Friday November 27 2015

Follow on us:

Contact Us

ದೇಶದಲ್ಲಿ ನಿಜವಾಗಿಯೂ ಅಸಹಿಷ್ಣುತೆ ಇದೆಯೇ?

-ರುಖಿಯಾ ಎ ರಝಾಕ್

ಚಿಂತಕ ಕಲ್ಬುರ್ಗಿ ಹತ್ಯೆ, ದಾದ್ರಿ ಹತ್ಯೆ, ದಲಿತರ ದಹನಗಳನ್ನು ಖಂಡಿಸಿ ಚಿಂತಕರು, ಬರಹಗಾರರು, ಕಲಾವಿದರು ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸಿ ಪ್ರತಿಭಟಿಸಿದರು. ಇಷ್ಟರಲ್ಲಾಗಲೇ, ಪ್ರತಿಭಟನೆಯ ಕಾವು ಚಿತ್ರರಂಗಕ್ಕೂ ಹಬ್ಬಿತ್ತು. ಶಾರುಕ್ ಖಾನ್, ಆಮಿರ್ ಖಾನ್, ಅಮಿತಾಬ್ ಬಚ್ಚನ್, ಭಾರತದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿರುವುದರ ಕುರಿತು ಕಳವಳ ವ್ಯಕ್ತಪಡಿಸಿದರು. ಇಷ್ಟಕ್ಕೇ ‘ಅಸಹಿಷ್ಣುತೆ ಇದೆ’ ಎನ್ನುವ ಮುಸ್ಲಿಮ್ ನಾಮಾಂಕಿತರನ್ನು ತಕ್ಷಣವೇ ದೇಶ ತೊರೆದು ನೆರೆಯ ಪಾಕಿಸ್ತಾನ ಸೇರಲಿ ಎಂಬ ಪುಕ್ಕಟೆ ಕೀಳುಮಟ್ಟದ ಸಲಹೆಯನ್ನೂ ನೀಡಲಾಯಿತು. ಮತ್ತು ಹಿಂದೂಗಳ ಅಸಹಿಷ್ಣುತೆಯ ಹೇಳಿಕೆಗಳಿಗೆ ಜಾಣ ಕಿವುಡು ಪ್ರದರ್ಶಿಸಲಾಯಿತು. ಅದೇನೂ ಹೊಸದಲ್ಲ ಈ ನೆಲದಲ್ಲಿ. ಅಸಹಿಷ್ಣುತೆಯ ಹಿನ್ನೆಲೆಯಲ್ಲಿ ಬರಹಗಾರರ ‘ಪ್ರಶಸ್ತಿ ವಾಪಸಿ’ ಅಭಿಯಾನಕ್ಕೆ ನಿರ್ಲಕ್ಷ್ಯತೆಯ ವರ್ತನೆ ತೋರಲಾಯಿತು. ಪ್ರಶಸ್ತಿ ವಾಪಸು ನೀಡಿದವರನ್ನೇ ನಿಂದಿಸಲಾಯಿತು. ಅದರ ತೀವ್ರತೆ ಕಡಿಮೆಯಾಯಿತು ಎಂಬಷ್ಟರಲ್ಲಿ ಆಮಿರ್ ಖಾನ್ ರ ಹೇಳಿಕೆಯನ್ನು ಗಟ್ಟಿಯಾಗಿ ಹಿಡಿಯಲಾಯಿತು. ಆಮಿರ್ ರನ್ನು ದೇಶದ್ರೋಹಿ ಎನ್ನಲಾಯಿತು, ಆತನ ಕಪಾಳಕ್ಕೆ ಬಾರಿಸಿದವರಿಗೆ ಲಕ್ಷ ಬಹುಮಾನಗಳನ್ನು ನೀಡುವ ತೀರಾ ಕ್ರಿಮಿನಲ್ ರೀತಿಯ ಆಮಿಷವನ್ನೂ ನೀಡಲಾಯಿತು.

