Wednesday October 19 2016

Follow on us:

Contact Us
_MG_9948

ಶುಭಾರಂಭದಿಂದ ‘ಹುಷಾರ್ ಸರ್! ಹುಷಾರ್ ಮೇಡಂ

ಶುಭಾರಂಭ ರಂಗತಂಡವು ಬೆಂಗಳೂರು ಮೂಲದ ರಂಗತಂಡವಾಗಿದೆ. ಮಾಧ್ಯಮ ಕ್ಷೇತ್ರ, ಸಾರ್ವಜನಿಕ ಸಂಪರ್ಕ, ಆಡಳಿತ ನಿರ್ವಹಣೆ ಹೀಗೆ ಹಲವು ಕ್ಷೇತ್ರಗಳಲ್ಲಿ 15ಕ್ಕೂ ಹೆಚ್ಚು ವರ್ಷಗಳ ಕಾಲ ಕಾರ್ಯನಿರ್ವಹಿಸಿರುವ ಸುಧೀಂದ್ರ ಎಸ್. ದೇಶಪಾಂಡೆಯವರ ಕನಸಿನ ಕೂಸು ಶುಭಾರಂಭ ರಂಗತಂಡ.

ಕೆಲಸದ ಜೊತೆಗೆ ಸಾಮಾಜಿಕ ಸಮಸ್ಯೆಗಳ ಬಗ್ಗೆ ಜನಜಾಗೃತಿ ಕಾರ್ಯವನ್ನು ನಾಟಕಗಳ ಮುಖಾಂತರ ಮಾಡುತ್ತಾ ಬಂದಿರುವ ಸುಧೀಂದ್ರ ಎಸ್. ದೇಶಪಾಂಡೆಯವರ ಮುಂದಾಳುತ್ವದಲ್ಲಿ ಶುಭಾರಂಭ ರಂಗತಂಡವು

ಇದೇ ನವೆಂಬರ್ 12, 2016 ಶನಿವಾರ ಸಂಜೆ 6ಕ್ಕೆ ಶುಭಾರಂಭ ರಂಗತಂಡ “ಹುಷಾರ್ ಸರ್! ಹುಷಾರ್ ಮೇಡಂ” ಎನ್ನುವ ಸಾಮಾಜಿಕ ಜನಜಾಗೃತಿಯ ನಾಟಕವನ್ನು ಕುವೆಂಪು ರಂಗಮಂದಿರ, ಶಿವಮೊಗ್ಗ ಇಲ್ಲಿ ಪ್ರದರ್ಶಿಸಲಿದೆ. ಸಾಮಾಜಿಕ ಸಮಸ್ಯೆಗಳ ಬಗ್ಗೆ ತಿಳಿಹಾಸ್ಯದ ಮುಖಾಂತರ ಜನಜಾಗೃತಿ ಮೂಡಿಸುವ ಕಥಾವಸ್ತು ಹೊಂದಿರುವ ನಾಟಕವಾಗಿದೆ.

ಶುಭಾರಂಗ ತಂಡವನ್ನು ಸ್ಥಾಪಿಸಲು ಪ್ರಮುಖವಾಗಿ ಮೂರು ಕಾರಣಗಳಿವೆ ಎಂದು ಹೇಳುತ್ತಾರೆ. ಸಂಸ್ಥಾಪಕರಾದ ಸುಧೀಂದ್ರ ಎಸ್. ದೇಶಪಾಂಡೆ. ರಂಗನಟನೆಯನ್ನು ಕಲಿತು ರಂಗಭೂಮಿಗೆ ಏನಾದರೂ ಕೊಡುಗೆಯನ್ನು ನೀಡಬೇಕು ಮತ್ತು ರಂಗಭೂಮಿಯಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಹಂಬಲ ಹೊಂದಿದವರಿಗೆ ಸೂಕ್ತ ವೇದಿಕೆ ನೀಡುವುದು ಶುಭಾರಂಭ ರಂಗ ತಂಡದ ಉದ್ದೇಶ. ಈ ಕಾರಣಕ್ಕಾಗಿಯೇ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಉಚಿತ ರಂಗನಟನೆಯ ತರಬೇತಿ ನೀಡಲಾಗುತ್ತದೆ. ನಂತರ ಅವರಿಗೆ ಶುಭಾರಂಭ ರಂಗತಂಡವು ಆಯೋಜಿಸುವ ನಾಟಕಗಳಲ್ಲಿ ಅಭಿನಯಿಸಲು ಅವಕಾಶ ನೀಡಲಾಗುತ್ತದೆ. ಶುಭಾರಂಭ ರಂಗತಂಡವು ಕರ್ನಾಟಕ ರಾಜ್ಯದೆಲ್ಲೆಡೆ ಸಂಚರಿಸಿ ಸಾಮಾಜಿಕ ಜನಜಾಗೃತಿ ನಾಟಕ ಪ್ರದರ್ಶನ ನೀಡುವ ಯೋಜನೆ ಹೊಂದಿದೆ ಅಲ್ಲದೇ ಭಾರತದಾದ್ಯಂತ ಸಂಚರಿಸುವ ಯೋಜನೆಯನ್ನೂ ಹೊಂದಿದೆ. ಹೀಗೆ ಶುಭಾರಂಭ ರಂಗತಂಡದ ಕಲಾಪ್ರತಿಭೆಗಳಿಗೆ ಭಾರತ ರಾಜ್ಯಾದ್ಯಂತ ಕಲಾಪ್ರತಿಭಾ ಪ್ರದರ್ಶನಕ್ಕೆ ಅದ್ಭುತ ವೇದಿಕೆಯನ್ನು ಒದಗಿಸುತ್ತದೆ. ಇದು ಮೊದಲನೆ ಕಾರಣವಾಗಿದೆ.

