Friday October 30 2015

Follow on us:

Contact Us

ನಿರಾಶ್ರಿತ ಮಕ್ಕಳಲ್ಲಿ ಅಕ್ಷರ ಪ್ರೀತಿ ಹಂಚಿದ…ಅಖೀಲಾ ಆಸಿಫೀಗೊಂದು ಸಲಾಂ

-ರುಖಿಯಾ. ಎ.ರಝಾಕ್

ಈ ವರ್ಷ ವಿಶ್ವ ಕಂಡ ಅತ್ಯಂತ ದೊಡ್ಡ ದುರಂತಗಳೆಂದರೆ, ಉತ್ತರ ಏಷ್ಯಾ, ನೇಪಾಳದ ಭೂಕಂಪ, ಮಕ್ಕಾ ದುರಂತ, ಮತ್ತು ವಿಶ್ವಾದ್ಯಂತ ಕಂಬನಿ ತರಿಸಿದ ಮೆಡಿಟರೇನಿಯನ್ ತಟದಲ್ಲಿ ಅಯ್ಲಾನ್ ಕುರ್ದಿ ಮತ್ತು ಕುಟುಂಬದ ದುರಂತ ಮರಣ, ಮತ್ತು ಸಿರಿಯನ್, ಮತ್ತಿತರ ಮಧ್ಯಪ್ರಾಚ್ಯ ದೇಶಗಳ ನಾಗರಿಕರ, ರೋಹಿಂಗ್ಯನ್ನರ ಹೃದಯವಿದ್ರಾವಕ ಸಮುದ್ರ ವಲಸೆಗಳು.. ಇತ್ಯಾದಿ ಇತ್ಯಾದಿ, ಇತ್ಯಾದಿ…

ಈ ಎಲ್ಲಾ ಸಂದರ್ಭಗಳಲ್ಲಿ ವಿಶ್ವಕ್ಕೆ ವಿಶ್ವವೇ ಕಂಬನಿ ಗರೆದದ್ದೂ, ಖಂಡಿಸಿದ್ದೂ, ಅರಾಜಕತೆಯ ವಿರುದ್ಧ ಆಕ್ರೋಷ ವ್ಯಕ್ತ ಪಡಿಸಿದ್ದೂ ಆಯಿತು. ದಿನಕಳೆದಂತೆ ಪತ್ರಿಕೆಯ ಮುಖಪುಟಗಳಲ್ಲಿದ್ದ ವಾರ್ತೆಗಳು ದ್ವಿತೀಯ ಪುಟಕ್ಕೂ ಅಲ್ಲಿಂದ ಹಿಂದೆ ಹಿಂದೆ ಸರಿದು, ಕೊನೆಯ ಪುಟದಿಂದಲೂ ಮಾಯವಾಯಿತು.

ತಮ್ಮ ನಾಡಿನಲ್ಲಿ  ಅರಾಜಕತೆ ಮಿತಿ ಮೀರಿದಾಗ, ಜೀವಭಯದಿಂದ ದೇಶತೊರೆದ ನಿರಾಶ್ರಿತರನ್ನು ತಮ್ಮ ದೇಶದ ಗಡಿಯೊಳಗೆ ಕಾಲಿಡಲು ಬಿಡದೇ ಅಟ್ಟಿದ ದೇಶಗಳೂ ಇವೆ ಹಾರ್ಧಿಕವಾಗಿ ಸ್ವಾಗತಿಸಿ ಮಾನವೀಯತೆ ಮೆರೆದ ದೇಶಗಳೂ ಇವೆ. ಇಷ್ಟೆಲ್ಲಾ ಸಂಭವಿಸಿದ ಬಳಿಕ ಹೀಗೆ ದೇಶ ತೊರೆದ ನಿರಾಶ್ರಿತರ ಪಾಡೇನಾಯಿತು ಎಂದು ಕೇಳುವವರೇ ಇಲ್ಲದ ಸುದ್ಧಿಯೂ ಇರುವುದಿಲ್ಲ. ವಿಶ್ವ ಸಂಸ್ಥೆ ಮತ್ತು ಇತರ ಎನ್.ಜಿ.ಓ ಗಳು ದಾನಿಗಳಿಂದ ಪಡೆದ ಸಹಾಯ ಧನಗಳಿಂದ ವಸತಿಗಳ ಡೇರೆಗಳನ್ನು ನಿರ್ಮಿಸಿ ಕೊಡುತ್ತವೆ. ಆಹಾರದ ಪೊಟ್ಟಣಗಳನ್ನು ನೀಡುತ್ತವೆ. ಆದರೆ ನೈಜ ಸಮಸ್ಯೆ ಆರಂಭವಾಗುವುದು ಇಲ್ಲಿಂದ..