kiran-raobig1ಆದರೆ “ಆಮಿರ್” ಎಂಬ ಮುಸ್ಲಿಮ್ ನಾಮಧೇಯನ ಹೆಸರನ್ನು ಮುಂದಿರುಸುವಾಗ, ಆ ಹೇಳಿಕೆ ಒಬ್ಬ ‘ಹಿಂದೂ’ ಮಹಿಳೆ “ಕಿರಣ ರಾವ್” ರದ್ದಾಗಿತ್ತು, ದೇಶ ತೊರೆಯುವ ಅಭಿಪ್ರಾಯ ಒಬ್ಬ ಹಿಂದೂ ಮಹಿಳೆಯದ್ದಾಗಿತ್ತು ಎನ್ನುವುದನ್ನು ಮರೆಮಾಚಲಾಯಿತು. “ಸತ್ಯ ಮೇವ ಜಯತೇ” ಎಂಬ ಸರಣಿಯನ್ನು ಆರಂಭಿಸಿ ಸಮಾಜದ ಅನಿಷ್ಟಗಳ ತೆರೆ ಸರಿಸಿದ ಆಮಿರ್ ಗೆ ಜಯಕಾರ ಹಾಕಿದ ಅದೇ ಜನ, ಇಂದು ಕಿರಣ್ ರ ವೈಯಕ್ತಿಕ ಹೇಳಿಕೆಗಾಗಿ ಆಮಿರ್ ರನ್ನು ಗುರಿಯಾಗಿಸಿದರು. ಆದರೂ ಒಮ್ಮೆ ಹೇಳಿಕೆ ನೀಡಿ, ಪ್ರತಿರೋಧ ಎದುರಾದಾಗ ತನ್ನ ಇಮೇಜಿಗೆ ಕುಂದುಂಟಾಗಬಹುದೆಂದು ಯೋಚಿಸಿ ತನ್ನ ಹೇಳಿಕೆಯಿಂದ ಹಿಂದೆ ಸರಿಯುವ ಜಾಯಮಾನದವರಲ್ಲ ಆಮಿರ್, ತನ್ನ ಪತ್ನಿ ಕಿರಣ್ ರಾವ್ ರ ಆತಂಕವನ್ನು, ಕಳವಳವನ್ನು ವೇದಿಕೆಯೇರಿ, ಒಬ್ಬ ಗಟ್ಟಿಗನಂತೆ ಸಮರ್ಪಕ ರೀತಿಯಲ್ಲಿ ಸಮರ್ಥಿಸಿದರು.

ಆಮಿರ್ ರ ಕಾಳಜಿ, ಕಳಕಳಿ ಮುಸ್ಲಿಮರ ಕುರಿತಾಗಿ ಮಾತ್ರವಿಲ್ಲ ಬದಲಾಗಿ, ಹಿಂದೂ, ಮುಸ್ಲಿಂ, ಗಂಡು, ಹೆಣ್ಣು ಗಳ ಬೇಧ-ಭಾವವಿಲ್ಲದೇ, ದೇಶದ ಎಲ್ಲಾ ಶೋಷಿತರ ಪರವಾಗಿ ಇದೆ. ಅದನ್ನವರು ತಮ್ಮ “ಸತ್ಯಮೇವ ಜಯತೇ”ಯಲ್ಲಿ ಮತ್ತೆ ಮತ್ತೆ ಸಾಬೀತು ಪಡಿಸಿದ್ದಾರೆ. ಬದುಕುವ ಹಕ್ಕುಗಳಿಗೆ ಚ್ಯುತಿಯುಂಟು ಮಾಡುವುದು, ಆಹಾರದ ಹಕ್ಕನ್ನು ಕಸಿಯುವುದು, ತನ್ನ ಸಿದ್ಧಾಂತವನ್ನು ಇನ್ನೊಬ್ಬರ ಮೇಲೆ ಹೇರುವುದು, ಅಸಹಿಷ್ಣುತೆಯಲ್ಲದೇ ಇನ್ನೇನು?