ಇನ್ನು ಸಮಾಜದಲ್ಲಿರುವ ಸಮಸ್ಯೆಗಳ ಕುರಿತು ಜನಜಾಗೃತಿಯನ್ನು ಮೂಡಿಸುವುದು ಶುಭಾರಂಭ ರಂಗತಂಡದ ಉದ್ದೇಶವಾಗಿದೆ. ಉದಾಹರಣೆಗೆ ವರದಕ್ಷಿಣೆ ಪಿಡುಗು, ಬಾಲಕಾರ್ಮಿಕ ಸಮಸ್ಯೆ, ಚಿಟ್ ಫಂಡ್ ಕಂಪನಿಗಳ ಮೋಸ, ಮನಿ ಡಬಲಿಂಗ್ ಸ್ಕೀಂ ಕಂಪನಿಗಳ ಮೋಸ, ಕನ್ನಡ ಭಾಷಾಭಿಮಾನ ಬೆಳೆಸಿಕೊಳ್ಳಬೇಕು, ಆಹಾರವನ್ನು ಹಾಳು ಮಾಡುವುದರ ಕುರಿತು, ನೇತ್ರದಾನದ ಮಹತ್ವ ಹೀಗೆ ಹತ್ತು ಹಲವಾರು ಸಮಸ್ಯೆಗಳ ಬಗ್ಗೆ ತಿಳಿಹಾಸ್ಯದ ಮುಖಾಂತರ ಜನಜಾಗೃತಿ ಮೂಡಿಸುವ ಕಾರ್ಯವನ್ನು ನಾಟಕಗಳ ಮುಖಾಂತರ ಮಾಡುತ್ತಿದೆ. ಇದು ಎರಡನೇಯ ಉದ್ದೇಶ.

ನಾಟಕಗಳ ಆಯೋಜನೆಯಿಂದ ಟಿಕೇಟುಗಳ ಮಾರಾಟದಿಂದ ಸಂಗ್ರಹವಾದ ಹಣದಲ್ಲಿ ಇಂತಿಷ್ಟು ಮೊತ್ತವನ್ನು ವೃದ್ಧಾಶ್ರಮ, ಅನಾಥಾಲಯ, ಅಂಧರ ಶಾಲೆ ಹೀಗೆ ಸಾಮಾಜಿಕ ಕಳಕಳಿಯಿಂದ ಚಾರಿಟಿಗಳಿಗೆ ಕೊಡಮಾಡುವ ಮಹತ್ತರ ಕಾರ್ಯವನ್ನು ಮಾಡುತ್ತಿದೆ. ಇದು ಮೂರನೇಯ ಕಾರಣವಾಗಿದೆ.

ಸಾಮಾಜಿಕ ಕಳಕಳಿಯಿಂದ ನಾಟಕಗಳ ಮುಖಾಂತರ ಜನಜಾಗೃತಿ ಮೂಡಿಸುವ ಮತ್ತು ಪ್ರತಿಭೆಗಳಿಗೆ ಭಾರತದಾದ್ಯಂತ ನಟನಾ ಪ್ರದರ್ಶನಕ್ಕೆ ವೇದಿಕೆಯನ್ನೊದಗಿಸುವುದು ಶುಭಾರಂಭ ಮಾಡುತ್ತಿದೆ.