Aqeela-Asifi-2ಇಲ್ಲಿ, ಈ ಡೇರೆಗಳಲ್ಲಿ ವಾಸಿಸುವ ಅಸಂಖ್ಯಾತ ನಿರ್ವಸಿತ ನಿರಾಶ್ರಿತರಿಗೆ ಮೂಲಭೂತ ಸೌಕರ್ಯಗಳೇ ಇಲ್ಲದಾಗಿರುತ್ತವೆ. ಕುಡಿಯುವ ನೀರು, ಆಹಾರ, ವಸ್ತ್ರ, ವಸತಿ, ಮತ್ತು ಅತ್ಯಂತ ಮುಖ್ಯವಾಗಿ ಸುರಕ್ಷೆ ಮತ್ತು ಶಿಕ್ಷಣದಿಂದ ಈ ನಿರಾಶ್ರಿತರು ವಂಚಿತರಾಗಿ ಬಿಡುವುದು. ಇದು ಘೋರ ದುರಂತವೆನ್ನಬಹುದು. ಅವರು ದೇಶ ತೊರೆದದ್ದೂ, ದೇಶದಿಂದ ಹೊರಗಟ್ಟಲ್ಪಟ್ಟು ನಿರಾಶ್ರಿತರಾಗಿ ಕಳೆದ ದಿನಗಳಿಗಿಂತ ಮತ್ತು ಅವರಲ್ಲಿ ಮೃತರಾದವರಿಗಿಂತಲೂ  ಬದುಕುಳಿದ ನಿರಾಶ್ರಿತರು ಮತ್ತೆ ತಮ್ಮ ಜೀವನವನ್ನು ಪುನರಾರಂಭಿಸುವುದಿದೆಯಲ್ಲಾ, ಅದು ಅತ್ಯಂತ ಕಠಿಣ ಸವಾಲಾಗಿರುತ್ತದೆ. ಯೂ.ಎನ್. ನಿರ್ಮಿಸಿದ ಡೇರೆಗಳಲ್ಲಿ ಬದುಕನ್ನು ಪುನರಾರಂಭಿಸುವ ಈ ನಿರಾಶ್ರಿತರ ಯುವಕರು ನಿರುದ್ಯೋಗಿಗಳಾಗಿಯೂ, ಯುವತಿಯರು ಮಿಲಿಟರಿ ಪಡೆಗಳಿಂದಲೂ ಲೂಟಿಕೋರರಿಂದಲೂ ತಮ್ಮ ಮಾನ ರಕ್ಷಣೆಗಾಗಿ  ಹೆಣಗುವುದೂ ನಿರಂತರವಾಗಿ  ನಡೆಯುತ್ತಲೇ ಇರುವ ಪ್ರಕ್ರಿಯೆ. ಅವೆಲ್ಲಕ್ಕಿಂತಲೂ ಘೋರವಾದ ದುರಂತವೆಂದರೆ ಇನ್ನಷ್ಟೇ ಅರಳ ಬೇಕಿರುವ ಪುಟ್ಟ ಮುಗ್ಧ ಮಕ್ಕಳು ಅಶಿಕ್ಷಿತರಾಗಿ ಅಥವಾ ಅರೆ ಶಿಕ್ಷಿತರಾಗಿಯೇ ಉಳಿದು ಬಿಡುವುದು.. ಇದು ವಿಶ್ವದ ಅತೀ ದೊಡ್ಡ ದುರಂತ ವೆನ್ನಬಹುದು..

