Sunday November 12 2017

Follow on us:

Contact Us

‘ಇಂಟರ್ನ್ಯಾಷನಲ್ ಪೀಸ್ ಅವಾರ್ಡ್’ ಕಾರ್ಯಕ್ರಮದ ಪೂರ್ವತಯಾರಿ ಆರಂಭಿಸಿದ HMC UNITED ತಂಡ

ನ್ಯೂಸ್ ಕನ್ನಡ ವರದಿ: ಯುವ ಉದ್ಯಮಿ, ಕನ್ನಡಿಗ ಶಕೀಲ್ ಹಸನ್ ಹೊನ್ನಾಳ ಇವರ ಕನಸಿನ ಕೂಸಾದ ‘ಇಂಟರ್ನ್ಯಾಷನಲ್ ಪೀಸ್ ಅವಾರ್ಡ್’ ಕಾರ್ಯಕ್ರಮದ ಪೂರ್ವತಯಾರಿಗೆ ಇದೀಗ ಚಾಲನೆ ಸಿಕ್ಕಿದೆ. ನಿಸ್ವಾರ್ಥ ಸಾಮಾಜಿಕ ಸೇವೆ ಮತ್ತು ಜಾಗತಿಕ ಶಾಂತಿಗಾಗಿ ಕೊಡುಗೆ ನೀಡಿದ ಏಷ್ಯಾದ 14 ದೇಶದಿಂದ ಒಬ್ಬೊಬ್ಬ ಅರ್ಹ, ಸೂಕ್ತ ವ್ಯಕ್ತಿಗಳನ್ನು ಪಾರದರ್ಶಕವಾಗಿ ಆಯ್ಕೆಮಾಡಿ ಅವರಿಗೆ ಅಂತರಾಷ್ಟ್ರೀಯ ಶಾಂತಿ ಪುರಸ್ಕಾರ ನೀಡಿ ಗೌರವಿಸಿ, ಪ್ರೋತ್ಸಾಹಿಸುವ ಐತಿಹಾಸಿಕ ಕಾರ್ಯಕ್ರಮ ಈ ವರ್ಷದ ಕೊನೆಯಲ್ಲಿ ದುಬೈಯಲ್ಲಿ ನಡೆಸುವ ಸಲುವಾಗಿ, ಮಹತ್ವಾಕಾಂಕ್ಷಿ ಕಾರ್ಯಕ್ರಮದ ರೂಪುರೇಷೆ ಕುರಿತು ಚರ್ಚೆ HMC ಯುನೈಟೆಡ್ ತಂಡದ ಸದಸ್ಯರು ಫಾರ್ಚೂನ್ ಗ್ರ್ಯಾಂಡ್ ಹೋಟೆಲ್ ನ ಕೈರಾಲಿ ಸಭಾಭವನದಲ್ಲಿ ಶುಕ್ರವಾರ ನಡೆಸಿದರು.

ಈ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ HMC ಯುನೈಟೆಡ್ ನ ಸ್ಥಾಪಕ ಶಕೀಲ್ ಹಸನ್, ‘HMC ಯುನೈಟೆಡ್ ಎಂದರೆ ಹಿಂದೂ ಮುಸ್ಲಿಮ್ ಕ್ರಿಶ್ಚಿಯನ್ ಯುನೈಟೆಡ್, ಕೋಮು ಸಾಮರಸ್ಯ ಕದಡಲು ಹಾತೊರೆಯುತ್ತಿರುವ ಸಮಾಜಘಾತುಕ ಶಕ್ತಿಗಳ ನಡುವೆ ಕೋಮು ಸೌಹಾರ್ದತೆ, ಜಾತ್ಯಾತೀತ ಸೌಹಾರ್ದತೆಯ ಮತ್ತು ಶಾಂತಿಯುತ ಸಮಾಜ ನಿರ್ಮಾಣದ ಉದ್ದೇಶದೊಂದಿಗೆ 2011ರಲ್ಲಿ ಈ ಸಂಘಟನೆಯನ್ನು ಸಣ್ಣ ರೂಪದಲ್ಲಿ ತನ್ನ ಹುಟ್ಟೂರಿನಲ್ಲಿ ಆರಂಭಿಸಿ ಇದೀಗ ನನ್ನ ಸ್ನೇಹಿತರ, ಹಿರಿಯರ, ಹಿತೈಷಿಗಳ ಆಶಿರ್ವಾದ, ಸಹಕಾರ, ಪ್ರೋತ್ಸಾಹದಿಂದ 14 ದೇಶದ ಸಾವಿರಾರು ಶಾಂತಿಪ್ರಿಯ ಜನರನ್ನು ತಲುಪಿದೆ ಎನ್ನಲು ನನಗೆ ಹೆಮ್ಮೆಯಾಗುತ್ತಿದೆ’ ಎಂದರು.

