Tuesday February 13 2018

Follow on us:

Contact Us

ಫೊಖ್ರಾನ್ ನಲ್ಲಿ ಬಾಂಬ್ ಸ್ಫೋಟ: ವೀರಯೋಧ ಕರ್ನಾಟಕದ ಜಾವೇದ್ ಹುತಾತ್ಮ!

ನ್ಯೂಸ್ ಕನ್ನಡ ವರದಿ-(13.2.18): ಅತ್ತ ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಯು ವಿಪರೀತವಾಗಿ ಹಲವಾರು ಯೋರು ಹುತಾತ್ಮರಾಗಿದ್ದಾರೆ. ಇನ್ನೊಂದೆಡೆ ಪಾಕಿಸ್ತಾನವು ಪದೇಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ. ಇದೀಗ ರಾಜಸ್ತಾನದ ಪೊಖ್ರಾನ್ ಎಂಬಲ್ಲಿ ಬಾಂಬ್ ಸ್ಫೋಟವಾಗಿ ಭಾರತೀಯ ಸೇನೆಯ ಯೋಧ ಜಾವೀದ್ ಹುತಾತ್ಮರಾಗಿದ್ದಾರೆ ಎಂದು ತಿಳಿದು ಬಂದಿದೆ.

ಪೋಖ್ರಾನ್ ನ ಸೇನಾ ಕ್ಯಾಂಪ್ ನಲ್ಲಿ ಬಾಂಬ್ ಒಂದನ್ನು ನಿಷ್ಕ್ರಿಯಗೊಳಿಸುವ ಸಂದರ್ಭ ಬಾಂಬ್ ಸ್ಫೋಟಗೊಂಡು ಜಾವಿದ್ ಹುತಾತ್ಮರಾಗಿದ್ದಾರೆ. ಅಲ್ಲದೇ ಸುಮಾರು ನಾಲ್ಕು ಮಂದಿಗೆ ಗಾಯಗಳಾಗಿವೆ. ಜಾವಿದ್ ಕರ್ನಾಟಕದ ದಾವಣಗೆರೆಯ ಹರಿಹರದ ಪಿ.ಬಿ ರಸ್ತೆಯ ನಿವಾಸಿಯಾಗಿದ್ದು, ಕಳೆದ ಸುಮಾರು 14 ವರ್ಷಗಳಿಂದ ಭಾರತೀಯ ಸಏನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಜಾವಿದ್ ಪತ್ನಿ ಮತ್ತು ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಹೊಸದಾಗಿ ಬಂದ ವಾಟ್ಸಪ್ ಪೇಮೆಂಟ್: ಇದನ್ನು ಬಳಸುವ ಸುಲಭ ವಿಧಾನ ಹೇಗೆ?

ಮುಂದಿನ ಸುದ್ದಿ »

ಖಾಕಿ ಚಡ್ಡಿ ಮತ್ತು ಬಿದಿರಿನ ಕೋಲು ಹಿಡಿದ ಗುಂಪನ್ನು ಸೇನೆಗೆ ಹೋಲಿಸಬೇಡಿ: ಶಶಿ ತರೂರ್

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×