ನಿರಾಶ್ರಿತರು ಎಂದಾಕ್ಷಣ, ವಸತಿ, ಆಹಾರ, ವಸ್ತ್ರಗಳು ಮಾತ್ರವೇ ಅವರ ಅವಶ್ಯಕತೆಗಳೆಂದು ಸಾಮಾನ್ಯವಾಗಿ ಯೋಚಿಸಲಾಗುತ್ತದೆ. ಆದರೆ ನಿರಾಶ್ರಿತರು ತಮ್ಮ ನೆಲ- ನೆಲೆಯೊಂದಿಗೆ ಮಕ್ಕಳ ಭವಿಷ್ಯವನ್ನೂ ಕಳೆದುಕೊಂಡಿದ್ದಾರೆಂಬುದನ್ನು ಮರೆಯಲಾಗುತ್ತದೆ. ಆಹಾರ ವಸತಿಗಳೊಂದಿಗೆ ಶಿಕ್ಷಣವೂ ಮಕ್ಕಳ ಮೂಲಭೂತ ಹಕ್ಕಾಗಿದೆ. ಒಂದು ವೇಳೆ ನಿರಾಶ್ರಿತ ಮಕ್ಕಳಿಗೆ ಶಿಕ್ಷಣದ ಸೌಲಭ್ಯ ಕಲ್ಪಿಸದೇ ಹೋದಲ್ಲಿ ಎಷ್ಟು ದೊಡ್ಡ ಜನಸಂಖ್ಯೆ ಅಶಿಕ್ಷಿತ, ಅನಾಗರಿಕವಾದೀತು, ಆ ಮೂಲಕ ಸಮಾಜದ ಉತ್ತಮ ಭವಿಷ್ಯವಾಗಬೇಕಿದ್ದ ತಲೆಮಾರೊಂದು ಅಸ್ಥಿರವಾಗಿ, ಸಮಾಜಕ್ಕೆ ಎಷ್ಟು ದೊಡ್ಡ ಕಂಟಕಪ್ರಾಯವಾದೀತು ಎಂಬುವುದನ್ನು ಊಹಿಸಲೂ ಅಸಾಧ್ಯ.

0,,18715058_303,00ಇಂತಹಾ ನಿರಾಶ್ರಿತ ಸಮುದಾಯಕ್ಕೆ ಶಿಕ್ಷಣದ ಸೌಲಭ್ಯವೊದಗಿಸ ಹೊರಟ ಅಖೀಲಾ ಆಸಿಫೀ ಯವರ ಯಶೋಗಾಥೆ ಓದಲೇ ಬೇಕು. ಪಾಕಿಸ್ತಾನವೆಂದರೆ, ಶಿಕ್ಷಣದಲ್ಲಿ ಹಿಂದುಳಿದ ದೇಶವೆಂದೇ ಕುಖ್ಯಾತಿ. 1992ರಲ್ಲಿ ಅಫ್ಘಾನಿಸ್ತಾನದ ಕಾಬುಲ್ ನಿಂದ ನಿರಾಶ್ರಿತರಾಗಿ ಪಾಕಿಸ್ತಾನ ತಲುಪಿದ ಆಸಿಫೀ, ನಿರಾಶ್ರಿತ ಡೇರೆಗಳಲ್ಲಿ ಮಕ್ಕಳನ್ನು ಬಾಲಕಾರ್ಮಿಕರಾಗಿ, ಮತ್ತು ಹೆಣ್ಣುಮಕ್ಕಳನ್ನು ಲೈಂಗಿಕ ಕಾರ್ಯಕರ್ತೆಯರಾಗಿ ಬಳಸಲ್ಪಡುವುದನ್ನು ಕಂಡು ನೊಂದುಕೊಂಡರು. ವಿಶೇಷವಾಗಿ ದೇಶದ ಉಜ್ವಲ ಭವಿಷ್ಯವಾಗಬೇಕಿರುವ ಪುಟಾಣಿ ಮಕ್ಕಳು ಅಶಿಕ್ಷಿತರಾಗಿರುವುದನ್ನು ಕಂಡ ಈ ಶಿಕ್ಷಕಿ ನಿರಾಶ್ರಿತ ಡೇರೆಯಲ್ಲಿಯೇ ಕಲಿಕಾ ಕೇಂದ್ರ ಆರಂಭಿಸಿದರು. ಈ ಪುಟ್ಟ ಡೇರೆಗಳಿಂದ ಶಿಕ್ಷಣದ ಕಂಪು ಹರಡಿದಾಗ ಪಾಕಿಸ್ತಾನ ಸರಕಾರವೂ ಆಕೆಯ ಪ್ರಯತ್ನಕ್ಕೆ ಸಹಾಯ ಹಸ್ತ ಚಾಚಿತು. ಅಲ್ಲಿಂದ ಮುಂದೆ ಒಂದೆ ಡೇರೆಯಿಂದ ಹಲವಾರು ಡೇರೆಗಳನ್ನು ಶಾಲೆಯ ಕೊಠಡಿಗಳಾಗಿ ಪರಿವರ್ತಿಸಿದ ಆಸಿಫೀ, ಇಂದು ತನ್ನ ಸ್ವಂತ ಶಾಲಾ ಕಟ್ಟಡವನ್ನು ಹೊಂದಿದ್ದಾರೆ. ಒಂದು ಅಂಕಿ-ಅಂಶಗಳ ಪ್ರಕಾರ ವಿಶ್ವದ ನಿರಾಶ್ರಿತರಲ್ಲಿ ಮಕ್ಕಳ ಸಂಖ್ಯೆಯೇ ಶೇ. 50 ರಷ್ಟು  ಇದೆ!