ಹೌದು… ದೇಶದಲ್ಲಿ ಅಹಿಷ್ಣುತೆ ಇದೆ. ಇದನ್ನು ಯಾರೋ ಸೆಲೆಬ್ರಿಟಿಗಳ ಹೇಳಿಕೆಯಿಂದ ತಿಳಿಯಬೇಕಾಗಿಲ್ಲ. ದಾದ್ರಿ ಹತ್ಯೆಯ ಕ್ರೌರ್ಯ ದೇಶದಲ್ಲಿನ ಅಸಹಿಷ್ಣುತೆಯನ್ನು ಜಗಜ್ಜಾಹೀರುಗೊಳಿಸಿತು. ದೇವಳ ಪ್ರವೇಶಿಸಿದ 90 ರ ಹರೆಯದ ದಲಿತ ಚಿಮ್ಮು ಎಂಬ ವೃದ್ಧನ ದಹಿಸಲ್ಪಟ್ಟ  ದೇಹದ  ಕಮಟು ವಾಸನೆ ಇದನ್ನು ಸಾರಿ ಸಾರಿ ಹೇಳುತ್ತಿತ್ತು. ಹಾಗೆ ನೋಡಿದರೆ ಸ್ವಾತಂತ್ರ್ಯದೊರೆತ 6 ಮಾಸಗಳಲ್ಲೇ ಸ್ವಾತಂತ್ರ್ಯದ ಹರಿಕಾರ ರಾಷ್ಟ್ರಪಿತನ ಇರುವನ್ನೇ ಸಹಿಸದೆ ಹತ್ಯೆ ಮಾಡಿದವರ ಸಮರ್ಥಕರ ಕೈಯಲ್ಲಿ ಅಧಿಕಾರವಿರುವಾಗ, ಈ ಚಿಕ್ಕ ಪುಟ್ಟ ನಟರ ಹೇಳಿಕೆಗಳ ಕುರಿತು ಅಸಹಿಷ್ಣುತೆಗಳು ಸರ್ವೇ ಸಾಮಾನ್ಯ. ಆಡಳಿತ ಯಂತ್ರವು ಸಮಾಜದಲ್ಲಿ ಶಾಂತಿ-ಸೌಹಾರ್ದತೆ, ಲಾ ಆ್ಯಂಡ್ ಆರ್ಡರ್ ವೈಫಲ್ಯತೆಗೆ ಕಾರಣವಾಗಿದೆ. ಅದರ ವಿರುದ್ಧ ಪ್ರತಿಭಟಿಸುವುದನ್ನೂ ದೇಶ ದ್ರೋಹವೆನ್ನಲಾಗುತ್ತದೆ. ದೇಶದಲ್ಲಿ ಅಸಹಿಷ್ಣುತೆ, ಅರಾಜಕತೆಗಳನ್ನು ಮೌನವಾಗಿಯೇ ಸಹಿಸಬೇಕೆಂಬ ಧೋರಣೆಯೇ ಅಸಹಿಷ್ಣುತೆಯ ಹೇಳಿಕೆಗೆ ತೀವ್ರ ಪ್ರತಿರೋಧ ವ್ಯಕ್ತವಾಗಲು ಕಾರಣವಾಗಿದೆ. sahitya-academi1ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆಯೆನ್ನುವ ವಾಸ್ತವ ಸಂಗತಿ ಸ್ವತಃ ಪೀತ ಪಕ್ಷಕ್ಕೂ ಅದರ ಭಕ್ತಾಭಿಮಾನಿಗಳಿಗೂ ತಿಳಿಯದ್ದೇನಲ್ಲ. ಆದರೂ ತನ್ನ ನಿರಂಕುಶ ಧೋರಣೆಯಿಂದ ಹಿಂದೆ ಸರಿದು ಕಾನೂನು ಸುವ್ಯವಸ್ಥೆ ಕಾಪಾಡಬೇಕಿದ್ದ ಪಕ್ಷ ಜನರ ಸದ್ದಡಗಿಸುವ ಹೀನ ಮಟ್ಟಕ್ಕೆ ತಲುಪಿದ್ದು ದುರಂತವೇ ಸರಿ, ಈ ರೀತಿಯ ಧೋರಣೆ ರಾಜಾಡಳಿತದ ಕಾಲದಲ್ಲಾಗಿದ್ದರೆ ಅದನ್ನು ಸ್ವೀಕರಿಸದೇ ವಿಧಿಯಿಲ್ಲವೆನ್ನಬಹುದಿತ್ತು, ಆದರಿದು ಪ್ರಜಾಪ್ರಭುತ್ವ ಸರಕಾರವಾಗಿರುವಾಗ ಈ ಧೋರಣೆ ಖಂಡಿತಾ ಸ್ವೀಕಾರಾರ್ಹವಲ್ಲ. ಈ ನಿರಂಕುಶ ಧೋರಣೆ ಇದೇ ರೀತಿ ಮುಂದುವರಿದರೆ, “ಅಚ್ಛೇದಿನ್” ಪೊಳ್ಳು ಆಶ್ವಾಸನೆ ನೀಡುತ್ತಾ ಗಾದಿಗೇರಿದ್ದ ಪಕ್ಷದ ಅದಕ್ಷತೆಯಿಂದ ಮುಂದೊಂದು ದಿನ ಈ ಪಕ್ಷಕ್ಕೇ “ಬುರೇ ದಿನ್” ಬರವುದರಲ್ಲಿ ಸಂದೇಹವಿಲ್ಲ.

nksw

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಅಸಹಿಷ್ಣುತೆ ವಿಚಾರ- ಯುವ ಲೇಖಕರಿಂದ ಬೆಂಗಳೂರು ಲಿಟರೇಚರ್ ಫೆಸ್ಟಿವಲ್ ಗೆ ಬಹಿಷ್ಕಾರ

ಮುಂದಿನ ಸುದ್ದಿ »

ಹಳ್ಳಿಯ ಮಕ್ಕಳಿಗೆ 3,055 ಗ್ರಂಥಾಲಯ ತೆರೆದ ಪ್ರಾಮಾಣಿಕ ಸಮಾಜಸೇವಕ ಪ್ರದೀಪ್ ಲೋಖಂಡೆ

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×