Friday October 9 2015

Follow on us:

Contact Us
dalits

ಕಾನೂನು ರಕ್ಷಕರ `ಡಿಜಿಟಲ್’ ಲಾಠಿಯಲಿ ನ್ಯಾಯದ ಮಾನಹರಾಜು

– ರುಕಿಯಾ ಎ.ರಝಾಕ್

ಭಾರತದ ಮೂಲನಿವಾಸಿಗಳಾದ ದಲಿತರ ವಿರುದ್ಧ ಈ ನಾಡಿನಲ್ಲಾದ ಅನ್ಯಾಯಕ್ಕೆ ಲೆಕ್ಕವೇ ಇಲ್ಲ. ದಲಿತ ಬಾಲಕ ಮೇಲ್ಜಾತಿಯವರ ಗಿಡದಿಂದ ಹೂ ಕಿತ್ತದ್ದಕ್ಕೆ ಹಲ್ಲೆ, ದಲಿತ ಯುವತಿಯ ನೆರಳು ಮೇಲ್ಜಾತಿಯವರ ಮೇಲೆ ಬಿದ್ದದ್ದಕ್ಕೆ ಥಳಿತ, ದಲಿತರು ಮೇಲ್ಜಾತಿಯವರ ಬಾವಿಯಿಂದ ನೀರು ಕುಡಿದದ್ದಕ್ಕೆ ಕಾದ ಸಲಾಕೆಯ ಶಿಕ್ಷೆ, ಮೇಲ್ಜಾತಿಯ ಯುವತಿಯೊಂದಿಗೆ ಪ್ರೀತಿಸಿದ್ದಕ್ಕೆ, ವಿವಾಹವಾದದ್ದಕ್ಕೆ, ಪಂಚಾಯತುಗಳ ಆದೇಶದಂತೆ ದಲಿತ ಕುಟುಂಬದ ಯುವತಿಯರ ಅತ್ಯಾಚಾರ, ದಲಿತ ಯುವಕ ತನ್ನ ಮೊಬೈಲಿನಲ್ಲಿ ಅಂಬೇಡ್ಕರ್ ಕುರಿತಾದ ರಿಂಗ್ ಟೋನ್ ಹಾಕಿದ್ದಕ್ಕಾಗಿ ಥಳಿಸಿ ಹತ್ಯೆ.. ಸಾವಿರಾರು ಪ್ರತಿಭಟನೆ ಸಾವಿರಾರು ಪ್ರತಿರೋಧಗಳ ಬಳಿಕವೂ, ನಿರಂತರವಾಗಿ ಮತ್ತೆ ಮತ್ತೆ ದಮನಿತರನ್ನು ಪಾತಾಳಕ್ಕೆ ತಳ್ಳಿಬಿಡಲಾಗುತ್ತಿದೆ.