ಅನಾಗರಿಕರಾಗಬಹುದಿದ್ದ, ಒಂದು ಅತಂತ್ರ ತಲೆಮಾರಿಗೆ ಶಿಕ್ಷಣದ ಭದ್ರ ಬುನಾದಿ ಹಾಕಿ ನೇರ ಹಾದಿ ತೋರುವ ಆಸಿಫೀಯಂತಹಾ ನಿಸ್ವಾರ್ಥ ಸೇವಕರ ಸಮಾಜ ಸೇವೆ ಗುರುತಿಸಲ್ಪಡಬೇಕು. ನಿರಾಶ್ರಿತರು, ಮತ್ತು ಅತಂತ್ರರಿಗೆ (ಅದು ವಲಸೆ ಹೋದವರಲ್ಲಿ ಆದೀತು ಅಥವಾ ಯುದ್ಧ, ಕ್ಷೋಭೆಗಳಿಂದ, ಅಥವಾ ದೊಂಬಿಗಳಿಂದ ಅತಂತ್ರರಾಗಿ ರಾಜ್ಯ, ದೇಶ ತೊರೆದವರಿಗೆ) ತತ್ಕಾಲ ಪರಿಹಾರ ಮಾತ್ರವೇ ಅಗತ್ಯವಲ್ಲ. ಪುನರ್ವಸತಿ, ಬದುಕುವ ಹಕ್ಕು ಎಂದರೆ, ಸಂಗ್ರಹಿಸಿದ ಯೂಸ್ಡ್ ವಸ್ತ್ರಗಳು, ಡೇರೆಗಳು ಮತ್ತು ಆಹಾರ ಪೊಟ್ಟಣಗಳು ಮಾತ್ರವಲ್ಲ, ಇನ್ನೂ ಬಹಳಷ್ಟಿವೆ ಎನ್ನುವುದನ್ನು ವಿಶ್ವ ಅರ್ಥ ಮಾಡಿಕೊಳ್ಳಬೇಕಿದೆ ಎಂಬ ಮೌನ ಸಂದೇಶ ನೀಡುವ ನಿಸ್ವಾರ್ಥ ನೈಜ ಶಿಕ್ಷಕಿ ‘ಅಖೀಲಾ ಆಸಿಫೀ’ ಗೆ ನನ್ನದೊಂದು ಸಲಾಂ.

nksw

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಕ್ರಿಕೆಟ್: ಉಡುಪಿಯ ಅಝಾನ್ ಸಾಧನೆ

ಮುಂದಿನ ಸುದ್ದಿ »

ದಾಳಿಂಬೆ: ಆರೋಗ್ಯಕ್ಕೂ.. ಸೌಂದರ್ಯಕ್ಕೂ..

