Wednesday October 4 2017

Follow on us:

Contact Us

ಹಿಂದೂ ವ್ಯಕ್ತಿಯನ್ನು ಮುಸ್ಲಿಮ್ ವಿಧಿವಿಧಾನದಂತೆ ಅಂತ್ಯಸಂಸ್ಕಾರ

ನ್ಯೂಸ್ ಕನ್ನಡ ವರದಿ-(04.10.17): ಹುಟ್ಟಿನಲ್ಲಿ ಹಿಂದೂ ಧರ್ಮವನ್ನೇ ಪಾಲಿಸಿಕೊಂಡು, ಹಿಂದೂವಾಗಿಯೇ ಬಾಳಿ ಬದುಕಿಮದಂತಹ ವ್ಯಕ್ತಿಯೊಬ್ಬರು ಮೃತಪಟ್ಟಾಗ ಮುಸ್ಲಿಮ್ ವಿಧಿವಿಧಾನಗಳನ್ನು ಅನುಸರಿಸಲಾಯಿತು. ವ್ಯಕ್ತಿಯ ಮೃತದೇಹವನ್ನು ಸುಡದೇ, ಮುಸ್ಲಿಮರಂತೆ ದಫನ ಮಾಡಲಾಯಿತು.

82 ವರ್ಷದ ಮದನ್ ಮೋಹನ್ ಯಾದವ್ ಎಂಬ ವ್ಯಕ್ತಿಯು ಝಾನ್ಸಿಯಲ್ಲಿ ಸಮೋಸ ಮಾರುತ್ತಿದ್ದವರು. ಇವರು ಮಾಡುತ್ತಿದ್ದ ಸಮೋಸವು ಊರಿನೆಲ್ಲೆಡೆ ಜನಪ್ರಿಯತೆ ಪಡೆದಿತ್ತು. ಈ ವ್ಯಕ್ತಿಯು ಹಿಂದೂ ಮತ್ತು ಮುಸ್ಲಿಮರ ನಡುವೆ ಭೇಧ ಭಾವಗಳನ್ನು ತೋರುತ್ತಿರಲಿಲ್ಲ. ಹಿಂದೂಗಳಿಗೂ ಮುಸ್ಲಿಮರಿಗೂ ಸಮಾನವಾಗಿ ಸಹಾಯ ಮಾಡುತ್ತಿದ್ದು, ಮಸೀದಿಗಳಿಗೆ ಹಲವು ದೇಣಿಗೆಗಳನ್ನೂ ನೀಡಿದ್ದಾರೆ. ಮದನ್ ಮೋಹನ್ ರಮಝಾನ್ ನ ಇಫ್ತಾರ್ ನ ಸಂದರ್ಭದಲ್ಲಿ ಸಮೋಸವನ್ನೂ ಮಸೀದಿಯ ಪಕ್ಕದಲ್ಲಿ ಮಾರಾಟ ಮಾಡುತ್ತಿದ್ದರು.

ಇವರು ತಮ್ಮ ಮಕ್ಕಳು ಮತ್ತು ಕುಟುಂಬಸ್ಥರೊಂದಿಗೆ, ತನ್ನ ಅಂತಿಮ ಸಂಸ್ಕಾರವನ್ನು ಮುಸ್ಲಿಮರಂತೆ ಮುಸ್ಲಿಮರ ವಿಧಿ ವಿಧಾನಗಳನ್ನು ಪಾಲಿಸಿ, ಸಡದೇ ದಫನ ಮಾಡಬೇಕೆಂದು ಕೋರಿದ್ದರು. ಅವರ ಈ ಕೊನೆಯಾಸೆಯಂತೆಯೇ ದಫನ ಮಾಡಲಾಯಿತು ಎಂದು ಅವರ ಕುಟುಂಬಸ್ಥರು ಹೇಳಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ರಿಲಯನ್ಸ್ ಜಿಯೋ: ಇನ್ನುಮುಂದೆ ಅನ್ ಲಿಮಿಟೆಡ್ ವಾಯ್ಸ್ ಕಾಲ್ ಇಲ್ಲ!

ಮುಂದಿನ ಸುದ್ದಿ »

ಬಿಜೆಪಿ ಕೌನ್ಸಿಲರ್ ಅನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿದ ಗ್ರಾಮಸ್ಥರು!

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×