ನಿನ್ನೆ ದೂರು ನೀಡಲು ಪೋಲೀಸ್ ಠಾಣೆಗೆ ಹೋದ ದಲಿತ ಕುಟುಂಬದ ಮೇಲೆ ಸ್ವತಃ ಪೋಲಿಸರೇ ಹಲ್ಲೆ ನಡೆಸಿ ಬೀದಿಯಲ್ಲೇ ಆ ಕುಟುಂಬವನ್ನು ಬೆತ್ತಲೆಗೊಳಿಸುವ ಮೂಲಕ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಡೆಸಿದ ದೌರ್ಜನ್ಯವನ್ನು ಕಂಡು ನಮ್ಮ ಒಟ್ಟು ‘ವ್ಯವಸ್ಥೆಯ’ ಮೇಲೆಯೇ ಹೇಸಿಗೆ ಹುಟ್ಟಿಸಿತು. ದಲಿತರನ್ನು ಮುಟ್ಟಲೂ ಹಿಂಜರಿಯುವ ಸವರ್ಣೀಯರಿಗೆ ಅವರ ಸ್ತ್ರೀಯರನ್ನು ಅತ್ಯಾಚಾರ ಮಾಡುವಾಗ ಯಾವ ಮಡಿ ಮೈಲಿಗೆಗಳೂ ಅಡ್ಡಬಾರದು. ಖೈರ್ಲಾಂಜಿ, ಕಂಬಾಲಪಲ್ಲಿಗಳ ರಕ್ತ ಸಿಕ್ತ ಪುಟಗಳ ಕಮಟು ವಾಸನೆ ಬೀರುತ್ತಿರುವಾಗಲೇ,  ಸುಟ್ಟ ಗಾಯಗಳ ಉರಿ ಇನ್ನೂ  ಹಸಿಯಾಗಿರುವಾಗಲೇ  ಮತ್ತೆ ಮತ್ತೆ ಗಾಯದ ಮೇಲೆ ಬರೆ ಎಳೆಯಲಾಗುತ್ತಿದೆ.  ಎಷ್ಟೋ ದಶಕಗಳ ಕಾಲ ಈ ತಳವರ್ಗದ ಜನರನ್ನು “ಹರಿಜನ..’ ನೀನು ಈ ಜಗತ್ತಿನ ಎಲ್ಲಾ ಕಲ್ಮಶಗಳನ್ನು ಶುದ್ಧೀಕರಿಸುತ್ತಿರುವೆ, ನೀನು ಲೋಕೋದ್ಧಾರಕನಾಗಿರುವೆ” ಎಂದು ಸುಂದರ ಸುಳ್ಳು ಹೇಳಿ ಮುಗ್ಧರೊಂದಿಗೆ ಮಲಹೊರಿಸಿದರು. ಈ ಮೇಲ್ವರ್ಗೀಯರೆನಿಸಿಕೊಂಡ ಕೀಳು ಮನಸ್ಥಿತಿಯ ಒಡೆಯರು, ಅವರನ್ನು ಶಿಕ್ಷಣದಿಂದ ವಂಚಿತರಾಗಿಸಿ, ಮೀಸಲಾತಿಗೆ ಅಡ್ಡಗಾಲಿಟ್ಟು, ತಳದಿಂದ ತಳಕ್ಕೆ ತಳ್ಳಿ ಬಿಟ್ಟರು. ಇವೆಲ್ಲಾ ಎಷ್ಟು ವ್ಯವಸ್ಥಿತವಾಗಿ ನಡೆಯಿತೆಂದರೆ ‘ದಲಿತರು’ ‘ಹರಿಜನರು’ ಎಂದಕೂಡಲೇ ಹಾಂ.. ಇವರು ‘ಸಫಾಯಿ ಕರ್ಮಚಾರಿಗಳು’ ಇವರು ‘ಜಾಡಾಮಾಲಿಗಳು’ ಎಂಬ ಚಿತ್ರಣ ಕಣ್ಣ ಮುಂದೆ ತೇಲಿ ಬರುವಷ್ಟು. 1950ರಲ್ಲಿ ಸಂವಿಧಾನ ರಚಿಸಲ್ಪಟ್ಟಾಗ ದಲಿತರನ್ನು ಅಸ್ಪೃಶ್ಯರನ್ನಾಗಿ ಪರಿಗಣಿಸುವುದು ‘ಅಪರಾಧ’ ಎಂದು  ಬಗೆಯಲಾಯಿತು. ಅದರ ಜೊತೆಗೆ, ದಲಿತ ದೌರ್ಜನ್ಯ ತಡೆ ಕಾಯ್ದೆಯನ್ನೂ ರಚಿಸಲಾಯಿತು. ಹಾಗಿರುವಾಗ ಮತ್ತೆ ಮತ್ತೆ ದಲಿತರ ಮೇಲೆ ಇಷ್ಟು ದೌರ್ಜನ್ಯ ನಡೆಯುವುದೆಂದರೆ? ಅದೂ ಪೋಲಿಸ್ ಠಾಣೆಗಳಲ್ಲಿಯೇ…ಇಂತಹ ವ್ಯವಸ್ಥೆಯ ಮೇಲೆ ರೋಷ ಉಕ್ಕದಿದ್ದೀತೇ? ಅಪನಂಬಿಕೆ ಬಾರದಿದ್ದೀತೇ?