ಸಿನೆಮಾ

 • bhavana

  ನಟಿ ಭಾವನಾರನ್ನು ಅಪಹರಿಸಿ, ಲೈಂಗಿಕ ಕಿರುಕುಳ ನೀಡಿದವನ ಬಂಧನ

  February 18, 2017

  ನ್ಯೂಸ್ ಕನ್ನಡ(18-2-2017): ಚಿತ್ರನಟಿ ಭಾವನಾ ಅವರನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳದ ಎರ್ನಾಕುಳಂನಲ್ಲಿ ಭಾವನಾ ಅವರನ್ನು ಅಪಹರಿಸಿದ್ದ ದುಷ್ಕರ್ಮಿಗಳು ಲೈಂಗಿಕ ಕಿರುಕುಳ ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾವನಾ ಅವರ ಕಾರು ಚಾಲಕನಾಗಿದ್ದ ...

  Read More
 • Marali Manege

  ಸೆನ್ಸಾರ್ ಮಂಡಳಿಯವರನ್ನೂ ಕಣ್ಣೀರು ಹಾಕಿಸಿದ ಚಿತ್ರ ಬಿಡುಗಡೆಗೆ ಸಿದ್ಧ

  February 16, 2017

  ಯೋಗೇಶ್ ಮಾಸ್ಟರ್ ನಿರ್ದೇಶನದ ಚಿತ್ರ ಸಂಘಪರಿವಾರ-ಪ್ರಗತಿಪರರ ಅಭಿಪ್ರಾಯವನ್ನೂ ಬದಲಿಸಬಹುದಂತೆ ನ್ಯೂಸ್ ಕನ್ನಡ ವರದಿ(16.02.2017)-ಮಂಗಳೂರು: ಯೋಗೇಶ್ ಮಾಸ್ಟರ್ ಅವರು ನಿರ್ದೇಶಿಸಿರುವ ‘ಮರಳಿ ಮನೆಗೆ’ ಕನ್ನಡ ಚಿತ್ರವು ಇದೀಗ ಚಿತ್ರರಂಗದಲ್ಲಿ ಹೊಸ ಸಂಚಲನವನ್ನು ಮೂಡಿಸಿದ್ದು, ನಾಯಕರ ವೈಭವೀಕರಣದ ಚಿತ್ರಗಳನ್ನೇ ನೋಡಿ ...

  Read More
 • kaabil-hoon-lyrics-title-song-hrithik-roshan-yami-gautam

  ಬಾಕ್ಸ್ ಆಫೀಸ್ ನಲ್ಲಿ “ಕಮಾಲ್” ಮಾಡಿದ “ಕಾಬಿಲ್”

  February 8, 2017

  ನ್ಯೂಸ್ ಕನ್ನಡ(8-2-2017): ಹೃತಿಕ್ ರೋಶನ್-ಯಾಮಿ ಗೌತಮ್ ನಟನೆಯ ಸಸ್ಪೆನ್ಸ್ ಥ್ರಿಲ್ಲರ್ ಚಲನಚಿತ್ರ “ಕಾಬಿಲ್” ಬಾಕ್ಸಾಫೀಸ್ ನಲ್ಲಿ ಕಮಾಲ್ ಮಾಡಿದ್ದು, ಸುಮಾರು 80 ಕೋಟಿ ರೂ. ಗಳಿಸಿದೆ. ವಿಮರ್ಶಕರಿಂದ ಉತ್ತಮ ಅಭಿಪ್ರಾಯ ಗಳಿಸಿದ ಕಾಬಿಲ್ ಎರಡನೆ ವಾರಾಂತ್ಯದಲ್ಲಿ 14.55 ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×