ಈ ನಾಟಕದಲ್ಲಿ ಸುಧೀಂದ್ರ ದೇಶಪಾಂಡೆ, ಹರೀಶ್, ಅರ್ಪಿತಾ, ಭಾನುಪ್ರಕಾಶ್, ವಿನಯ್‍ರಾಜ್, ನವೀನ್ ಗೌಡ, ಅಖಿಲೇಶ್, ಪ್ರದೀಪ್, ಶ್ರೀಹರಿ, ಸ್ವಪ್ನಾ, ಶೃತಿ, ಮೇಘನಾ, ಲೋಕೇಶ್, ಸಂಜನಾ ಬುರ್ಲಿ ಮುಂತಾದ ಕಲಾವಿದರು ಅಭಿನಯಿಸಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಈ ವಿಳಾಸವನ್ನು ಸಂಪರ್ಕಿಸ ಬಹುದು

ಸುಧೀಂದ್ರ  ದೇಶಪಾಂಡೆ

ಸಂಸ್ಥಾಪಕರು – ಶುಭಾರಂಭ ರಂಗತಂಡ

ಬನಶಂಕರಿ 3ನೇ ಹಂತ, ಬೆಂಗಳೂರು -560085

ದೂರವಾಣಿ :  09620442066

nkgkp

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

4000ಕ್ಕೂ ಅಧಿಕ ಮಂದಿಯಿಂದ ಕೈ ತೊಳೆದು ವಿಶ್ವದಾಖಲೆ

ಮುಂದಿನ ಸುದ್ದಿ »

ಹಲವಾರು ಮಂದಿಯ ಜೀವ ರಕ್ಷಿಸಿದ Mr. Bean ಬಗ್ಗೆ ನಿಮಗೇನು ಗೊತ್ತು?

ಸಿನೆಮಾ

 • 3

  ನನಗೂ ತುಳು ಸಿನಿಮಾದಲ್ಲಿ ನಟಿಸುವ ಆಸೆ: ಶಿವರಾಜ್ ಕುಮಾರ್

  January 19, 2017

  – ಶಫೀ ಉಚ್ಚಿಲ ನ್ಯೂಸ್ ಕನ್ನಡ ವರದಿ (19-1-17): ಕಾಪು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ಟಗರು ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ‘ಟಗರು’ ತಂಡ ಎರಡನೇ ಹಂತವನ್ನು ಕಾಪು ಸಮೀಪದ ಉಚ್ಚಿಲದಲ್ಲಿ ಚಿತ್ರೀಕರಿಸುತ್ತಿದ್ದು, ...

  Read More
 • Chennai-Express-First-Look-tbwm

  ಚೆನ್ನೈ ಎಕ್ಸ್ ಪ್ರೆಸ್ ನಿರ್ಮಾಪಕನ ವಿರುದ್ಧ ಅತ್ಯಾಚಾರ ಆರೋಪ

  January 18, 2017

  ನ್ಯೂಸ್ ಕನ್ನಡ(18-1-2017): ಸೂಪರ್ ಹಿಟ್ ಬಾಲಿವುಡ್ ಚಲನಚಿತ್ರ “ಚೆನ್ನೈ ಎಕ್ಸ್ ಪ್ರೆಸ್”ನ ನಿರ್ಮಾಪಕ ಕರೀಂ ಮೊರಾನಿ ವಿರುದ್ಧ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 25 ವರ್ಷದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರಗೈದಿರುವುದಾಗಿ ದೂರು ದಾಖಲಾಗಿದ್ದು, ...

  Read More
 • ra-one

  “ರಾ ಒನ್” ಚಿತ್ರದ ರಾಷ್ಟ್ರಪ್ರಶಸ್ತಿ ವಿಜೇತ ಅನಿಮೇಟರ್ ನಿಧನ

  January 18, 2017

  ನ್ಯೂಸ್ ಕನ್ನಡ(18-1-2017): ರಾ ಒನ್ ಚಿತ್ರದ ಅನಿಮೇಷನ್ ಗಾಗಿ ರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದ ಚಾರು ಖಂದಾಲ್ ನಿಧನರಾಗಿದ್ದಾರೆ. 4 ವರ್ಷಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚಾರು ದೀರ್ಘಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಶಾರುಕ್ ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×