ಯಾದವರ ರಾಜ್ಯವಾದ ಉತ್ತರಪ್ರದೇಶ ಮತ್ತೆ ಮತ್ತೆ ಇಂತಹಾ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ. ಇಲ್ಲಿ ದಲಿತರ ಸಾವು ಸಹಜವಾಗಿ ಆಗುವುದಕ್ಕಿಂತಲೂ ಹೆಚ್ಚಾಗಿ ಮೇಲ್ಜಾತಿಯವರ ‘ಅಹಂ’ಗೆ ಬಲಿಯಾಗುತ್ತವೆ. ದುರಂತವೆಂದರೆ ವೈವಿಧ್ಯತೆಯಿಂದ ಕೂಡಿದ ಜಾತ್ಯತೀತ ಭಾರತದಲ್ಲಿ ಜಾಟರು, ಯಾದವರು, ವೈದಿಕರಲ್ಲದ ಇನ್ನುಳಿದವರೆಲ್ಲರನ್ನೂ ಜಾತಿ ಮತಗಳ ಭೇದವಿಲ್ಲದೇ ‘ಅಸ್ಪೃಶ್ಯ’ರೆಂದೇ ಪರಿಗಣಿಸಲಾಗುತ್ತದೆ. ಅವರ ಆಹಾರ, ಉಡುಗೆ, ಸಂಪ್ರದಾಯ, ಆರಾಧನೆಗಳ ಮೇಲೆ ಬಲವಂತದ ಹೇರಿಕೆ ಮಾಡಲಾಗುತ್ತದೆ. ಮತ್ತು ಇವುಗಳೆಲ್ಲವನ್ನೂ ಮೌನವಾಗಿಯೇ ಸಹಿಸಬೇಕೆಂದೂ ಆಗ್ರಹಿಸಲಾಗುತ್ತಿದೆ. ಯಾವಾಗ ಆ ಮೌನವನ್ನು ಕೆಳಗಿನವರು ವಿರೋಧಿಸಿದರೋ ಆದಿನ ಒಂದೋ ಅವರನ್ನು ಅಸಂಖ್ಯಾತ ‘ಅಖ್ಲಾಕ್’ ರಂತೆ ಥಳಿಸಿ ಚಚ್ಚಿ ಕೊಲ್ಲಲಾಗುತ್ತದೆ ಅಥವಾ ‘ಚಿಮ್ಮು’ ವಿನಂತೆ ಸುಡಲಾಗುತ್ತದೆ. ಅಥವಾ, ಹಾದಿ ಬೀದಿಗಳಲ್ಲಿ ಬೆತ್ತಲಾಗಿಸಿ ಮೆರವಣಿಗೆ ನಡೆಸಿ ತೇಜೋವಧೆ ಮಾಡಲಾಗುತ್ತದೆ. ಇದನ್ನು ಅರಾಜಕತೆಯ ಪರಮಾವಧಿ ಎನ್ನವುದೋ ಅಥವಾ ಡೆಮಾಕ್ರೆಟಿಕ್ ರಾಷ್ಟ್ರದ ಕೊಳೆತ ಮುಖವೆನ್ನುವುದೋ ಒಂದೂ ತಿಳಿಯುತ್ತಿಲ್ಲ. ಧ್ವನಿಯೆತ್ತಿದರೆ, ‘ಬಂಡಾಯ’ವೆನ್ನಲಾಗುತ್ತದೆ, ತೀವ್ರವಾದ ಎನ್ನಲಾಗುತ್ತದೆ.

ಅವರು ಚೆನ್ನಾಗಿರುವ ಉಡುಪು ಧರಿಸಬಾರದು, ಅವರು ಎಂಜಲನ್ನಲ್ಲದೇ ಉತ್ತಮವಾದದ್ದನ್ನು ತಿನ್ನಬಾರದು.. ಅವರು ಉತ್ತಮವಾದ ಹೆಸರಿನಿಂದ ಕರೆಯಲ್ಪಡಲೂ ಬಾರದು! ಎಂಬ ವೈದಿಕ ಮನಸ್ಥಿತಿಯೇ ಇಂದು ಈ ಘಟನೆಗೆ ಕಾರಣವಾಗಿದೆ. ಭಾರತದ ಅಸಲಿ ಸಂಸ್ಕೃತಿಯ ಪ್ರತೀಕವಾದ ದಲಿತರನ್ನು ಬೀದಿಯಲ್ಲಿ ಬೆತ್ತಲೆಗೊಳಿಸಿ ಹೀನಾಮಾನವಾಗಿ ಥಳಿಸಿದ ನಿನ್ನೆಯ ಬೆತ್ತಲೆ ವೀಡಿಯೋ ವೈರಲ್ ಆಗಿದ್ದವು. ಸಾಮಾಜಿಕ ತಾಣಗಳಲ್ಲಿ ಘಟನೆಯು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದವು. ಆದರೆ, ಅಪರಾಧಿ ಮಾತ್ರ ಇನ್ನೂ ಮೇಲಿನವರ ಕೃಪಾಕಟಾಕ್ಷೆಯಲ್ಲಿದ್ದಾನೆ! ಅವನ ಅಪರಾಧವನ್ನು ಸಾಬೀತು ಪಡಿಸಲು ಆ ದಲಿತ ಕುಟುಂಬ ಇನ್ನು ನೂರು ವರುಷ`ಸಬೂತು’ ಗಳಿಗಾಗಿ ಹೆಣಗಬೇಕಾದಿತೋ ಏನೋ? ಅದೇನೇ ಇದ್ದರೂ ಈ ಘಟನೆ ನ್ಯಾಯಾಂಗದ ಸುಸ್ಪಷ್ಟ ಅವಹೇಳನವಲ್ಲದೇ ಇನ್ನೇನು?

