮುದಾಯದ ಒಬ್ಬ ನಿರಪರಾಧಿಯನ್ನು ಹತ್ಯೆ ಮಾಡಿದ್ದು, ಸಂಘಟನೆಯ ಹಿಡನ್ ಅಜೆಂಡಾದ ಅನಾವರಣವಲ್ಲದೇ ಮತ್ತೇನು? ಅನ್ಯ ಸಮುದಾಯದೊಂದಿಗಿನ ವೈಷಮ್ಯವುಂಟಾದೀತು. ಆದರೆ, ತನ್ನದೇ ಸಮುದಾಯದೊಂದಿಗೆ ಈ ರೀತಿಯ ವೈಷಮ್ಯ ಮುಗ್ಧನ ಬಲಿ, ಕುತಂತ್ರ, ಪೈಶಾಚಿಕತೆ ಸ್ವೀಕಾರಾರ್ಹವೇ? ಖಂಡಿತಾ ಇಲ್ಲ. ಇದು ಆ ಸಂಘಟನೆಯ ಬೆಂಬಲಿಗರಿಗೆ ಎಚ್ಚರಿಕೆಯ ಕರೆಘಂಟೆಯಾಗಿದೆ. ಅನ್ಯ ಸಮುದಾಯದೊಂದಿಗಿನ ದ್ವೇಷಕ್ಕಾಗಿ ತಮ್ಮವರ ಬಲಿ ಪಡೆದವರೊಂದಿಗೆ ಸಮುದಾಯದ ರಕ್ಷಣೆ, ಹಿತಾಸಕ್ತಿ ಸಾಧ್ಯವೇ? ಇನ್ನು ಈ ಸಂಘಟನೆಯ ಸದಸ್ಯರೂ ತಮ್ಮ ಸದಸ್ಯತ್ವ ಹೊಂದಿರುವುದರ ಕುರಿತು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುವುದು ಉತ್ತಮ. ಈ ಸಂಘಟನೆಗಳಲ್ಲಿ ಬಲಿಯಾದವರು, ಹತ್ಯೆ ಮಾಡಿದ ಹಂತಕರು, ಮತ್ತು ಆರೋಪಗಳಿಂದ ಜೈಲಿನ ಕತ್ತಲೆ ಕೋಣೆ ಸೇರಿದವರು ಮತ್ತು ಬದುಕು ದುಸ್ತರಗೊಂಡವರಲ್ಲಿ ಯಾರೂ ಮೇಲ್ಜಾತಿಯವರಿಲ್ಲ. ಕೇವಲ ಬಂಟರು, ಶೆಟ್ಟಿಗಾರರು, ಶೆಟ್ಟರು, ಮತ್ತು ಕೆಳಜಾತಿಯ ಯುವಕರೂ ಅವರ ಕುಟುಂಬಿಕರು. ಈ ವ್ಯರ್ಥ ಬಲಿದಾನಗಳು ಬೇಕೇ? ತಾವೂ ಬದುಕಿ, ಮನೆಯವರಿಗೂ ಉತ್ತಮ ಬದುಕು ಕೊಟ್ಟು ಸಮಾಜಕ್ಕೆ ಉತ್ತಮ ಪ್ರಜೆಯಾಗಿ ಬಾಳಿ ಬದುಕಿದರೆ ಸಾಲದೇ? ಸಮಾಜಕ್ಕೆ ಕಂಟಕರಾಗಿಯೇ ಬದುಕಬೇಕೇ?

communal tentionಇದು ಪೀತ ಸಂಘಟನೆಯನ್ನು ಬೆಂಬಲಿಸುವವರು ಆತ್ಮವಿಮರ್ಶೆ ಮಾಡಿಕೊಳ್ಳಲು ಸಕಾಲವಾಗಿದೆ. ಇದೀಗ ಸರಕಾರ ಖಂಡಿತವಾಗಿಯೂ ನಿಷ್ಠುರ ಕ್ರಮ ಕೈಗೊಳ್ಳಬೇಕಿದೆ. ಇಂತಹಾ ಮಾನವ ವಿರೋಧಿ ಚಟಿವಟಿಕೆಗಳಿಗೆ ಕಡಿವಾಣ ಹಾಕಬೇಕಿದೆ. ಸಮಾಜ ಕಂಟಕ ಶಕ್ತಿಗಳನ್ನು ತಯಾರಿಸುವ ಇಂತಹಾ ಕಾರ್ಖಾನೆಗಳಿಗೆ (ಸಂಘಟನೆಗಳಿಗೆ) ಶಾಶ್ವತ ಬೀಗ ಜಡಿಯುವುದು ಕಾಲದ ಬೇಡಿಕೆಯಾಗಿದೆ. ಇಂತಹಾ ದುಷ್ಕೃತ್ಯಗಳ ಮುಂದುವರಿಕೆಯು ಮುಂದೊಂದು ದಿನ ಭೀಕರ ದುರಂತಕ್ಕೆ ಕಾರಣವಾದೀತು.ಭಾರತ ವೈವಿಧ್ಯತೆಯಿಂದ ಕೂಡಿದ ರಾಷ್ಟ್ರವೆಂಬುವುದನ್ನೂ,ಇಲ್ಲಿ ವಾಸಿಸುವ ನಾಗರಿಕರೆಲ್ಲರೂ ಜಾತಿ ಮತಗಳ ಭೇದವಿಲ್ಲದೇ ಭಾರತೀಯರೆಂದೂ ಒಪ್ಪಿಕೊಳ್ಳುವುದು ಭಾರತೀಯರ ಕರ್ತವ್ಯವಾಗಿದೆ. ಭಾರತವು ಯಾವುದೋ ಒಂದು ಸಮುದಾಯಕ್ಕೋ, ಜಾತಿಗೋ ಸೇರಿದ ಖಾಸಗಿ ಆಸ್ತಿಯಲ್ಲವೆಂದೂ,  ದೇಶದಲ್ಲಿನ ಎಲ್ಲಾ ಪ್ರಜೆಗಳಿಗೂ ಸಮಾನವಾದ ನಾಗರಿಕ ಹಕ್ಕು ಇದೆ ಎಂಬುವುದನ್ನು ನಿಸ್ಸಂಶಯಾತೀತವಾಗಿ ಸ್ವೀಕರಿಸಬೇಕಾಗಿದೆ. ಕೋಮು ಸಂಘರ್ಷಗಳಿಗೆ, ಗಲಭೆಗಳಿಗೆ ಬಹುಶಃ ಅದು ನಿಜವಾದ ಪರಿಹಾರವಾದೀತು.