ಅಂತರಾಷ್ಟ್ರೀಯ ಶಾಂತಿ ಪ್ರಶಸ್ತಿ ಕಾರ್ಯಕ್ರಮದ ರೂಪುರೇಷೆಯ ಕುರಿತು ಬಂದ ಸದಸ್ಯರೊಂದಿಗೆ ಚರ್ಚಿಸಿ ಸದಸ್ಯರಿಂದ ಸಲಹೆ ಸೂಚನೆಗಳನ್ನು ಪಡೆದರು. ಪೂರ್ವ ನಿಗದಿತ ಕಾರ್ಯಕ್ರಮದಿಂದಾಗಿ ತಂಡದ ಹಲವು ಹಿರಿಯ ಸದಸ್ಯರು, ಪದಾಧಿಕಾರಿಗಳಿಗೆ ಭಾಗವಹಿಸಲು ಅನಾನುಕೂಲವಾದ ಕಾರಣ ಶೀಘ್ರವೇ ಮತ್ತೊಂದು ಪೂರ್ವಭಾವಿ ಸಭೆ ನಡೆಸಿ ಇನ್ನಷ್ಟು ಮಾಹಿತಿ ನೀಡಲಾಗುವುದು’ ಎಂದರು.

ಚರ್ಚಾ ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಸದಸ್ಯರೂ ಶಕೀಲ್ ರವರ ಈ ಐತಿಹಾಸಿಕ ಕಾರ್ಯಕ್ರಮದ ಬಗ್ಗೆ ಪ್ರಶಂಸೆಯ ಸುರಿಮಳೆಗೈದು, ಶುಭ ಕೋರಿ ತಮ್ಮ ಸಂಪೂರ್ಣ ಸಹಕಾರ ಇದೆ ಎಂದು ಹುರುದುಂಬಿಸಿದರು. ಹಲವು ಸಂಘಟನೆ ಸಂಸ್ಥೆಯ ಪ್ರತಿನಿಧಿಗಳೂ ಕಾರ್ಯಕ್ರಮಕ್ಕೆ ತಮ್ಮ ತನು ಮನ ಧನದ ಬೆಂಬಲ ವ್ಯಕ್ತಪಡಿಸಿದರು. HMC ಯುನೈಟೆಡ್ ನ ಉಪಾಧ್ಯಕ್ಷ ಕಲೀಲ್ ಸಭಾ ಕಾರ್ಯಕ್ರಮ ಅತ್ಯುತ್ತಮ ರೀತಿಯಲ್ಲಿ ನಿರೂಪಿಸಿದರು.

 

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಭ್ರಷ್ಟ ಮುಖ್ಯಮಂತ್ರಿ ,ಅತ್ಯಾಚಾರಿ ಉಸ್ತುವಾರಿ ಜತೆಯಾಗಿ ರಾಜ್ಯವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ; ಯಡಿಯೂರಪ್ಪ

ಮುಂದಿನ ಸುದ್ದಿ »

ಗೌರಿಯನ್ನು ಕೊಂದಿದ್ದು ಬಲಪಂಥೀಯರು ಎನ್ನುವ ಪ್ರಕಾಶ್ ರೈಯನ್ನು ಹೊಡೆದು ಬಾಯಿಬಿಡಿಸಬೇಕು: ಚಕ್ರವರ್ತಿ ಸೂಲಿಬೆಲೆ

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×