ಭೀತಿಗೊಂಡ ಮಗುವಿನ ಚೀತ್ಕಾರ, ದೌರ್ಜನ್ಯಕ್ಕೊಳಗಾಗುತ್ತಿದ್ದ ದಂಪತಿಯ ಅಸಹಾಯಕತೆ, ಆ ತಾಯಿ ಮಗುವನ್ನು ಅಡ್ಡಡ್ಡಲಾಗಿ ಹಿಡಿದು ಮಾನ ಮುಚ್ಚಲು ಹೆಣಗುತ್ತಿದ್ದ ಸ್ಥಿತಿ ಮನಕಲಕುವಂತಿತ್ತು. ಕಾನೂನು ರಕ್ಷಕನೆನಿಸಿಕೊಂಡವನ ‘ಡಿಜಿಟಲ್’ ಲಾಠಿಯಲ್ಲಿ ನ್ಯಾಯ ಕೊನೆಯುಸಿರೆಳೆಯುತ್ತಿದ್ದುದನ್ನು ಕಂಡು ನಾವೆಂತಯ ಹೇಯ ಸ್ಥಿತಿಗೆ ತಲುಪಿ ಬಿಟ್ಟಿದ್ದೇವಲ್ಲಾ ಎಂದು ಅನಿಸಿತ್ತು. ಆ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಕೇವಲ ದಲಿತ ಕುಟುಂಬವನ್ನುಮಾತ್ರ ಬೆತ್ತಲಾಗಿಸಿರಲಿಲ್ಲ. ಅಲ್ಲಿ ದೇಶದ ಸಂವಿಧಾನ, ದೇಶದ ಕಾನೂನನ್ನು ಬೆತ್ತಲಾಗಿಸಲಾಗಿತ್ತು. ಒಟ್ಟಾರೆ ನಮ್ಮ (ಅ)ವ್ಯವಸ್ಥೆಯ ಆತ್ಮ ಸಾಕ್ಷಿಯನ್ನೇ ಬೆತ್ತಲಾಗಿಸಲಾಯಿತು…ಛೇ

nksw

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ದೂರು ದಾಖಲಿಸಲು ಬಂದ ದಲಿತಕುಟುಂಬವನ್ನು ಥಳಿಸಿ ಬೀದಿಯಲ್ಲಿ ಬೆತ್ತಲೆಗೊಳಿಸಿದ ಯು.ಪಿ ಪೋಲಿಸ್

ಮುಂದಿನ ಸುದ್ದಿ »

ಚೆನ್ನೈ ಮೂಲದ ಮನೆಕೆಲಸದಾಕೆಯ ಕೈ ಕಡಿದ ಸೌದಿ ಮಹಿಳೆಯ ಬಂಧನ

ಸಿನೆಮಾ

 • 3

  ನನಗೂ ತುಳು ಸಿನಿಮಾದಲ್ಲಿ ನಟಿಸುವ ಆಸೆ: ಶಿವರಾಜ್ ಕುಮಾರ್

  January 19, 2017

  – ಶಫೀ ಉಚ್ಚಿಲ ನ್ಯೂಸ್ ಕನ್ನಡ ವರದಿ (19-1-17): ಕಾಪು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ಟಗರು ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ‘ಟಗರು’ ತಂಡ ಎರಡನೇ ಹಂತವನ್ನು ಕಾಪು ಸಮೀಪದ ಉಚ್ಚಿಲದಲ್ಲಿ ಚಿತ್ರೀಕರಿಸುತ್ತಿದ್ದು, ...

  Read More
 • Chennai-Express-First-Look-tbwm

  ಚೆನ್ನೈ ಎಕ್ಸ್ ಪ್ರೆಸ್ ನಿರ್ಮಾಪಕನ ವಿರುದ್ಧ ಅತ್ಯಾಚಾರ ಆರೋಪ

  January 18, 2017

  ನ್ಯೂಸ್ ಕನ್ನಡ(18-1-2017): ಸೂಪರ್ ಹಿಟ್ ಬಾಲಿವುಡ್ ಚಲನಚಿತ್ರ “ಚೆನ್ನೈ ಎಕ್ಸ್ ಪ್ರೆಸ್”ನ ನಿರ್ಮಾಪಕ ಕರೀಂ ಮೊರಾನಿ ವಿರುದ್ಧ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 25 ವರ್ಷದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರಗೈದಿರುವುದಾಗಿ ದೂರು ದಾಖಲಾಗಿದ್ದು, ...

  Read More
 • ra-one

  “ರಾ ಒನ್” ಚಿತ್ರದ ರಾಷ್ಟ್ರಪ್ರಶಸ್ತಿ ವಿಜೇತ ಅನಿಮೇಟರ್ ನಿಧನ

  January 18, 2017

  ನ್ಯೂಸ್ ಕನ್ನಡ(18-1-2017): ರಾ ಒನ್ ಚಿತ್ರದ ಅನಿಮೇಷನ್ ಗಾಗಿ ರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದ ಚಾರು ಖಂದಾಲ್ ನಿಧನರಾಗಿದ್ದಾರೆ. 4 ವರ್ಷಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚಾರು ದೀರ್ಘಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಶಾರುಕ್ ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×