nksw

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಲೋಕಾಯುಕ್ತ ಪದಚ್ಯುತಿ ನಿರ್ಣಯ ಇಂದು ಹೈಕೋರ್ಟ್ ಗೆ ರವಾನೆ

ಮುಂದಿನ ಸುದ್ದಿ »

ಸಿರಿಯನ್ ನಿರಾಶ್ರಿತ ವಲಸಿಗರನ್ನು “ಹುಚ್ಚು ನಾಯಿಗಳು” ಎಂದ ಯು.ಎಸ್. ಅಧ್ಯಕ್ಷೀಯ ಅಭ್ಯರ್ಥಿ ಬೆನ್ ಕರ್ಸನ್

ಸಿನೆಮಾ

 • bhavana

  ನಟಿ ಭಾವನಾರನ್ನು ಅಪಹರಿಸಿ, ಲೈಂಗಿಕ ಕಿರುಕುಳ ನೀಡಿದವನ ಬಂಧನ

  February 18, 2017

  ನ್ಯೂಸ್ ಕನ್ನಡ(18-2-2017): ಚಿತ್ರನಟಿ ಭಾವನಾ ಅವರನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳದ ಎರ್ನಾಕುಳಂನಲ್ಲಿ ಭಾವನಾ ಅವರನ್ನು ಅಪಹರಿಸಿದ್ದ ದುಷ್ಕರ್ಮಿಗಳು ಲೈಂಗಿಕ ಕಿರುಕುಳ ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾವನಾ ಅವರ ಕಾರು ಚಾಲಕನಾಗಿದ್ದ ...

  Read More
 • Marali Manege

  ಸೆನ್ಸಾರ್ ಮಂಡಳಿಯವರನ್ನೂ ಕಣ್ಣೀರು ಹಾಕಿಸಿದ ಚಿತ್ರ ಬಿಡುಗಡೆಗೆ ಸಿದ್ಧ

  February 16, 2017

  ಯೋಗೇಶ್ ಮಾಸ್ಟರ್ ನಿರ್ದೇಶನದ ಚಿತ್ರ ಸಂಘಪರಿವಾರ-ಪ್ರಗತಿಪರರ ಅಭಿಪ್ರಾಯವನ್ನೂ ಬದಲಿಸಬಹುದಂತೆ ನ್ಯೂಸ್ ಕನ್ನಡ ವರದಿ(16.02.2017)-ಮಂಗಳೂರು: ಯೋಗೇಶ್ ಮಾಸ್ಟರ್ ಅವರು ನಿರ್ದೇಶಿಸಿರುವ ‘ಮರಳಿ ಮನೆಗೆ’ ಕನ್ನಡ ಚಿತ್ರವು ಇದೀಗ ಚಿತ್ರರಂಗದಲ್ಲಿ ಹೊಸ ಸಂಚಲನವನ್ನು ಮೂಡಿಸಿದ್ದು, ನಾಯಕರ ವೈಭವೀಕರಣದ ಚಿತ್ರಗಳನ್ನೇ ನೋಡಿ ...

  Read More
 • kaabil-hoon-lyrics-title-song-hrithik-roshan-yami-gautam

  ಬಾಕ್ಸ್ ಆಫೀಸ್ ನಲ್ಲಿ “ಕಮಾಲ್” ಮಾಡಿದ “ಕಾಬಿಲ್”

  February 8, 2017

  ನ್ಯೂಸ್ ಕನ್ನಡ(8-2-2017): ಹೃತಿಕ್ ರೋಶನ್-ಯಾಮಿ ಗೌತಮ್ ನಟನೆಯ ಸಸ್ಪೆನ್ಸ್ ಥ್ರಿಲ್ಲರ್ ಚಲನಚಿತ್ರ “ಕಾಬಿಲ್” ಬಾಕ್ಸಾಫೀಸ್ ನಲ್ಲಿ ಕಮಾಲ್ ಮಾಡಿದ್ದು, ಸುಮಾರು 80 ಕೋಟಿ ರೂ. ಗಳಿಸಿದೆ. ವಿಮರ್ಶಕರಿಂದ ಉತ್ತಮ ಅಭಿಪ್ರಾಯ ಗಳಿಸಿದ ಕಾಬಿಲ್ ಎರಡನೆ ವಾರಾಂತ್ಯದಲ್ಲಿ 14.55 ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×